ಅತಿ ಎತ್ತರದ ಬುದ್ಧನ ಪ್ರತಿಮೆ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಅತಿ ಎತ್ತರದ ಬುದ್ಧನ ಪ್ರತಿಮೆ

Published:
Updated:
Prajavani

ದಿ ಸ್ಪ್ರಿಂಗ್ ಟೆಂಪಲ್ ಬುದ್ಧನ ಪ್ರತಿಮೆ ವಿಶ್ವದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದು. ಇದು ಒಟ್ಟು 126 ಮೀಟರ್‌ ಎತ್ತರವಿದೆ. ಈ ಪ್ರತಿಮೆಯು 20 ಮೀಟರ್‌ ಎತ್ತರದ ಕಮಲದ ಮೇಲೆ ನಿಂತಿದೆ.

ಇದನ್ನು 2002ನೇ ಇಸವಿಯಲ್ಲಿ 5.5 ಕೋಟಿ ಡಾಲರ್‌ (ಅಂದಾಜು ₹ 380 ಕೋಟಿ) ವೆಚ್ಚದಲ್ಲಿ ನಿರ್ಮಿಸಲಾಯಿತು. ಇದು ಚೀನಾದ ಝಾವೊಕನ್‌ ಪಟ್ಟಣದಲ್ಲಿದೆ. ಇದು ಬುದ್ಧನ ವೈರೋಚನ ರೂಪವನ್ನು ತೋರಿಸುತ್ತದೆ. ಈ ಪ್ರತಿಮೆಯನ್ನು ತಾಮ್ರದ 1,100 ತುಂಡುಗಳಿಂದ ಮಾಡಲಾಗಿದೆ, ಇದರ ತೂಕ 1000 ಟನ್‌ ಎನ್ನಲಾಗಿದೆ. ಈ ಪ್ರತಿಮೆ ನಿರ್ಮಿಸಲು ಸರಿಸುಮಾರು ಒಂದು ದಶಕ ಬೇಕಾಯಿತು.

ಈ ಪ್ರತಿಮೆಯ ಸಮೀಪದಲ್ಲಿ ಒಂದು ಬಿಸಿ ನೀರಿನ ಬುಗ್ಗೆ ಇದೆ. ಈ ಬುಗ್ಗೆಯಿಂದ ಚಿಮ್ಮುವ ನೀರಿಗೆ ರೋಗ ನಿವಾರಕ ಶಕ್ತಿ ಇದೆ ಎಂಬ ನಂಬಿಕೆ ಇದೆ. ಇಲ್ಲಿರುವ ಫೊಕಾನ್ ದೇವಾಲಯದಲ್ಲಿ ಇರುವ ಕಂಚಿನ ‘ಬೆಲ್ ಆಫ್ ಗುಡ್ ಲಕ್’ ಗಂಟೆಯು 116 ಟನ್ ತೂಗುತ್ತದೆ. ಫೊಕಾನ್ ದೇವಾಲಯವನ್ನು ತಾಂಗ್ ವಂಶದ ಆಡಳಿತದ ಸಮಯದಲ್ಲಿ ನಿರ್ಮಿಸಲಾಯಿತು.

ನಿಮಗಿದು ಗೊತ್ತಾ?

ವಿಶ್ವದ ಅತಿದೊಡ್ಡ ಕಲ್ಲಿನ ಬುದ್ಧ ಪ್ರತಿಮೆಯ ಕೆತ್ತನೆ ಆಗಿದ್ದು ಕೂಡ ತಾಂಗ್ ವಂಶದ ಆಡಳಿತ ಕಾಲದಲ್ಲೇ. ಇದು ಸರಿಸುಮಾರು 70 ಮೀಟರ್‌ಗಳಷ್ಟು ಎತ್ತರವಾಗಿದ್ದು, ಕುಳಿತ ಭಂಗಿಯಲ್ಲಿದೆ. ಈ ಪ್ರತಿಮೆಯು ಮಿಂಜಿಯಾಂಗ್, ದಾದು ಮತ್ತು ಕ್ವಿಂಗ್ಯಿ ನದಿಗಳ ಸಂಗಮ ಸ್ಥಾನದಲ್ಲಿ ಇದೆ. ಈ ಸಂಗಮ ಸ್ಥಾನ ಇರುವುದು ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ. ಈ ಪ್ರತಿಮೆ ನಿರ್ಮಾಣ ಕಾರ್ಯವನ್ನು ಹೈತಾಂಗ್ ಎಂಬ ಭಿಕ್ಕು ಕ್ರಿ.ಶ. 713ರಲ್ಲಿ ಆರಂಭಿಸಿದ. ಆದರೆ ಹಣದ ಕೊರತೆಯ ಕಾರಣ ಕ್ರಿ.ಶ. 803ರವರೆಗೆ ಪ್ರತಿಮೆ ನಿರ್ಮಾಣ ಕೆಲಸ ಪೂರ್ಣಗೊಳ್ಳಲಿಲ್ಲ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !