ಶನಿವಾರ, ಜೂನ್ 19, 2021
27 °C

ರೂ. 1200 ಕೋಟಿ ಹೂಡಿಕೆ ಟಾಟಾ ಹೌಸಿಂಗ್ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವಸಂಸ್ಥೆ ಅಂಕಿ ಅಂಶಗಳ ಪ್ರಕಾರ ೨೦೧೭ರ ವೇಳೆಗೆ ಭಾರತದಲ್ಲಿ ೬೦ ವರ್ಷಕ್ಕಿಂತ ಮೇಲಿನವರ ಸಂಖ್ಯೆ ೧೧.೮೦ ಕೋಟಿಯಷ್ಟಿರಲಿದೆ. ಹಾಗಾಗಿ, ಹಿರಿಯರ ನೆಮ್ಮದಿಯ ಬದುಕಿಗೆ ಅನು ಕೂಲಕಾರಿಯಾದ ಮನೆಗಳ ನಿರ್ಮಾಣ ಅಗತ್ಯವಿದೆ ಎಂದು ‘ಟಾಟಾ ಹೌಸಿಂಗ್ ಡೆವಲಪ್‌ಮೆಂಟ್ ಕಂಪೆನಿ ಲಿ.’ ಹೇಳಿದೆ.ನಗರದಲ್ಲಿ ಈ ಮೊದಲು ಹಿರಿಯರಿ ಗಾಗಿಯೇ ಆರಂಭಿಸಿದ ‘ರಿವಾ ರೆಸಿಡೆನ್ಸಿ’ ಯೋಜನೆ ಯಶಸ್ಸು ಕಂಡಿದೆ. ೨೦೧೮ ರೊಳಗೆ ದೇಶದ ೮ ನಗರಗಳಿಗೆ ರಿವಾ ರೆಸಿಡೆನ್ಸಿ ಬ್ರಾಂಡ್‌ ವಿಸ್ತರಿಸಿ, ೧೨ ವಸತಿ ಯೋಜನೆ ಪೂರ್ಣಗೊಳಿಸಲಾಗುವುದು. ಈ ನಿಟ್ಟಿನಲ್ಲಿ ರೂ.1200 ಕೋಟಿ ಹೂಡಿಕೆ ಮಾಡಲಾಗುವುದು ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ  ಬ್ರೋತಿನ್ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.