ಬೆಂಗಳೂರು: ಅಬಕಾರಿ ತೆರಿಗೆ ವ್ಯವಸ್ಥೆಯನ್ನು ಪುನರ್ಪರಿಶೀಲಿಸಲು ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಡಾ.ಕೆ.ಪಿ.ಕೃಷ್ಣನ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಂಪನ್ಮೂಲ ಸಂಗ್ರಹ ಸಮಿತಿಯು, ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.

‘ರಾಜ್ಯದಲ್ಲಿ ಮದ್ಯದ ಸ್ವರೂಪ ಮತ್ತು ಬೆಲೆಯ ಆಧಾರದ ಮೇಲೆ ತೆರಿಗೆ ಅಥವಾ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಬದಲಿಸಬೇಕು. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ದರವನ್ನು ನಿಗದಿ ಮಾಡಬೇಕು’ ಎಂದು ಸಮಿತಿಯು ಶಿಫಾರಸು ಮಾಡಿದೆ.

‘ಮದ್ಯದಲ್ಲಿರುವ ಪ್ರತಿ ಒಂದು ಲೀಟರ್ ಶುದ್ಧ ಆಲ್ಕೋಹಾಲ್ ಮೇಲೆ ₹1,000 ಹೆಚ್ಚುವರಿ ಅಬಕಾರಿ ಸುಂಕ ವಿಧಿಸಬೇಕು. ಹಂತಹಂತವಾಗಿ ಈ ಮೊತ್ತವನ್ನು 2028–29ರ ಹೊತ್ತಿಗೆ ₹2,000ಕ್ಕೆ ಹೆಚ್ಚಿಸಬೇಕು. ಮದ್ಯದ ದರವನ್ನು ವಿಪರೀತ ಹೆಚ್ಚಳ ಮಾಡಿ, ಜನರು ಅಕ್ರಮ ಮದ್ಯದತ್ತ ತೆರಳುವಂತೆ ಮಾಡಬಾರದು’ ಎಂದಿದೆ.

ರಾಜ್ಯ ಸರ್ಕಾರವು ಈಚೆಗೆ ಹೊರಡಿಸಿರುವ ನೂತನ ಕರಡು ಅಬಕಾರಿ ನೀತಿಯಲ್ಲಿ ಈ ಶಿಫಾರಸುಗಳನ್ನು ಅಳವಡಿಸಿಕೊಂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-51-1757103850

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.