ಬಸ್‌ಗಳ ಡಿಕ್ಕಿ, 15 ಜನರಿಗೆ ಗಾಯ

7

ಬಸ್‌ಗಳ ಡಿಕ್ಕಿ, 15 ಜನರಿಗೆ ಗಾಯ

Published:
Updated:
Deccan Herald

ಮಹದೇಶ್ವರ ಬೆಟ್ಟ: ಪಾಲಾರ್‌ನಿಂದ ಮಹದೇಶ್ವರ ಬೆಟ್ಟಕ್ಕೆ ಸಾಗುವ ರಸ್ತೆಯ ನಾಲ್ಕನೇ ತಿರುವಿನಲ್ಲಿ ಖಾಸಗಿ ಬಸ್‌ ಮತ್ತು ತಮಿಳುನಾಡಿನ ಸರ್ಕಾರಿ ಬಸ್‌ ನಡುವೆ ಬುಧವಾರ ಬೆಳಿಗ್ಗೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ.

ಐವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮೆಟ್ಟೂರು ಸರ್ಕಾರಿ ಆಸ್ಪತ್ರೆ ಹಾಗೂ ಸೇಲಂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ 6.45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಬೆಟ್ಟದಿಂದ ಮೆಟ್ಟೂರಿನತ್ತ ಹೋಗುತ್ತಿದ್ದ ವೆಂಕಟೇಶ್ವರ ಖಾಸಗಿ ಬಸ್‌ ಹಾಗೂ ಪಾಲಾರ್‌ನಿಂದ ಬೆಟ್ಟದತ್ತ ಸಾಗುತ್ತಿದ್ದ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್‌ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿವೆ.

ಗಂಭೀರವಾಗಿ ಗಾಯಗೊಂಡವರಲ್ಲಿ ಮೂವರನ್ನು ಮಹದೇಶ್ವರ ಬೆಟ್ಟ ನಿವಾಸಿಗಳಾದ ವಿಜಯಾ, ರವಿ, ರಾಮಲಿಂಗಂ ಎಂದು ಗುರುತಿಸಲಾಗಿದೆ. ತಮಿಳುನಾಡು ಸಾರಿಗೆ ಸಂಸ್ಥೆ ಬಸ್‌ನ ಚಾಲಕ ಪಳನಿಸ್ವಾಮಿ, ನಿರ್ವಾಹಕ ನಾಗರಾಜು ಅವರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಸೇಲಂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಖಾಸಗಿ ಬಸ್‌ ಚಾಲಕ ವೇಗವಾಗಿ ಓಡಿಸುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !