ಬೂದಿಹಾಳ ಡೋಣ ಗ್ರಾಮ: ಅಪಾಯಕ್ಕೆ ಆಹ್ವಾನ ನೀಡುವ ಪ್ರಯಾಣಿಕರ ತಂಗುದಾಣ

ಸೋಮವಾರ, ಮೇ 27, 2019
24 °C

ಬೂದಿಹಾಳ ಡೋಣ ಗ್ರಾಮ: ಅಪಾಯಕ್ಕೆ ಆಹ್ವಾನ ನೀಡುವ ಪ್ರಯಾಣಿಕರ ತಂಗುದಾಣ

Published:
Updated:
Prajavani

ದೇವರಹಿಪ್ಪರಗಿ-ತಾಳಿಕೋಟೆ ರಸ್ತೆಗೆ ಹೊಂದಿಕೊಂಡಿರುವ ಬೂದಿಹಾಳ ಡೋಣ ಗ್ರಾಮದ ಬಸ್ ನಿಲುಗಡೆ ಸ್ಥಳದಲ್ಲಿರುವ ಪ್ರಯಾಣಿಕರ ತಂಗುದಾಣ ಬೀಳುವ ಹಂತದಲ್ಲಿದ್ದು, ಅಪಾಯಕ್ಕೆ ಅಹ್ವಾನ ನೀಡುತ್ತಿದೆ.

ತಾಲ್ಲೂಕು ಕೇಂದ್ರಗಳಾದ ದೇವರಹಿಪ್ಪರಗಿ, ತಾಳಿಕೋಟೆ ನಡುವೆ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಗ್ರಾಮಸ್ಥರಿಗೆ ಇದೊಂದೇ ತಂಗುದಾಣ ನೆರಳು ನೀಡುತ್ತದೆ. ಆದರೆ ಈ ಕಟ್ಟಡದ ಗೋಡೆಗಳೆಲ್ಲ ದೊಡ್ಡ ಮಟ್ಟದಲ್ಲಿ ಬಿರುಕು ಬಿಟ್ಟಿದ್ದು, ಸಂಪೂರ್ಣವಾಗಿ ಬೀಳುವ ಹಂತದಲ್ಲಿದೆ.

ಮಳೆ, ಗಾಳಿ, ಬಿಸಿಲಿಗೆ ಇದೊಂದೇ ಆಶ್ರಯತಾಣವಾಗಿದೆ. ತಂಗುದಾಣದ ಹಿಂದೆಯೇ ಹೊಲಗಳಿರುವುದರಿಂದ ಗೋಡೆಯ ಬಿರುಕುಗಳಲ್ಲಿ ಹಾವುಗಳು, ವಿಷಜಂತುಗಳು ಸೇರಿಕೊಂಡಿರುತ್ತವೆ. ಒಟ್ಟಿನಲ್ಲಿ ಜನರಿಗೆ ಸುರಕ್ಷಿತ ತಂಗುದಾಣ ಇದಲ್ಲ ಎಂಬಂತೆ ಆಗಿದೆ.

ಇನ್ನೂ ಮಳೆಗಾಲ ಆರಂಭವಾಗುತ್ತದೆ. ಶಾಲಾ ವಿದ್ಯಾರ್ಥಿಗಳಂತೂ ನಿರಂತರವಾಗಿ ಇದೇ ನಿಲ್ದಾಣವನ್ನು ಅವಲಂಬಿಸಿದ್ದಾರೆ. ಈ ಕುರಿತು ಹಲ ಸಲ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಏನೂ ಉಪಯೋಗವಾಗಿಲ್ಲ. ಈಗಲಾದರೂ ಈ ಬೇಡಿಕೆಗೆ ಸ್ಪಂದಿಸಿ, ಬಸ್‌ ನಿಲ್ದಾಣದ ದುರಸ್ತಿ ಕಾರ್ಯ ಕೈಗೊಳ್ಳಬೇಕು.

ಶಾಂತಪ್ಪ ಸಾವಳಗಿ, ಅಣ್ಣಪ್ಪಗೌಡ ಬಿರಾದಾರ, ಗುರುಬಾಳಯ್ಯ ಹಿರೇಮಠ, ಮಲ್ಲಿಕಾರ್ಜುನ ಉಕ್ಕಲಿ, ಐ.ಎಸ್.ಇಜೇರಿ, ಮಹಾಂತೇಶ ಬಿರಾದಾರ, ಸಿದ್ರಾಮಪ್ಪ ಸಾಲೋಡಗಿ, ಸಂತೋಷ ಸಾವಳಗಿ, ಮಲ್ಲನಗೌಡ ಸರ್ಜಪ್ಪಗೋಳ, ಬೂದಿಹಾಳ ಡೋಣ ಗ್ರಾಮಸ್ಥರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !