ಸೇತುವೆ ಮೇಲೆ ಬಸ್ ಸಂಚಾರ ಸ್ಥಗಿತ

7
ಮನೆಯಲ್ಲೇ ಉಳಿದ ವಿದ್ಯಾರ್ಥಿಗಳು; ಪಾಲಕರ ಆಕ್ರೋಶ

ಸೇತುವೆ ಮೇಲೆ ಬಸ್ ಸಂಚಾರ ಸ್ಥಗಿತ

Published:
Updated:
ಔರಾದ್‌ನ ಕೌಠಾ ಸೇತುವೆಗೆ ಮಂಗಳವಾರ ಶಾಸಕ ಪ್ರಭು ಚವಾಣ್ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚಿಸಿದರು (ಎಡಚಿತ್ರ). ಕೌಠಾ ಸೇತುವೆ ಮೇಲೆ ಬಸ್ ಓಡಾಟ ಸ್ಥಗಿತವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುತ್ತಿರುವುದು

ಔರಾದ್:  ಬೀದರ್-ಔರಾದ್ ನಡುವೆ ಸಂಪರ್ಕ ಕಲ್ಪಿಸುವ ಕೌಠಾ (ಬಿ) ಸೇತುವೆ ಮೇಲೆ ವಾಹನಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ಉಂಟಾಗಿದೆ.

 ಬಸ್ ಬಾರದ ಕಾರಣ ಪಾಶಾಪುರ, ಗಡಿಕುಶನೂರ, ಆಲೂರ (ಕೆ), ಆಲೂರ (ಬಿ), ಬನಸಿ ತಾಂಡಾ, ವಿಠಲ್ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ.

‘ಮೊದಲು ಬೀದರ್ ಘಟಕದಿಂದ ಕೌಠಾ ಮಾರ್ಗವಾಗಿ ಚಿಂತಾಕಿಗೆ ಹೋಗುವ ಬಸ್ ಮೂಲಕ ವಡಗಾಂವ್ ಶಾಲೆಗೆ ಈ ಊರಿನ ವಿದ್ಯಾರ್ಥಿಗಳು ಹೋಗುತ್ತಿದ್ದರು. ಆದರೆ, ಈಗ ಈ ಬಸ್ ಬಾರದ ಕಾರಣ ಎರಡು ದಿನಗಳಿಂದ 125 ವಿದ್ಯಾರ್ಥಿಗಳಿಗೆ ಶಾಲೆಗೆ ಬಂದಿಲ್ಲ’ ಎಂದು ವಡಗಾಂವ್ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಶರಣಬಸಪ್ಪ ಹೇಳುತ್ತಾರೆ.

ಸೇತುವೆ ಶಿಥಿಲಗೊಂಡ ವಿಷಯ ಜಿಲ್ಲಾಡಳಿತಕ್ಕೆ ಮೊದಲೇ ಗೊತ್ತಿದೆ. ಆದರೆ, ಇಷ್ಟು ದಿನಗಳ ಕಾಲ ಸುಮ್ಮನಿದ್ದು. ಈಗ ಬಸ್ ಓಡಾಟ ಸ್ಥಗಿತ ಗೊಳಿಸಿರುವುದು ಸರಿಯಲ್ಲ ಎಂದು ಕೌಠಾ ಗ್ರಾಮದ ನಿವಾಸಿ ರಮೇಶ ಕೌಠಾ ದೂರಿದ್ದಾರೆ.

'ಐದು ತಿಂಗಳ ಹಿಂದೆ ಸೇತುವೆ ಶಿಥಿಲಗೊಂಡ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಮಿತಿ ಮೀರಿ ತುಂಬಿದ ಮರಳು ಲಾರಿಗಳು 24 ಗಂಟೆಗಳ ಕಾಲ ಓಡಾಡಿದರೂ ಮೌನ ವಹಿಸಲಾಗಿದೆ. ಆದರೆ, ಈಗ ಮಳೆಗಾಲ ಆರಂಭವಾಗುತ್ತಿದ್ದಂತೆ ವಾಹನ ಓಡಾಟ ನಿಷೇಧಿಸಿರುವುದು ನಿರ್ಲಕ್ಷ್ಯದ ಪರಮಾವಧಿ' ಎಂದು ಸಂತಪುರ ನಿವಾಸಿ ಅನೀಲ ಜಿರೋಬೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸೇತುವೆ ದುರಸ್ತಿ ಕೆಲಸ ಯಾವಾಗ ಆರಂಭವಾಗುತ್ತದೆ. ಎಷ್ಟು ದಿನ ಬೇಕಾಗುತ್ತದೆ ಎಂಬುದನ್ನು ಜನರಿಗೆ ತಿಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಬಸ್ ದರ ಹೆಚ್ಚಳ: ಕೌಠಾ ಸೇತುವೆ ಮೇಲಿಂದ ವಾಹನ ಓಡಾಟ ನಿಷೇಧ ಆದ ನಂತರ ಬೀದರ್-ಔರಾದ್ ನಡುವೆ 10 ಕಿ.ಮೀ. ಅಂತರ ಜಾಸ್ತಿಯಾಗಿದೆ. ಕೌಠಾ ಬದಲು ಈಗ ವಡಗಾಂವ್ ಮಾರ್ಗವಾಗಿ ಬಸ್ ಸಂಚರಿಸುತ್ತಿವೆ. ₹ 5 ಹೆಚ್ಚುವರಿ ಬಸ್ ದರ ನಿಗದಿ ಮಾಡಲಾಗಿದೆ.

ದೂರದ ನಗರಗಳಿಗೆ ಹೋಗುವ ಬಸ್ ವಡಗಾಂವ್ ಮಾರ್ಗವಾಗಿ ಹೋಗುತ್ತಿವೆ. ಬೀದರ್‌ಗೆ ಹೋಗುವ ಬಸ್‌ಗಳು ಕೌಠಾ ಸೇತುವೆವರೆಗೆ ಸಂಚರಿಸುತ್ತವೆ - ಎಂ.ಡಿ. ನಯೀಮ್, ಘಟಕ ವ್ಯವಸ್ಥಾಪಕರು ಔರಾದ್

Tags: 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !