ಸೋಮವಾರ, ಫೆಬ್ರವರಿ 17, 2020
18 °C
ತೆರಿಗೆ ಕ್ಯಾಲ್ಕುಲೇಟರ್

ಬಜೆಟ್ 2020: ನಿಮ್ಮ ಹೊಸ ಆದಾಯ ತೆರಿಗೆ ಲೆಕ್ಕಾಚಾರ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Income Tax

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ತಮ್ಮ ಬಜೆಟ್ 2020-21 ಭಾಷಣದಲ್ಲಿ ಜನ ಸಾಮಾನ್ಯರ ಆದಾಯ ತೆರಿಗೆ ಪ್ರಮಾಣವನ್ನು ತಗ್ಗಿಸಿದ್ದಾರೆ. ಇದು ನಿಮ್ಮ ಆದಾಯ ತೆರಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯಬೇಕೇ? ಪ್ರಜಾವಾಣಿ ನಿಮಗೆ ವೆಬ್ ಮೂಲಕವೇ ತೆರಿಗೆ ಲೆಕ್ಕಾಚಾರ ಹಾಕಬಲ್ಲ ಕ್ಯಾಲ್ಕುಲೇಟರ್ ಒದಗಿಸುತ್ತಿದೆ.

2020ರ ಬಜೆಟ್ ಬಳಿಕ, ಮುಂದಿನ ಹಣಕಾಸು ವರ್ಷದಲ್ಲಿ ನಿಮ್ಮ ತೆರಿಗೆ ಎಷ್ಟಾಗುತ್ತದೆ, ಎಷ್ಟು ಉಳಿತಾಯ ಮಾಡಬೇಕಾಗುತ್ತದೆ ಎಂಬುದರ ಮೇಲೆ ಈ ಟ್ಯಾಕ್ಸ್ ಕ್ಯಾಲ್ಕುಲೇಟರ್ ಬೆಳಕು ಚೆಲ್ಲಲಿದ್ದು, ಹಣ ಉಳಿತಾಯ ಮಾಡಲು ನಿಮಗೆ ನೆರವು ನೀಡುತ್ತದೆ.

ಬಜೆಟ್‌ನಲ್ಲಿ ಘೋಷಿಸಿದ ತೆರಿಗೆ ವಿನಾಯಿತಿ ಪ್ರಮಾಣದ ಅನುಸಾರ, ನಿಮ್ಮ ಆದಾಯ ತೆರಿಗೆಯನ್ನು ಈ ಕ್ಯಾಲ್ಕುಲೇಟರ್ ಲೆಕ್ಕಾಚಾರ ಮಾಡುತ್ತದೆ. ಇದರಲ್ಲಿ ನಿಮ್ಮ ಉಳಿತಾಯ ಠೇವಣಿಗಳು, ಗೃಹ ಸಾಲದ ಅಸಲು ಮತ್ತು ಬಡ್ಡಿ, ಎರಡನೇ ಆಸ್ತಿಯಿಂದ ಬರಬಹುದಾದ ಮನೆ ಬಾಡಿಗೆ ಆದಾಯ, ಖರ್ಚು, ಹೂಡಿಕೆಯನ್ನೆಲ್ಲ ಲೆಕ್ಕಾಚಾರ ಮಾಡಲಾಗುತ್ತದೆ.

ಇಲ್ಲಿ ಕ್ಲಿಕ್ ಮಾಡಿ, ನಿಮ್ಮ ತೆರಿಗೆ ಲೆಕ್ಕಾಚಾರ ಮಾಡಿಕೊಳ್ಳಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು