ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಹೂಡಿಕೆ ಇಳಿಮುಖ

Last Updated 4 ನವೆಂಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕ ಅವಧಿಯಲ್ಲಿ ದೇಶದ ಉದ್ಯಮ ಕ್ಷೇತ್ರಗಳಲ್ಲಿನ ಹೊಸ ಹೂಡಿಕೆ ಶೇ 33ರಷ್ಟು ಭಾರಿ ಪ್ರಮಾಣದಲ್ಲಿ ತಗ್ಗಿದ್ದು ಕಳವಳಕ್ಕೆ ಕಾರಣವಾಗಿದೆ.

ಜುಲೈ-ಸೆಪ್ಟೆಂಬರ್ ನಡುವೆ ಕೇವಲ ರೂ. 58,494 ಕೋಟಿಯಷ್ಟು ಬಂಡವಾಳ ಹೂಡಿಕೆಯಾಗಿದೆ.  ಖಾಸಗಿ ಕ್ಷೇತ್ರದ ಉದ್ದಿಮೆಗಳಿಂದ ರೂ. 35,368 ಕೋಟಿ, ಸರ್ಕಾರಿ ಒಡೆತನದ ಉದ್ಯಮಗಳಲ್ಲಿ ರೂ. 23,126 ಕೋಟಿ ಹೂಡಿಕೆ ಆಗಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ `ಭಾರತದ ಆರ್ಥಿಕ ವ್ಯವಸ್ಥೆ ನಿಗಾ ಸಂಸ್ಥೆ~(ಸಿಎಂಐಇ) ಮಾಸಿಕ ವರದಿ ತಿಳಿಸಿದೆ.

ಕೇರಳ, ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ಈ ಅವಧಿಯಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಉತ್ತಮವಾಗಿದೆ. ಉಳಿದ ರಾಜ್ಯಗಳಲ್ಲಿನ ಬಂಡವಾಳ ಹೂಡಿಕೆ ಮೊತ್ತ ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿಯೇ ಕಡಿಮೆ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಉಕ್ಕು, ವಿದ್ಯುತ್ ಸರಬರಾಜು ಮತ್ತು ರಸ್ತೆ ಸಾರಿಗೆ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ವಲಯಗಳ ಉದ್ಯಮದಲ್ಲಿಯೂ ಹೊಸದಾಗಿ ಬಂಡವಾಳ ಹೂಡಿಕೆ ಪ್ರಮಾಣ 2ನೇ ತ್ರೈಮಾಸಿದಲ್ಲಿ ತಗ್ಗಿದೆ.

ವರ್ಷಂಪ್ರತಿ ಇಳಿಕೆ
2003-04ರಲ್ಲಿ ಇಡೀ ವರ್ಷದಲ್ಲಿ ದೇಶದಲ್ಲಿನ ಬಂಡವಾಳ ಹೂಡಿಕೆ ಕೇವಲ ರೂ. 3 ಲಕ್ಷದಷ್ಟಿದ್ದಿತು. ನಂತರ 2008-09ರ ವೇಳೆಗೆ ಹೂಡಿಕೆಯ ಹರಿವು ಹೆಚ್ಚಿತು. ಆ ವರ್ಷ ದೇಶದ ಉದ್ಯಮ ವಲಯದಲ್ಲಿ ಒಟ್ಟು 22.6 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಿದ್ದಿತು. ಆದರೆ, ನಂತರದಲ್ಲಿ ಮತ್ತೆ ಇಳಿಮುಖವಾಯಿತು ಎಂದು `ಸಿಎಂಐಇ~ ವರದಿ ಅಂಕಿ-ಅಂಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT