ಸೋಮವಾರ, ಫೆಬ್ರವರಿ 24, 2020
19 °C

ಬಜೆಟ್‌ 2020 | ಮುದ್ರಾಗೆ ₹500 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ಗೆ (ಪಿಎಂಎಂವೈ) ₹500 ಕೋಟಿ ಮೀಸಲಿಡಲಾಗಿದೆ. ಕಳೆದ ಎರಡೂ ಬಜೆಟ್‌ಗಳಲ್ಲಿ ಇಷ್ಟೇ ಅನುದಾನವನ್ನು ನೀಡಲಾಗಿತ್ತು. 

ಕಿರು ವಾಣಿಜ್ಯೋದ್ಯಮಿಗಳಿಗೆ ಸಾಲ ಸೌಲಭ್ಯವನ್ನು ರೂಪಿಸಿ, ನಿರ್ವಹಿಸುವ ಹೊಣೆ ಈ ಯೋಜನೆಯದ್ದಾಗಿದೆ. 2015ರ ಏಪ್ರಿಲ್‌ನಲ್ಲಿ ಆರಂಭವಾದ ಯೋಜನೆಯ ಮೂಲಕ ಶಿಶು (₹50,000), ಕಿಶೋರ್‌ (₹5000– 5 ಲಕ್ಷ) ಮತ್ತು ತರುಣ್‌ (₹5 ಲಕ್ಷ– 10 ಲಕ್ಷ) ಮಾದರಿಯಲ್ಲಿ ನವೋದ್ಯಮಿಗಳಿಗೆ ₹10 ಲಕ್ಷ ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. 5.54 ಕೋಟಿ ಹೊಸ ನವೋದ್ಯಮಿಗಳು ಈ ಯೋಜನೆಯಿಂದ ಸಾಲ ಪಡೆದಿದ್ದಾರೆ. 

2014ರಿಂದ ಪ್ರಸಕ್ತ ಸಾಲಿನವರೆಗೆ 27,000 ನವೋದ್ಯಮಗಳು ಆರಂಭವಾಗಿವೆ. ಮುದ್ರಾ ಯೋಜನೆಯಿಂದ 2 ಮತ್ತು 3ನೇ ಹಂತದ ನಗರಗಳ ಕಿರು ವಾಣಿಜ್ಯೋದ್ಯಮಿಗಳಿಗೆ ಅನುಕೂಲವಾಗಿದ್ದು, ಭಾರತವನ್ನು 2024ರ ವೇಳೆಗೆ ₹350 ಲಕ್ಷ ಕೋಟಿ ಅರ್ಥವ್ಯವಸ್ಥೆಯನ್ನಾಗಿ ರೂಪಿಸಲು ಈ ನಗರಗಳ ಕೊಡುಗೆ ಪ್ರಮುಖವಾದುದು ಎಂದು ಸರ್ಕಾರ ಹೇಳಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು