ಶನಿವಾರ, ನವೆಂಬರ್ 16, 2019
21 °C

ನಾಳೆ ‘ಬಂಟರಾತಿಥ್ಯ’

Published:
Updated:

ಬೆಂಗಳೂರು: ‘ಬೆಂಗಳೂರು ಬಂಟರ ಹೋಟೆಲ್‌ ಮಾಲೀಕರ ಸಂಘ’ದ ಆಶ್ರಯದಲ್ಲಿ ಬಂಟ ಹೋಟೆಲಿಗರ ಪ್ರಥಮ ಸಮ್ಮಿಲನ ‘ಬಂಟರಾತಿಥ್ಯ’ ವಿಜಯನಗರದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನದಲ್ಲಿ ಇದೇ 8ರಂದು ನಡೆಯಲಿದೆ.

ಸಂಘದ ಅಧ್ಯಕ್ಷ ಮಧುಕರ ಎಂ. ಶೆಟ್ಟಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಾರ್ಯಕ್ರಮದಲ್ಲಿ ಹೋಟೆಲ್‌ ಉದ್ಯಮದ ಬಗ್ಗೆ ಯುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಕೆ.ಜಯಪ್ರಕಾಶ್‌ ಹೆಗ್ಡೆ ಉದ್ಘಾಟಿಸುವರು. ಬಳಿಕ ಹೋಟೆಲ್ ಉದ್ಯಮದ ಕುರಿತು ವಿಚಾರಸಂಕಿರಣ ನಡೆಯಲಿದೆ. ‘ಕುರುಕ್ಷೇತ್ರಕ್ಕೊಂದು ಆಯೋಗ’ ಯಕ್ಷ ಪ್ರಯೋಗ ಹಾಗೂ ‘ಎಲ್ಲಾ ಸಮಾ ಅತ್ತ್‌’ ನಗೆ ನಾಟಕ ಇರಲಿದೆ. ಸಂತೋಷ್‌ ಕುಮಾರ್‌ ಹೆಗ್ಡೆ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

‘ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ವಿ.ಸೋಮಣ್ಣ, ಸಿ.ಟಿ.ರವಿ ಭಾಗವಹಿಸುವರು’ ಎಂದರು.

 

 

 

ಪ್ರತಿಕ್ರಿಯಿಸಿ (+)