ಭಾನುವಾರ, ಫೆಬ್ರವರಿ 23, 2020
19 °C

ವೇತನ ಪಡೆಯುವ ವರ್ಗಕ್ಕೆ ಬಜೆಟ್ ಸಹಕಾರಿಯಾಗಲಿ: ಸುರ್ಜೇವಾಲಾ ಟ್ವೀಟ್

ಪಿಟಿಐ Updated:

ಅಕ್ಷರ ಗಾತ್ರ : | |

Randeep Surjewala

ನವದೆಹಲಿ: ನೋಟು ರದ್ದತಿ ನಂತರ ಸಂಕಷ್ಟದಲ್ಲಿರುವ ಕೈಗಾರಿಕಾ ಕ್ಷೇತ್ರಕ್ಕೆ ಮತ್ತು  ವೇತನ ಪಡೆಯುವ ವರ್ಗದವರಿಗೆ ತೆರಿಗೆ ಕಡಿತ ನೀಡುವ ಮೂಲಕ  ಸಾಮಾನ್ಯ ಜನರಿಗೆ ಸಮಾಧಾನ ತರಬಹುದು ಎಂಬ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಪಕ್ಷದ  ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಕಳೆದ ಬಜೆಟ್‌ ಪರಿಣಾಮದಿಂದ ಬಳಕೆಯ ಮಟ್ಟ ಕುಸಿತ,  ನಿರುದ್ಯೋಗ ಹೆಚ್ಚಳ ಮತ್ತು ಜಿಡಿಪಿ ಕುಸಿತವುಂಟಾಗಿತ್ತು. ಆದರೂ,  ಮೋದಿಯವರು  1,45,000 ಕೋಟಿಯ ಕಾರ್ಪೊರೇಟ್ ತೆರಿಗೆ ಕಡಿತ ನೀಡಿದ್ದರು. ಬಜೆಟ್ 2020 ವೇತನ  ವರ್ಗದವರಿಗೆ ತೆರಿಗೆ ಕಡಿತ ಮತ್ತು ಗ್ರಾಮೀಣ ಭಾರತಕ್ಕೆ ಹೂಡಿಕೆ ನೀಡುವಂತಾಗಲಿ ಎಂದಿದ್ದಾರೆ ಸುರ್ಜೇವಾಲಾ. 

ಸಾಮಾನ್ಯ ಜನರ ನಿರೀಕ್ಷೆಗಳು ಈಡೇರುವಂತಾಗಲಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ನೋಟು ರದ್ದತಿ ನಂತರ ಕಷ್ಟ ಅನುಭವಿಸುತ್ತಿರುವ ಸಾಮಾನ್ಯ ಜನರಿಗೆ ಮತ್ತು ಉದ್ಯಮಗಳಿಗೆ ಎನ್‌ಡಿಎ ಸರ್ಕಾರದ ಬಜೆಟ್ ನೆರವಾಗಲಿ. ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸುವುದರ ಜತೆಗೆ ಎಲ್ಲ ಕ್ಷೇತ್ರಗಳಿಗೂ ಸಹಾಯ ಮಾಡಲಿ ಎಂದು ಗೆಹ್ಲೋಟ್ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು