ಕಳಚಿದ ಬಸ್‌ ಟೈರ್‌: ತಪ್ಪಿದ ಅನಾಹುತ

7

ಕಳಚಿದ ಬಸ್‌ ಟೈರ್‌: ತಪ್ಪಿದ ಅನಾಹುತ

Published:
Updated:

ಚಾಮರಾಜನಗರ: ವೇಗವಾಗಿ ಚಲಿಸುತ್ತಿದ್ದ ಬಸ್‌ನಿಂದ ಹಿಂದಿನ ಟೈರ್‌ ಒಂದು ಕಳಚಿದ ಘಟನೆ ಬುಧವಾರ ನಡೆದಿದೆ. ಬಸ್‌ನಲ್ಲಿ 30ರಿಂದ 40 ಜನ ಪ್ರಯಾಣಿಕರಿದ್ದರು. ಅದೃಷ್ಟವಶಾತ್‌ ಯಾರಿಗೂ ಏನೂ ಆಗಿಲ್ಲ. 

ಕಳಚಿಕೊಂಡಿದ್ದ ಟೈರ್‌, ಬಸ್‌ಗಿಂತಲೂ ವೇಗವಾಗಿ ಮುಂದಕ್ಕೆ ಸಾಗಿ ರಸ್ತೆ ಬದಿಯ ಹಳ್ಳಕ್ಕೆ ಬಿತ್ತು. ಟೈರ್‌ ಸಾಗುತ್ತಿದ್ದಾಗ ಎದುರಿನಿಂದ ಯಾವುದೇ ವಾಹನ ಬರಲಿಲ್ಲ. ಹಾಗಾಗಿ, ಅಪಾಯ ಸಂಭವಿಸಲಿಲ್ಲ.

ಘಟನೆ ವಿವರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ಬುಧವಾರ ಮಧ್ಯಾಹ್ನ ಚಾಮರಾಜನಗರದಿಂದ ಮೈಸೂರಿಗೆ ಹೊರಟಿತ್ತು. ಪಟ್ಟಣದಿಂದ ಮೂರ್ನಾಲ್ಕು ಕಿ.ಮೀ ದೂರ ಕ್ರಮಿಸಿದ ನಂತರ, ಬಸ್‌ನ ಮುಂದುಗಡೆ ಟೈರ್‌ ಒಂದು ಹೋಗುತ್ತಿದ್ದುದು ಕಂಡು ಬಂತು. ಇದೇ ಬಸ್‌ನ ಟೈರ್‌ ಕಳಚಿರಬಹುದು ಎಂದು ಶಂಕಿಸಿದ  ಚಾಲಕ ಬಸ್‌ ನಿಲ್ಲಿಸಿ, ಪರಿಶೀಲಿಸಿದಾಗ ಹಿಂದಿನ ಟೈರ್‌ ಕಳಚಿದ್ದು ದೃಢಪಟ್ಟಿತು.

‘ಆ ಬಸ್‌ನಿಂದ ಇಳಿದು, ಬೇರೆ ಬಸ್‌ ಹತ್ತಿ ಮೈಸೂರಿಗೆ ಪ್ರಯಾಣ ಬೆಳೆಸಿದೆವು’ ಎಂದು ‌ಅದರಲ್ಲಿ ಪ್ರಯಾಣಿಸುತ್ತಿದ್ದ ದೊಡ್ಡರಾಯಪೇಟೆ ಗಿರೀಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !