ಗುರುವಾರ , ಆಗಸ್ಟ್ 5, 2021
26 °C

ಉಳಿತಾಯ ಬಡ್ಡಿದರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಬ್ಯಾಂಕುಗಳಲ್ಲಿ ಗ್ರಾಹಕರು ಇಟ್ಟಿರುವ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಶೇ. 3.5 ರಿಂದ ಶೇ. 4 ಕ್ಕೆ ಹೆಚ್ಚಿಸಿ ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಇದರ ಜತೆಗೆ ಆರ್ ಬಿ ಐ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನೂ ಶೇ. 0.5 ರಷ್ಟು ಹೆಚ್ಚಿಸಿರುವುದು ಗೃಹ ಹಾಗೂ ಮತ್ತಿತರ ಸಾಲಗಳ ಬಡ್ಡಿದರಗಳು ಹೆಚ್ಚುವ ಭೀತಿ ಮೂಡಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತ ವಾತಾವರಣದಿಂದಾಗಿ 2011-12ರ ಆರ್ಥಿಕ ವೃದ್ದಿ ದರವು ಸರ್ಕಾರ ಹೇಳಿರುವಂತೆ ಶೇ. 9 ರ ಬದಲಿಗೆ ಶೇ. 8 ರಷ್ಟು ಇರಲಿದೆ ಎಂದೂ ಆರ್ ಬಿ ಐ ಅಂದಾಜು ಮಾಡಿದೆ.

ಜಾಗತಿಕ ತೈಲ ಬೆಲೆಗಳ ಮಟ್ಟಕ್ಕೆ ಸ್ಥಳೀಯ ತೈಲೋತ್ಪನ್ನಗಳನ್ನೂ ಹೆಚ್ಚಿಸಬೇಕೆಂದು ಹೇಳಿರುವ ರಿಸರ್ವ್ ಬ್ಯಾಂಕ್ ಇಲ್ಲದೆ ಇದ್ದರೆ ಭಾರಿ ವಿತ್ತೀಯ ಕೊರತೆ ಎದುರಾಗಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.