ಬಿಎಸ್‌ವೈಗೆ ಸಿಗದ ಅದೃಷ್ಟದ ಮನೆ

7
ದೊರೆಯದ ರೇಸ್‌ವ್ಯೂ ಕಾಟೇಜ್‌ನ ಬಂಗಲೆ

ಬಿಎಸ್‌ವೈಗೆ ಸಿಗದ ಅದೃಷ್ಟದ ಮನೆ

Published:
Updated:
ಯಡಿಯೂರಪ್ಪ

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕೊನೆಗೂ ಅದೃಷ್ಟ ಬಂಗಲೆ ಕೈತಪ್ಪಿದೆ.

ತಮ್ಮ ಪಾಲಿಗೆ ಅದೃಷ್ಟದ್ದು ಎನಿಸಿದ್ದ ರೇಸ್‌ವ್ಯೂ ಕಾಟೇಜ್‌ನ ಎರಡನೇ ನಂಬರ್‌ ಬಂಗಲೆಯನ್ನು ಕೊಡುವಂತೆ ಯಡಿಯೂರಪ್ಪ  ಕೇಳಿದ್ದರು. ಆದರೆ, ಅವರಿಗೆ ಆ ಬಂಗಲೆಗೆ ಪ್ರವೇಶಿಸುವ ಯೋಗ ಒಲಿದುಬರಲಿಲ್ಲ.

‘ಎರಡನೇ ನಂಬರ್ ಬಂಗಲೆ ನೀಡುವಂತೆ ಈ ಹಿಂದೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಆದರೆ, ನನ್ನ ಕೋರಿಕೆಯನ್ನು ಅವರು ಮನ್ನಿಸಲಿಲ್ಲ. ಹೀಗಾಗಿ, ನನಗೆ ಕೊಡಲಾಗಿದ್ದ ನಾಲ್ಕನೇ ನಂಬರ್‌ನ ಬಂಗಲೆಯನ್ನೂ ತಿರಸ್ಕರಿಸಿದ್ದೇನೆ. ಸ್ವಂತ ಮನೆಯಲ್ಲೇ ಇರಲು ನಿರ್ಧರಿಸಿದ್ದೇನೆ’ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ರೇಸ್‌ವ್ಯೂ ಕಾಟೇಜ್‌ನ ಎರಡನೇ ನಂಬರ್‌ ಬಂಗಲೆ ಹಂಚಿಕೆಯಾಗಿತ್ತು. ಅದೇ ಬಂಗಲೆಯಲ್ಲಿದ್ದಾಗ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ, ಅದೇ ಮನೆ ಬೇಕು ಎಂದು ಪಟ್ಟು ಹಿಡಿದ್ದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಆಪ್ತರಾಗಿರುವ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಅವರಿಗೆ ಈ ಬಂಗಲೆ ಸಿಕ್ಕಿದೆ. ಲೋಕೋ‍ಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಕುಮಾರ ಕೃಪಾ ಪೂರ್ವದಲ್ಲಿರುವ ಒಂದನೇ ನಂಬರ್‌ ಬಂಗಲೆ ನೀಡಲಾಗಿದೆ. ಇದೇ ಮನೆ ಕೊಡುವಂತೆ ರೇವಣ್ಣ ಪಟ್ಟು ಹಿಡಿದಿದ್ದರು.

ಹಿಂದಿನ ಸರ್ಕಾರದಲ್ಲೂ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಇದುವರೆಗೂ ಸದಾಶಿವಗರದ ತಮ್ಮ ಸ್ವಂತ ಮನೆಯಲ್ಲಿದ್ದರು. ಈಗ ಅವರಿಗೆ ಕ್ರೆಸೆಂಟ್‌ ರಸ್ತೆಯಲ್ಲಿ ಮೂರನೇ ನಂಬರ್‌ ಬಂಗಲೆ ಮಂಜೂರಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್‌.ಕೆ. ಪಾಟೀಲರು ಈ ಮನೆಯಲ್ಲಿ ವಾಸವಾಗಿದ್ದರು.   
*

ರೇಸ್‌ವ್ಯೂ ಕಾಟೇಜ್‌ನ ಎರಡನೇ ನಂಬರ್‌ ಬಂಗಲೆಯೇ ಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರು. ಆದರೆ, ಈಗ ಡಾಲರ್ಸ್‌ ಕಾಲೊನಿಯ ಸ್ವಂತ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !