ರಾಜ್ಯ ಬಜೆಟ್‌: ಜನರು ಏನಂತಾರೆ?

7

ರಾಜ್ಯ ಬಜೆಟ್‌: ಜನರು ಏನಂತಾರೆ?

Published:
Updated:
Prajavani

ಸ್ವಾಗತಾರ್ಹ

ರೈತರ ಹಿತ ಅಭಿವೃದ್ಧಿಗೆ ಕುಮಾರಸ್ವಾಮಿ ಬಜೆಟ್ ಕೊಡುಗೆ ನೀಡಿದ್ದು ಸ್ವಾಗತಾರ್ಹ ಆದರೆ ಪರಿಶಿಷ್ಟ ಜಾತಿ ಪರಿಶಿಷ್ಟಪಂಗಡಗಳಿಗೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕಿತ್ತು ಹಾಗೂ ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿದ್ದು ಇದರಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿತ್ತು

–ರವೀಂದ್ರ, ಹನೂರು

ಅಲ್ಪ ಪ್ರಮಾಣದ ಬಜೆಟ್‌

ಅಧಿಕಾರಕ್ಕೆ ಬರುವ ಮೊದಲಿನಿಂದಲೂ ರೈತಪರವಾದ ಸರ್ಕಾರ ನಿರ್ಮಿಸುತ್ತೇವೆ ಎಂದು ಹೇಳುತ್ತಿದ್ದ ಮೈತ್ರಿ ಸರ್ಕಾರದಿಂದ ರಾಜ್ಯದ ರೈತರು ಅಪಾರ ನಿರೀಕ್ಷೆಯಿಟ್ಟಿದ್ದರು. ಅವರ ಭರವಸೆಗೆ ತಕ್ಕಂತೆ ರೈತರಿಗೆ ತಕ್ಕ ಯೋಜನೆಗಳನ್ನು ಅಲ್ಪ ಮಟ್ಟಿಗೆ ಮಾತ್ರ ನೀಡಿದೆ. ಹಾಲಿನ ದರವನ್ನು ಒಂದೂ ರೂ ಏರಿಕೆ ಮಾಡದ್ದು ಇದರಲ್ಲಿ ಒಂದಾಗಿದೆ.

–ಜಗದೀಶ್ ರೈತ, ಕಣ್ಣೂರು. 

ಹೆಚ್ಚಿನ ಅನುದಾನ ಇಲ್ಲ

ಹಿಂದುಳಿದ ಜಿಲ್ಲೆಯಾಗಿರುವ ಚಾಮರಾಜನಗರಕ್ಕೆ ಈ ಬಾರಿಯ ಬಜೆಟ್್ನಲ್ಲಿ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ಗಡಿಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿಲ್ಲ.

–ಲಲಿತಾ, ಹನೂರು

ಉತ್ತಮ ಬಜೆಟ್‌

ಸಮ್ಮಿಶ್ರ ಸರ್ಕಾರದ ಬಜೆಟ್ ಉತ್ತಮವಾಗಿದೆ. ರೈತರಿಗೆ ಉಪಯೋಗವಾಗುವ ಯೋಜನೆಗಳಿವೆ. ಕಾಡಂಚಿನ ಗ್ರಾಮಗಳ ಮತ್ತು ಮಾನವ ಸಂಘರ್ಷವನ್ನು ತಡೆಯಲು ಆದ್ಯತೆ ನೀಡಲಾಗಿದೆ, ಮಾತೃಶ್ರಿ ಯೋಜನೆಯಲ್ಲಿ ಸಹಾಯ ಧನವನ್ನು ಹೆಚ್ಚಳ ಮಾಡಲಾಗಿದೆ. ಒಟ್ಟಾರೆಯಾಗಿ ಬಡ ಮತ್ತು ಮದ್ಯಮ ಜನರಿಗೆ ಹೆಚ್ಚಿನ ಅನುಕೂಲವಾಗುವ ಬಜೆಟ್

–ಗಿರೀಶ, ಲಕ್ಕೂರು.

ಚುನಾವಣಾ ಗಮನದ ಬಜೆಟ್‌

ಬಜೆಟ್ ಅಭಿವೃದ್ಧಿ ಪರ ಎನಿಸಿದರು ಸಹ ನಿರುದ್ಯೋಗ ಸಮಸ್ಯೆ ವಿಪರೀತವಾಗಿ ಬೆಳೆದಿದೆ ಅದರ ಬಗ್ಗೆ ಒಂದು ಮಾತಿಲ್ಲ, ಉದ್ಯೋಗಾಂಕ್ಷಿಗಳಿಗೆ ಇದೊಂದು ನಿರಾಶದಾಯಕ ಬಜೆಟ್. ಕೇವಲ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಬಜೆಟ್ ಮಾಡಿದಂತಿದೆ

–ಶಿವು, ಹಿರಿಕಾಟಿ.

ಕೊರತೆಯ ಬಜೆಟ್‌

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಅನೆಕ ಕಟ್ಟಡಗಳಿವೆ. ನರ್ಸ್, ವೈದ್ಯರ ಮತ್ತು ಮೂಲ ಸೌಕರ್ಯಗಳ ಕೊರತೆ ಇದೆ. ಇವುಗಳನ್ನು ಸರಿದೂಗಿಸುವಂತ ಬಜೆಟ್ ಬೆಕಿತ್ತು. ಕಟ್ಟಡಗಳನ್ನು ಕಟ್ಟಿದರೆ ಏನು ಪ್ರಯೋಜನ? ಇರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಕಡುಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಿದೆ

–ಶ್ಯಾಮ್, ಮಗುವಿನಹಳ್ಳಿ

ಕೇಂದ್ರ ಬಜೆಟ್‌ಗಿಂತ ಉತ್ತಮ

ಮೋದಿ ಬಜೆಟ್‌ಗಿಂತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ ಪರವಾಗಿಲ್ಲ. ಜಿಲ್ಲೆಯ ರೇಷ್ಮೆ ಉದ್ಯಮ ಉಳಿಸುವ ಪ್ರಯತ್ನ ನಡೆದಿದೆ. ರೈತರಿಗೆ ಅನುಕೂಲವಾಗಿದೆ. ಈ ಬಜೆಟ್‌ನಲ್ಲಿ ಸಚಿವರ ಪ್ರಭಾವವಿಲ್ಲ. ಚಾಮರಾಜನಗರ ಜಿಲ್ಲೆಗೆ ಹೆಚ್ಚಿನ ಅನುದಾನ ಬೇಕಿತ್ತು.

–ಲಕ್ಷ್ಮಿನರಸಿಂಹ, ಚಾಮರಾಜನಗರ 

ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿತ್ತು

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೀರಾವರಿಗೆ ₹17 ಸಾವಿರ ಕೋಟಿ ಅನುದಾನ ನೀಡಿರುವುದರಿಂದ ಕೆರೆ ಕಟ್ಟೆಗಳ ನೀರು ತುಂಬಿಸಲು ಅನುಕೂಲವಾಗಿದೆ. ಇದರಿಂದ ಅಂತರ್ಜಲ ವೃದ್ಧಿಸಿ ಕೃಷಿಗೆ ನೆರವಾಗಲಿದೆ. ನದಿ ಮತ್ತು ಕಾಲುವೆ ಅಭಿವೃದ್ಧಿ, ಬ್ಯಾರೆಜ್ ನಿರ್ಮಾಣ ರೈತರಿಗೆ ವರದಾನವಾಗಲಿದೆ. ನೀರು ಮರುಪೂರಣಕ್ಕೆ ₹ 200 ಕೋಟಿ ನೀಡಿರುವುದು ಸಮಾಧಾನ ತಂದಿದೆ. ಚಾಮರಾಜನಗರ ಜಿಲ್ಲೆಯ ಕೆರೆ ಅಭಿವೃದ್ಧಿ ವ್ಯಾಪ್ತಿಗೆ ಈ ಯೋಜನೆಯನ್ನು ತಂದರೆ ಅನುಕೂಲವಾಗುತ್ತಿತ್ತು. ಯಳಂದೂರು ದೊಡ್ಡ ಕೆರೆಗಳ ಅಭಿವೃದ್ಧಿಗೂ ಆದ್ಯತೆ ನೀಡಬೇಕಿತ್ತು.

-ನಂಜೇಗೌಡ ಕೃಷಿಕ, ಬಿಳಿಗಿರಿರಂಗನಬೆಟ್ಟ

ಸಮಾಧಾನ ತಂದ ಬಜೆಟ್

ಇ–ಆಡಳಿತ ವ್ಯವಸ್ಥೆಯ ಭಾಗವಾಗಿ ಎಲ್ಲಾ ಇಲಾಖೆಗಳ ಫಲಾನುಭವಿಗಳಿಗೆ ಆಧಾರ್ ಆಧಾರಿತ ‘ನೇರ ನಗದು ವರ್ಗಾವಣೆ’ ತಂದಿರುವುದು ಒಳ್ಳೆಯ ಬೆಳವಣಿಗೆ. ಆಡಳಿತದಲ್ಲಿ ಚಾಟ್‌ಬೋಟ್ ಮತ್ತು ಬಿಗ್‌ಡಾಟ ತಂತ್ರಜ್ಞಾನ ಅಳವಡಿಸಿಕೊಳ್ಳಲು ನೆರವು ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಪರಿಶಿಷ್ಟರು ಮತ್ತು ಸಾಮಾನ್ಯ ವರ್ಗದವರ ಸಂಯುಕ್ತ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ₹100 ಕೋಟಿ ನೀಡಿರುವುದು ಅನುಕಾಲವಾಗಲಿದೆ. ನಿವೃತರ ವಯೋಮಿತಿ ಏರಿಕೆ ಮಾಡಬೇಕಿತ್ತು.

-ಸೋಮಶೇಖರ ನಾಯಕ, ದೇವಾಂಗಬೀದಿ, ಯಳಂದೂರು

ಸ್ತ್ರೀ ಕಲ್ಯಾಣಕ್ಕೆ ಉತ್ತಮ ಕೊಡುಗೆ

ಮಾತೃಶ್ರೀ ಯೋಜನೆ ಅಡಿಯಲ್ಲಿ ₹ 1 ಸಾವಿರ ಸಹಾಯಧನವನ್ನು ₹ 2 ಸಾವಿರಕ್ಕೆ ಏರಿಕೆ ಮಾಡುವ ಮೂಲಕ ಮಹಿಳೆಯರು, ಅಂಗವಿಕಲರು ಮತ್ತು ಸಮಾಜ ಕಲ್ಯಾಣಕ್ಕೆ ಅನುದಾನ ನೀಡಿರುವುದು ಒಳ್ಳೆಯ ಬೆಳವಣಿಗೆ. ಅದೇ ರೀತಿ ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ₹ 250 ಹೆಚ್ಚಳ ಮಾಡಿರುವುದನ್ನು ಇನ್ನಷ್ಟು ಏರಿಸಬೇಕಿತ್ತು. ದಮನಿತ ಮಹಿಳೆಯರ ಕಲ್ಯಾಣಕ್ಕಾಗಿ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ 1 ಸಾವಿರ ಸ್ತ್ರೀಯರಿಗೆ ಉತ್ಪಾದನಾ ಘಟಕ ಸ್ಥಾಪಿಸಲು ₹11 ಕೋಟಿ ವೆಚ್ಚ ಮಾಡುತ್ತಿರುವುದು ಉತ್ತಮ ಯೋಜನೆ.

–ಎಂ. ಸ್ವಾತಿ, ವಿದ್ಯಾರ್ಥಿನಿ, ಯಳಂದೂರು

 ಅಭಿವೃದ್ಧಿ ಕಡೆಗಣನೆ

ಈ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗೆಣಿಸಲಾಗಿದೆ. ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ ಅನುದಾನ ನೀಡಿರುವುದು ಸ್ವಾಗತಾರ್ಹ. ಉಳಿದಂತೆ ಕೃಷಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳನ್ನು ಉದಾಸೀನ ಮಾಡಿರುವುದು ದುರದೃಷ್ಟಕರ. ರೈತರ ಸಾಲದ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ರೈತರ ಕೃಷಿ ಅಭಿವೃದ್ಧಿಯ ನೀರಾವರಿಗೆ ಗಮನ ಹರಿಸಿಲ್ಲ. ಬಜೆಟ್‌ನಲ್ಲಿ ಯಾವುದೇ ತಿರುಳು ಇಲ್ಲ. ಇದು ನಿರಾಶಾದಾಯಕ ಬಜೆಟ್.

–ಬಸವಣ್ಣ, ರೈತಮುಖಂಡ, ಸಂತೇಮರಹಳ್ಳಿ

ನಿರೀಕ್ಷೆ ಹುಸಿಯಾಗಿದೆ

ರೇಷ್ಮೆ ಕಾರ್ಖಾನೆ ಪುನಾರಾರಂಭ ಮತ್ತು ಯುವಕರಿಗೆ ತರಬೇತಿ ಕೇಂದ್ರ ಘೋಷಣೆ ಮಾಡಿರುವುದು ಸ್ವಾಗತಾರ್ಹ. ರೇಷ್ಮೆಗೆ ಹೆಸರುವಾಸಿಯಾಗಿರುವ ಕೊಳ್ಳೇಗಾಲಕ್ಕೆ ಲಾಭದಾಯಕವಾಗುತ್ತದೆ. ಇನ್ನೂ ಸಹ ಹೆಚ್ಚಿನ ನಿರೀಕ್ಷೆಯನ್ನು ಇಟ್ಟು ಕೊಂಡಿದ್ದೆ.

–ಸುನೀತ, ವಿದ್ಯಾರ್ಥಿನಿ, ಕೊಳ್ಳೇಗಾಲ

ಪ್ರವಾಸೋದ್ಯಮದ ನಿರ್ಲಕ್ಷ್ಯ

ಮಹದೇಶ್ವರ ಬೆಟ್ಟ ಮತ್ತು ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬಹುದಿತ್ತು. ಯುವಕರು ಕೃಷಿಯನ್ನೇ ನಂಬಿ ಜೀವನ ನಡೆಸಲು ಸಾಧ್ಯವಿಲ್ಲವಾದ್ದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಒತ್ತು ನೀಡಬಹುದಿತ್ತು.

–ಶೋಭ, ಕೊಳ್ಳೇಗಾಲ

ಜಿಲ್ಲೆಗೆ ಕೊಡುಗೆಗಳಿಲ್ಲ

ಬಜೆಟ್‍ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವುದೇ ಪ್ಯಾಕೇಜ್‍ಗಳ ಯೋಜನೆಗಳು ಇಲ್ಲ. ಹಿಂದುಳಿದ ಜಿಲ್ಲೆ ಹಿಂದುಳಿದ ಜಿಲ್ಲೆಯೇ ಆಗಿರಬೇಕು ಎಂಬ ಉದ್ದೇಶ ಸರ್ಕಾರಕ್ಕೆ ಇದ್ದಂತಿದೆ.

–ಸ್ಫೂರ್ತಿ, ಶಿಕ್ಷಕಿ, ಕೊಳ್ಳೇಗಾಲ

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !