ಭಾನುವಾರ, ಏಪ್ರಿಲ್ 18, 2021
25 °C

ಈಝಿ ರೂ.650 ಕೋಟಿ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಝಿ ರೂ.650 ಕೋಟಿ ಹೂಡಿಕೆ

ಬೆಂಗಳೂರು: ನಗರದಲ್ಲಿ ಒಟ್ಟು ರೂ. 650 ಕೋಟಿ ಬಂಡವಾಳ ಹೂಡಿ, ಶ್ರೀಮಂತ ಶೈಲಿಯ ವಿಲ್ಲಾ ಮತ್ತು ವಸತಿ ಸಂಕೀರ್ಣದ ಎರಡು ಯೋಜನೆಗಳನ್ನು ಒಮ್ಮೆಗೇ ಕೈಗೆತ್ತಿಕೊಳ್ಳುವ ಮೂಲಕ `ಈಝಿ ಸಮೂಹ~ದ `ಈಝಿ ಇನ್ಫ್ರಾಟೆಕ್ ಪ್ರೈ.ಲಿ.~ ಭಾರತದ ರಿಯಲ್ ಎಸ್ಟೇಟ್ ಉದ್ಯಮ ಪ್ರವೇಶಿಸಿದೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಂಪೆನಿಯ ಆರಂಭ ಮತ್ತು ಅದರ ಮೊದಲ ಚಟುವಟಿಕೆಯ ವಿವರ ನೀಡಿದ `ಈಝಿ ಸಮೂಹ~ದ ವ್ಯವಸ್ಥಾಪಕ ನಿರ್ದೇಶಕ ಹಿಶಾಂ ಸಯದ್ ತಮ್ೀ, ಕಳೆದ 53 ವರ್ಷಗಳಿಂದಲೂ ನಮ್ಮ ಸಮೂಹ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಈಗ `ಈಝಿ ಇನ್ಫ್ರಾಟೆಕ್ ಪ್ರೈ.ಲಿ.~ ಸ್ಥಾಪಿಸಿ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಕಾಲಿಟ್ಟಿದೆ. ಮುಂದಿನ 2 ವರ್ಷಗಳಲ್ಲಿ ವಸತಿ ಮತ್ತು ವಾಣಿಜ್ಯ ಕೇಂದ್ರಗಳ ನಿರ್ಮಾಣದ ತೊಡಗಿಕೊಳ್ಳಲಿದೆ. ಇದಕ್ಕಾಗಿ ರೂ. 650 ಕೋಟಿಯ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.ಮೊದಲಿಗೆ ಬೆಂಗಳೂರಿನಿಂದಲೇ ನಮ್ಮ ರಿಯಲ್ ಎಸ್ಟೇಟ್ ಚಟುವಟಿಕೆ ಆರಂಭಿಸುತ್ತಿದ್ದೇವೆ. ಹೆಣ್ಣೂರು ಮುಖ್ಯರಸ್ತೆಯಲ್ಲಿ `ಕೊರಿಂತ್~ ಹೆಸರಿನಲ್ಲಿ `ಬೂಟಿಕ್~ ರೀತಿಯ 25 ವಿಶಾಲ ವಿಲ್ಲಾ ಸಮೂಹ ನಿರ್ಮಾಣವಾಗಲಿದೆ. ವೈಟ್‌ಫೀಲ್ಡ್ ಬಳಿ 12 ಅಂತಸ್ತುಗಳ `ದ ಅವೆನ್ಯೂ~ ವಸತಿ ಸಂಕೀರ್ಣ ತಲೆ ಎತ್ತಲಿದೆ.ಇಲ್ಲಿ ಒಟ್ಟು 48 ಮನೆ ಇರಲಿವೆ.  ಎರಡೂ ಯೋಜನೆಗೆ ರೂ. 150 ಕೋಟಿ ವೆಚ್ಚವಾಗುತ್ತಿದ್ದು, 18 ತಿಂಗಳಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದೆ. ವಿಲ್ಲಾಗಳನ್ನು ಮುಂಗಡ ಲೆಕ್ಕದಲ್ಲಿ ರೂ. 6400ಕ್ಕೇ ಈಗಲೇ ಕಾಯ್ದಿರಿಸಲಾಗುತ್ತಿದೆ ಎಂದರು.ಅಂತರರಾಷ್ಟ್ರೀಯ ಖ್ಯಾತಿಯ ವಾಸ್ತುಶಿಲ್ಪಿ ಟೋನಿ ಅಶಾಯ್ ಅವರು ವಿನ್ಯಾಸದ ಜವಾಬ್ದಾರಿ ಹೊತ್ತಿರುವುದು ಎರಡೂ ಯೋಜನೆಗಳ ವಿಶೇಷ. ಅವರು ವಿಲ್ಲಾಗಳಿಗೆ ಇಟಾಲಿಯನ್ ಶೈಲಿಯ ವಿನ್ಯಾಸ ನೀಡಿದ್ದಾರೆ. ಕಾಶ್ಮೀರದಲ್ಲಿ ಜನಿಸಿದ ಟೋನಿ, ಸದ್ಯ ಲಾಸ್‌ಏಂಜಲೀಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಹಾಲಿವುಡ್ ಮತ್ತು ಬಾಲಿವುಡ್ ತಾರೆಯರ ಬಂಗಲೆಗಳನ್ನೂ ವಿನ್ಯಾಸಗೊಳಿಸಿ ಪ್ರಸಿದ್ಧರಾಗಿದ್ದಾರೆ ಎಂದು ವಿವರಿಸಿದರು.ಎರಡನೇ ವರ್ಷ ಬೆಂಗಳೂರಿನಲ್ಲಿಯೇ ವಾಣಿಜ್ಯ ಕೇಂದ್ರಗಳ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.ಇದಕ್ಕೆ ಅಗತ್ಯವಾದ ರೂ. 500 ಕೋಟಿ ಬಂಡವಾಳ ನೇರ ವಿದೇಶಿ ಹೂಡಿಕೆ(ಈಕ್ವಿಟಿ) ಮೂಲಕ ಬರಲಿದೆ ಎಂದು ಹಿಶಾಂ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.`ಈಝಿ ಸಮೂಹ~ದ ಅಧ್ಯಕ್ಷ ಶಬ್ಬೀರ್ ಸೈಫುದ್ದೀನ್ ಮತ್ತು ಟೋನಿ ಅಶಾಯ್ ಎರಡೂ ಯೋಜನೆಗಳ ಹೆಚ್ಚಿನ ವಿವರ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.