ಶನಿವಾರ, ಫೆಬ್ರವರಿ 29, 2020
19 °C

ಠೇವಣಿ ವಿಮೆ ಮೊತ್ತ ₹1 ಲಕ್ಷದಿಂದ ₹5 ಲಕ್ಷಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಠೇವಣಿದಾರರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಠೇವಣಿಗಳ ಮೇಲಿನ ವಿಮೆ ಪರಿಹಾರ ಮೊತ್ತವನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಹಣಕಾಸು ಸಂಸ್ಥೆ, ಸಹಕಾರಿ ಬ್ಯಾಂಕ್‌ ಮತ್ತು ಬ್ಯಾಂಕ್‌ಗಳು ದಿವಾಳಿ ಆದಾಗ ಅಥವಾ ಆರ್‌ಬಿಐ ಅವುಗಳ ಲೈಸನ್ಸ್‌ ರದ್ದುಪಡಿಸಿದ ಸಂದರ್ಭದಲ್ಲಿ ಠೇವಣಿದಾರರಿಗೆ ಈ ಮೊತ್ತ ಸಿಗಲಿದೆ. ಪ್ರತಿ ಬ್ಯಾಂಕ್‌ ಕೂಡ ಪ್ರತಿಯೊಬ್ಬ ಗ್ರಾಹಕನ ಠೇವಣಿ ಮೇಲೆ ವಿಮೆ (ಡೆಪಾಸಿಟ್ ಇನ್ಶುರೆನ್ಸ್) ಮಾಡಿಸಿರುತ್ತದೆ.

ಆರ್‌ಬಿಐನ ಅಂಗ ಸಂಸ್ಥೆಯಾಗಿರುವ ಡೆಪಾಸಿಟ್ ಇನ್ಶುರೆನ್ಸ್ ಆ್ಯಂಡ್‌ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ಗೆ (ಡಿಐಸಿಜಿಸಿ) ನಿರ್ದಿಷ್ಟ ಪ್ರೀಮಿಯಂ ಪಾವತಿಸುವ ಮೂಲಕ ಬ್ಯಾಂಕ್‌ಗಳು ಗ್ರಾಹಕರ ಠೇವಣಿಗಳಿಗೆ ಭದ್ರತೆ ಒದಗಿಸಿರುತ್ತವೆ. ಅಂದರೆ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿದಲ್ಲಿ ಅಥವಾ ದಿವಾಳಿಯಾದಲ್ಲಿ ಗ್ರಾಹಕರಿಗೆ ₹5 ಲಕ್ಷದ ವರೆಗಿನ ಠೇವಣಿ ಹಣವನ್ನು ಮಾತ್ರ ‘ಡಿಐಸಿಜಿಸಿ‘ ಗ್ರಾಹಕರಿಗೆ ಎರಡು ತಿಂಗಳ ಒಳಗಾಗಿ ಪಾವತಿಸುತ್ತದೆ.

ಠೇವಣಿ ವಿಮೆ ಪರಿಹಾರ ಮೊತ್ತವನ್ನು ಈ ಹಿಂದೆ 1993ರಲ್ಲಿ ₹30 ಸಾವಿರದಿಂದ ₹1 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು