ದಲಿತರಿಗೆ ಶೇ 24 ಅನುದಾನಕ್ಕೆ ಆಗ್ರಹ

4

ದಲಿತರಿಗೆ ಶೇ 24 ಅನುದಾನಕ್ಕೆ ಆಗ್ರಹ

Published:
Updated:

ಬೆಂಗಳೂರು: ‘ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 24.2 ಅನುದಾನ ಮೀಸಲಿಡಬೇಕು’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದಿನ ಕಾಂಗ್ರೆಸ್ ಸರ್ಕಾರ ದಲಿತರ ಜನಸಂಖ್ಯೆಗೆ ಪೂರಕವಾಗಿ ಹಣ ಮೀಸಲಿಡುವ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿತ್ತು. ಅದನ್ನು ಮೈತ್ರಿ ಸರ್ಕಾರ ಮುಂದುವರಿಸಬೇಕು’ ಎಂದರು.

‘ರೈತರ ಸಾಲ ಮನ್ನಾ ಮಾಡಲಿ. ಆದರೆ, ಅದಕ್ಕೆ ನಮ್ಮ ಯೋಜನೆಗಳ ಹಣ ಕಡಿತ ಮಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ವಿಶೇಷ ಘಟಕ ಯೋಜನೆಗಳ ಅನುದಾನ ಕಡಿತ ಮಾಡಬಾರದು’ ಎಂದು ಆಗ್ರಹಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !