ಕರ್ಣಾಟಕ ಬ್ಯಾಂಕ್‌: ‘ಡಿಪಾಸಿಟ್‌ ಓನ್ಲಿ ಕಾರ್ಡ್‌’

7

ಕರ್ಣಾಟಕ ಬ್ಯಾಂಕ್‌: ‘ಡಿಪಾಸಿಟ್‌ ಓನ್ಲಿ ಕಾರ್ಡ್‌’

Published:
Updated:
ಕರ್ಣಾಟಕ ಬ್ಯಾಂಕ್‌: ‘ಡಿಪಾಸಿಟ್‌ ಓನ್ಲಿ ಕಾರ್ಡ್‌’

ಮಂಗಳೂರು: ಚಾಲ್ತಿ ಖಾತೆ ಹಾಗೂ ಓ.ಡಿ ಖಾತೆಯ ಗ್ರಾಹಕರಿಗೆ ಸುಲಭದಲ್ಲಿ ಹಣ ಜಮೆ ಮಾಡಲು ಅನುಕೂಲವಾಗುವಂತೆ ಕರ್ಣಾಟಕ ಬ್ಯಾಂಕ್‌, ‘ಕೆಬಿಎಲ್‌ ಡಿಪಾಸಿಟ್‌ ಓನ್ಲಿ ಕಾರ್ಡ್‌’ ಬಿಡುಗಡೆ ಮಾಡಿದೆ.

ಡಿಜಿಟಲ್‌ ಬ್ಯಾಂಕಿಂಗ್‌ಗೆ ಪೂರಕವಾಗಿ ಈ ಕಾರ್ಡ್‌ ಬಿಡುಗಡೆ ಮಾಡಲಾಗಿದೆ. ಗ್ರಾಹಕರು ಬ್ಯಾಂಕಿನ ಇ–ಲಾಬಿಗಳಲ್ಲಿ ಈ ಕಾರ್ಡ್‌ ಬಳಸಿ ದಿನದ 24 ಗಂಟೆಯೂ ಹಣ ಜಮೆ ಮಾಡಬಹುದಾಗಿದೆ.

ಈ ಕಾರ್ಡ್‌ಗಳನ್ನು ತ್ವರಿತವಾಗಿ ಎಲ್ಲ ಶಾಖೆಗಳಲ್ಲಿ ವಿತರಿಸಲಾಗುವುದು. ಕೇವಲ ಜಮೆ ಮಾಡುವುದಕ್ಕೆ ಮಾತ್ರ ಈ ಕಾರ್ಡ್‌ಗಳನ್ನು ಬಳಸಬಹುದಾಗಿದ್ದು, ಹಣ ತೆಗೆಯುವುದು ಹಾಗೂ ಖರೀದಿಗೆ ಬಳಕೆ ಮಾಡುವಂತಿಲ್ಲ. ಈ ಕಾರ್ಡ್‌ ಬಳಸಿ ₹10 ಲಕ್ಷದವರೆಗೆ ಠೇವಣಿ ಮಾಡಬಹುದಾಗಿದೆ.

ಒಂದು ಖಾತೆಗೆ ಅನೇಕ ಕಾರ್ಡ್‌ ಅಥವಾ ಒಂದು ಕಾರ್ಡ್‌ಗೆ ಅನೇಕ ಖಾತೆಗಳನ್ನು ಜೋಡಣೆ ಮಾಡಬಹುದಾಗಿದೆ. ಪ್ಯಾನ್‌ ಕಾರ್ಡ್‌ ನೋಂದಣಿ ಮಾಡಿದ ಉಳಿತಾಯ, ಚಾಲ್ತಿ ಹಾಗೂ ಓ.ಡಿ ಖಾತೆಗಳ ಗ್ರಾಹಕರು ಈ ಕಾರ್ಡ್‌ ಪಡೆಯಬಹುದು.

‘ನಮ್ಮ ಗ್ರಾಹಕರು ಕೆಬಿಎಲ್‌ ಡಿಪಾಸಿಟ್‌ ಒನ್ಲಿ ಕಾರ್ಡ್‌ಗಳ ಮೂಲಕ ದೇಶದ ಯಾವುದೇ ಮೂಲೆಯಿಂದ ಖಾತೆಗೆ ಹಣ ಜಮಾ ಮಾಡಬಹುದು. ಕಾರ್ಪೊರೇಟ್ ಗ್ರಾಹಕರು, ಉದ್ಯಮಿಗಳು ತಮ್ಮ ಬ್ಯಾಂಕ್‌ ವ್ಯವಹಾರವನ್ನು ಮತ್ತಷ್ಟು ಸರಳ ಮಾಡಲು ಈ ಕಾರ್ಡ್‌ ಅನುಕೂಲ ಆಗಲಿದೆ’ ಎಂದು ಕಾರ್ಡ್‌ ಬಿಡುಗಡೆ ಮಾಡಿದ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದರು.

‘ಮುಂಬರುವ ದಿನಗಳಲ್ಲಿ ಈ ಕಾರ್ಡ್ ಬಳಸಿ ಬೇರೆ ಬ್ಯಾಂಕ್‌ಗಳ ಖಾತೆಗಳಿಗೂ ಹಣ ಜಮೆ ಮಾಡುವ ಸೌಲಭ್ಯವನ್ನು ಒದಗಿಸುವ ಚಿಂತನೆ ಇದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry