ಬುಧವಾರ, ಫೆಬ್ರವರಿ 19, 2020
24 °C

ನೇರ ನಗದು: ಉಳಿತಾಯ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನೇರ ನಗದು: ಉಳಿತಾಯ ಹೆಚ್ಚಳ

ನವದೆಹಲಿ: ವಿವಿಧ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಸಬ್ಸಿಡಿ ಮೊತ್ತವನ್ನು ನೇರವಾಗಿ ವರ್ಗಾಯಿಸಿದ್ದರಿಂದ  ಕೇಂದ್ರ ಸರ್ಕಾರಕ್ಕೆ  ₹57 ಸಾವಿರ ಕೋಟಿ ಉಳಿತಾಯವಾಗಿದೆ.

2016–17ನೆ ಸಾಲಿನಲ್ಲಿ ನಗದು ನೇರ ವರ್ಗಾವಣೆಯಿಂದ ₹57,029 ಕೋಟಿಗಳಷ್ಟು ಉಳಿತಾಯವಾಗಿದೆ.

ಯುಪಿಎ ಸರ್ಕಾರ 2013ರಲ್ಲಿ ಈ ಯೋಜನೆಗೆ ಚಾಲನೆ ನೀಡಿತ್ತು.  ಕಲ್ಯಾಣ ಕಾರ್ಯಕ್ರಮಗಳ ನಿಧಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಮುಖ ಸುಧಾರಣಾ ಕ್ರಮ ಇದಾಗಿದೆ.

ಫಲಾನುಭವಿಗಳ ಸಂಖ್ಯೆಯು 10.71 ಕೋಟಿಯಿಂದ 35.62 ಕೋಟಿಗೆ ಏರಿಕೆಯಾಗಿದೆ. ಈ ಯೋಜನೆಯ ಜಾರಿಯು ಪ್ರಧಾನಿ ಕಚೇರಿಯ ನೇರ ಮೇಲ್ವಿಚಾರಣೆಗೆ ಒಳಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)