ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ ದುಪ್ಪಟ್ಟು ನಷ್ಟ

Last Updated 2 ಫೆಬ್ರುವರಿ 2021, 2:54 IST
ಅಕ್ಷರ ಗಾತ್ರ

ನವದೆಹಲಿ: ಸತತ ಎರಡನೇ ವರ್ಷ ಕರ್ನಾಟಕಕ್ಕೆ ಜಿಎಸ್‌ಟಿ ಅನುದಾನ ಹಂಚಿಕೆಯಲ್ಲಿ ಹಿನ್ನಡೆಯಾಗಿದೆ.

2020–21ರಲ್ಲಿ ಹಂಚಿಕೆ ಆಗಿದ್ದಕ್ಕಿಂತಕಡಿಮೆ ಹಣವನ್ನು ಪಡೆದ ಬಳಿಕ 2021-22ರ ಹಣಕಾಸು ಹಂಚಿಕೆಯ ಬಜೆಟ್ ಅಂದಾಜುಗಳಲ್ಲಿ ಹಿಂದಿನ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ ಮೊತ್ತಕ್ಕಿಂತ ಸುಮಾರು 14% ರಷ್ಟು ಕಡಿಮೆ ಮಾಡಲಾಗಿದೆ.

ಒಟ್ಟಾರೆಯಾಗಿ, ಕರ್ನಾಟಕಕ್ಕೆ ಕಳೆದ ಎರಡು ವರ್ಷಗಳಲ್ಲಿ ಬಜೆಟ್ ಅಂದಾಜು ಮತ್ತು ಪರಿಷ್ಕೃತ ಅಂದಾಜುಗಳಲ್ಲಿನ ವ್ಯತ್ಯಾಸಗಳಲ್ಲಿ 16,814 ಕೋಟಿ ರೂ. ನಷ್ಟವಾಗಿದೆ.

ಹಣಕಾಸು ಇಲಾಖೆಯ ಮೂಲಗಳ ಪ್ರಕಾರ, ಬಜೆಟ್ ದಾಖಲೆಗಳ ಅನ್ವಯ 2020-21ರ ಹಣಕಾಸು ವರ್ಷದ ಪರಿಷ್ಕೃತ ಅಂದಾಜುಗಳಲ್ಲಿ ಕರ್ನಾಟಕಕ್ಕೆ ಜಿಎಸ್ಟಿ ಹಂಚಿಕೆಯಾಗಿ ಬಜೆಟ್ ಮಾಡಲಾದ ₹ 28,000 ಕೋಟಿ ಗಳಿಗಿಂತ ₹ 7,900 ಕೋಟಿ ಕಡಿಮೆ ಹಂಚಿಕೆ ಮಾಡಲಾಗಿದ್ದು, ಈ ಬಾರಿ ಕರ್ನಾಟಕಕ್ಕೆ ಜಿಎಸ್‌ಟಿ ಹಂಚಿಕೆ ₹ 20,073 ಕೋಟಿ ಆಗಿದೆ. ಇದರ ಪರಿಣಾಮವಾಗಿ ಮೊದಲೇ ಕೊರೊನಾ ಹೊಡೆತದಿಂದ ಹಣದ ಕೊರತೆ ಅನುಭವಿಸುತ್ತಿರುವ ಬಿ ಎಸ್ ಯಡಿಯುರಪ್ಪ ಆಡಳಿತಕ್ಕೆ ದೊಡ್ಡ ಹೊಡೆತವಾಗಿದೆ.

ಮುಂದಿನ ವರ್ಷದ ಜಿಎಎಸ್‌ಟಿ ಹಂಚಿಕೆ ₹ 24,573 ಕೋಟಿ ಗಳಾಗಿದ್ದು, ಇದು ಅತ್ಯಂತ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ಆರ್ಥಿಕ ಸವಾಲುಗಳು ಹೆಚ್ಚಾಗಲಿವೆ. ಇದು ಮುಂದಿನ ರಾಜ್ಯ ಬಜೆಟ್‌ನಲ್ಲಿ ಜನಪ್ರಿಯ ಯೋಜನೆಗಳ ಘೋಷಣೆಯ ಹಾದಿಯಲ್ಲಿ ಪರಿಣಾಮ ಬೀರಬಹುದು.

ತೆರಿಗೆ ಹಂಚಿಕೆಯಲ್ಲಿ ಶೇಕಡಾವಾರು ಪ್ರಮಾಣದಲ್ಲಿ ಅತಿದೊಡ್ಡ ನಷ್ಟ ಅನುಭವಿಸಿದ ರಾಜ್ಯ ಕರ್ನಾಟಕವಾಗಿದೆ. ಕರ್ನಾಟಕದ ಪಾಲು 2019-20ರ ಆರ್ಥಿಕ ವರ್ಷದಲ್ಲಿ ಸುಮಾರು 38,000 ಕೋಟಿ ರೂ.ಗಳಿಂದ 2020-21ರ ಆರ್ಥಿಕ ವರ್ಷದಲ್ಲಿ 28,000 ಕೋಟಿ ರೂ.ಗೆ ಇಳಿದಿದೆ. 2019-20ರ ಆರ್ಥಿಕ ವರ್ಷದಲ್ಲಿ ಬಜೆಟ್ ಮೊತ್ತವನ್ನು ಬಿಡುಗಡೆ ಮಾಡಲು ವಿಫಲವಾದ ಕಾರಣ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಕೇಳಿಬಂದಿದ್ದವು. ಈಗ ಕರ್ನಾಟಕವು ಮತ್ತೆ ಅದೇ ಸ್ಥಿತಿಯಾಗಿದೆ.

ಜಿಎಸ್‌ಟಿ ಹಂಚಿಕೆ ಕಡಿತದ ಹಿನ್ನೆಲೆಯಲ್ಲಿ ಕಡಿತವನ್ನು ಸರಿದೂಗಿಸಲು ಕರ್ನಾಟಕಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಪ್ರಾಯೋಜಿತ ಯೋಜನೆಗಳ ಕುರಿತ ಮಾಹಿತಿಯನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ.

"ಜಿಎಸ್‌ಟಿ ಹಂಚಿಕೆ ಅನುದಾನ ಬಿಡುಗಡೆ ವಿಳಂಬವು ಈಗಾಗಲೇ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಒತ್ತಡಕ್ಕೆ ಸಿಲುಕಿಸಿದೆ. ರಾಜ್ಯ ಸರ್ಕಾರದ ಪ್ರಮುಖ ಸಂಪನ್ಮೂಲಗಳಲ್ಲಿ ಒಂದಾದ ಜಿಎಸ್‌ಟಿ ಹಂಚಿಕೆಯಲ್ಲಿನ ಕಡಿತವು ಮುಂಬರುವ ರಾಜ್ಯ ಬಜೆಟ್‌ನಲ್ಲಿ ಸ್ಪಷ್ಟ ಪರಿಣಾಮ ಬೀರುತ್ತದೆ ” ಎಂದು ಮೂಲವೊಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT