ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ. 3000 ಕೋಟಿ ‘ಎಫ್‌ಐಐ’ಹೂಡಿಕೆ!

Last Updated 10 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕಳೆದೊಂದು ವಾರದಿಂದ ಷೇರುಪೇಟೆ ಚಟುವಟಿಕೆ ಗರಿಗೆದರಿದೆ. ಇದಕ್ಕೆ ಕಾರಣ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರಿ ಪ್ರಮಾಣದಲ್ಲಿ ಷೇರು ಖರೀದಿಸುತ್ತಿರುವುದೇ ಆಗಿದೆ. ಒಂದು ವಾರದಲ್ಲಿ ಸಾಗರೋತ್ತರ ಹೂಡಿಕೆದಾರರಿಂದ ದೇಶದ ಷೇರುಪೇಟೆಗೆ ಒಟ್ಟು ರೂ. 3000 ಕೋಟಿಗೂ ಅಧಿಕ ಬಂಡವಾಳ ಹರಿದುಬಂದಿದೆ!

ಏಪ್ರಿಲ್‌ನಲ್ಲಿ ಲೋಕಸಭೆಗೆ ಚುನಾವಣೆ ನಡೆಯುತ್ತಿರುವುದು ಮತ್ತು ಹೊಸ ಆಡಳಿತದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿರುವುದು ಬಂಡ­ವಾಳ ಹರಿಯುವಿಕೆಗೆ ಉತ್ತೇಜನ ನೀಡುತ್ತಿದೆ.ಮಾ. 3ರಿಂದ 7ರವರೆಗಿನ ಐದು ದಿನಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು ರೂ18,944 ಕೋಟಿ ಬೆಲೆಯ ಷೇರುಗಳನ್ನು ಖರೀದಿಸಿದ್ದಾರೆ.

ಇದೇ ವೇಳೆ, ರೂ. 15,869 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ­ದ್ದಾರೆ.  ಇದರಿಂದಾಗಿ ಒಂದು ವಾರ­ದ­ಲ್ಲಿನ ‘ಎಫ್‌ಐಐ’ ಹೂಡಿಕೆ ₨3,075 ಕೋಟಿಯಷ್ಟಾಗಿದೆ ಎಂಬು­ದು ‘ಸೆಬಿ’ ಅಂಕಿ ಅಂಶಗಳಿಂದ ತಿಳಿದು­ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT