ಬುಧವಾರ, ಡಿಸೆಂಬರ್ 11, 2019
20 °C

ತಗ್ಗಿದ ವಿದೇಶಿ ಹೂಡಿಕೆ

Published:
Updated:
ತಗ್ಗಿದ ವಿದೇಶಿ ಹೂಡಿಕೆ

ನವದೆಹಲಿ: ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಯಿಂದ ಏಳು ವಹಿವಾಟು ದಿನಗಳ ಅವಧಿಯಲ್ಲಿ ₹ 3,800 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಇದೇ ಅವಧಿಯಲ್ಲಿ ಸಾಲಪತ್ರಗಳ ಮೇಲೆ ₹ 4,600 ಕೋಟಿ ಹೂಡಿಕೆ ಮಾಡಿದ್ದಾರೆ. ಜನವರಿಯಲ್ಲಿ ಷೇರುಗಳ ಮೇಲೆ ₹ 14 ಸಾವಿರ ಕೋಟಿ ಹೂಡಿಕೆ ಮಾಡಿದ್ದರು.

ಜಾಗತಿಕ ಮಾರಾಟದ ಒತ್ತಡಕ್ಕೆ ಒಳಗಾಗಿ ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಗಮನ ನೀಡಿದ್ದಾರೆ.

‘ದೀರ್ಘಾವಧಿಯ ಬಂಡವಾಳ ಗಳಿಕೆ ತೆರಿಗೆ, ವಿತ್ತೀಯ ಕೊರತೆ ಮಿತಿ ಹೆಚ್ಚಳ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಸೃಷ್ಟಿಯಾಗಿರುವ ಮಾರಾಟದ ಒತ್ತಡದಿಂದ ಬಂಡವಾಳ ಹೊರಹರಿವು ಹೆಚ್ಚಾಗುತ್ತಿದೆ’ ಎಂದು ತಜ್ಞರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)