ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2023: ಸಹಕಾರ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ

Last Updated 1 ಫೆಬ್ರುವರಿ 2023, 14:53 IST
ಅಕ್ಷರ ಗಾತ್ರ

ನವದೆಹಲಿ: ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಕೇಂದ್ರ ಸರ್ಕಾರವು ಬುಧವಾರ ಬಜೆಟ್‌ನಲ್ಲಿ ಹಲವು ಉತ್ತೇಜನಕಾರಿ ಕ್ರಮಗಳನ್ನು ಘೋಷಿಸಿದೆ.

ಉತ್ಪಾದನೆ ಕೇಂದ್ರಿತ ಹೊಸ ಸಹಕಾರಿ ಸಂಘಗಳನ್ನು ಪ್ರೋತ್ಸಾಹಿಸಲು ತೆರಿಗೆಯಲ್ಲಿ ಶೇ 15ರಷ್ಟು ರಿಯಾಯಿತಿ, ಟಿಡಿಎಸ್‌ ಇಲ್ಲದೇ ₹3 ಕೋಟಿವರೆಗೆ ನಗದು ಹಿಂಪಡೆಯುವಂತಹ ಸೌಲಭ್ಯಗಳನ್ನು ಪ್ರಕಟಿಸಲಾಗಿದೆ.

ಸಹಕಾರ ಸಚಿವಾಲಯಕ್ಕೆ ಸರ್ಕಾರವು 2023-24ರಲ್ಲಿ ಒಟ್ಟು ₹1,150.38 ಕೋಟಿ ಅನುದಾನ ಮೀಸಲಿಟ್ಟಿದೆ. ಕಳೆದ ಬಾರಿ ₹1,624 .74 ಕೋಟಿ ಅನುದಾನ ನೀಡಲಾಗಿತ್ತು.

ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಸದಸ್ಯರು ಪಿಎಸಿಎಸ್‌ ಮತ್ತು ಪಿಸಿಎಆರ್‌ಡಿಬಿಎಸ್‌ನಲ್ಲಿ ಇಡುವ ನಗದು ಠೇವಣಿ ಮತ್ತು ಪಡೆಯುವ ನಗದು ಸಾಲದ ಮಿತಿಯನ್ನು ಗರಿಷ್ಠ ₹2 ಲಕ್ಷಕ್ಕೆ ಹೆಚ್ಚಿಸಿ ಬಜೆಟ್‌ನಲ್ಲಿ ಘೋಷಿಸಿದರು.

ಸಹಕಾರಿ ವಲಯದಲ್ಲಿ ಉತ್ಪಾದನೆಯ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ, ಏಪ್ರಿಲ್‌ ನಂತರ ಹೊಸ ಸಹಕಾರ ಸೊಸೈಟಿ ಸ್ಥಾಪನೆಯಾದರೆ ಅವುಗಳಿಗೂ ಶೇ 15 ತೆರಿಗೆ ರಿಯಾಯಿತಿ ಸೌಲಭ್ಯ ಲಭಿಸಿದೆ. ಆದರೆ, ಆ ಸೊಸೈಟಿಗಳು 2024ರ ಮಾರ್ಚ್ ಒಳಗೆ ಉತ್ಪಾದನೆ ಆರಂಭಿಸಿದರೆ ಮಾತ್ರ ಈ ತೆರಿಗೆ ರಿಯಾಯಿತಿ ಅನ್ವಯಿಸಲಿದೆ ಎಂದು ಸಚಿವೆ ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ, ಈವರೆಗೆ ಸಹಕಾರ ಸಂಘಗಳು ಇಲ್ಲದ ಪಂಚಾಯಿತಿ ಮತ್ತು ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಹು ಉದ್ದೇಶಿತ ಸಹಕಾರ ಸಂಘಗಳು, ಪ್ರಾಥಮಿಕ ಮೀನುಗಾರಿಕಾ ಸಂಘಗಳು ಹಾಗೂ ಹೈನುಗಾರಿಕೆ ಸಹಕಾರ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಸೌಲಭ್ಯ ಒದಗಿಸಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT