ಮೀಸಲು ಪ್ರದೇಶ: ವಿಚಾರಣೆ 8ಕ್ಕೆ

7

ಮೀಸಲು ಪ್ರದೇಶ: ವಿಚಾರಣೆ 8ಕ್ಕೆ

Published:
Updated:

ಬೆಂಗಳೂರು: ಬೆಳ್ಳಂದೂರು-ಅಗರ ಕೆರೆಗಳ ವ್ಯಾಪ್ತಿಯಲ್ಲಿ ಕೆರೆಯ ಮೀಸಲು ಪ್ರದೇಶದ ನಿಯಮ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳಿಗೆ ಸಂಬಂಧಪಟ್ಟ ಆದೇಶಕ್ಕೆ ಸುಪ್ರೀಂಕೋರ್ಟ್‌ ಇದೇ 8 ರಂದು ಅಂತಿಮ ವಿಚಾರಣೆ ನಡೆಸಲಿದೆ.

’ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಆದೇಶವನ್ನು ವಜಾಗೊಳಿಸುವಂತೆ ಕೋರಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ನಾಗರಿಕರ ಹಕ್ಕುಗಳನ್ನು ಹತ್ತಿಕ್ಕಲು ಬಿಲ್ಡರ್ಸ್‌ ಜತೆಗೂಡಿ ದುಬಾರಿ ವಕೀಲರನ್ನು ನೇಮಿಸಲು ಹೊರಟಿದೆ’ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನವು ಆಕ್ರೋಶ ವ್ಯಕ್ತಪಡಿಸಿದೆ.

‘ಕೆರೆಯ ಮೀಸಲು ಪ್ರದೇಶದಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಹಸಿರು ಪೀಠ ಆದೇಶ ಹೊರಡಿಸಿದೆ. ಆದರೂ, ಮಂತ್ರಿ ಟೆಕ್‌ಜೋನ್, ಕೋರ್‌ ಮೈಂಡ್ ಸಾಫ್ಟ್‌ವೇರ್ ಸರ್ವೀಸಸ್ ಮತ್ತು ಪಟ್ಟಭದ್ರಹಿತಾಸಕ್ತಿಗಳ ರಕ್ಷಣೆಗಾಗಿ ಸರ್ಕಾರ ಮುಂದಾಗಿದೆ’ ಎಂದು ಸಂಸದ ರಾಜೀವ್‌ ಚಂದ್ರಶೇಖರ್‌ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸರ್ಕಾರ ನೇಮಿಸಿರುವ ವಕೀಲರು
ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣಿಯನ್, ದುಷ್ಯಂತ್ ದಾವೆ, ನೀರಜ್ ಕಿಶನ್ ಕೌಲ್, ಆರ್. ವೆಂಕಟ್ರಮಣಿ. ಉದಯ್ ಹೊಳ್ಳ, ಬಸವ ಪ್ರಭು ಪಾಟೀಲ್, ಕಿರಣ್ ಸೂರಿ, ಶಶಿಕಿರಣ್ ಶೆಟ್ಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !