ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಬಜೆಟ್ ಮಂಡಿಸುತ್ತಿದ್ದು ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಂತೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಘೋಷಣೆ ಮಾಡಿದ ಪ್ರಮುಖ ಅಂಶಗಳು...

* ʻಬೆಂಗಳೂರು ಹಬ್ಬʼ ಸಹಯೋಗದೊಂದಿಗೆ ರಾಜ್ಯದ ವಿವಿಧ ಕಲಾ ಪ್ರಕಾರಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮಗಳ ಆಯೋಜನೆಗೆ
₹ 5 ಕೋಟಿ

* ₹ 3 ಕೋಟಿ ವೆಚ್ಚದಲ್ಲಿ ʻಜಾನಪದ ಸಂಗಮʼ ಸಮಾವೇಶದ ಆಯೋಜನೆ.
* ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪರವರ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ₹ 2 ಕೋಟಿ
* ಸಂತ ಶಿಶುನಾಳ ಶರೀಫ ಹಾಗೂ ವೀರರಾಣಿ ಬೆಳವಡಿ ಮಲ್ಲಮ್ಮ ಇವರ ಹೆಸರಿನಲ್ಲಿ ಪ್ರತ್ಯೇಕ ಪ್ರತಿಷ್ಠಾನ.
* ಡಾ|| ಯು.ಆರ್. ಅನಂತಮೂರ್ತಿಯವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ.
* ಮಕ್ಕಳಿಗಾಗಿ ಪ್ರಸಿದ್ಧ ಕವಿ ಮತ್ತು ಸಾಹಿತಿಗಳ ಕೃತಿಗಳ ಬಣ್ಣದ ಚಿತ್ರಗಳು ಮತ್ತು ಸಣ್ಣ ವಾಕ್ಯಗಳ ಪುಸ್ತಕಗಳ ಮುದ್ರಣ.
* ಗೋರ್ ಬಂಜಾರ ಸಮುದಾಯದ ವಿಶ್ವಕೋಶದ ಪ್ರಕಟಣೆ.
* ʻಅರ್ಧಶತಮಾನದ ದಲಿತ ಸಾಹಿತ್ಯʼ ಪುಸ್ತಕ ಪ್ರಕಟಣೆಗೆ ₹ 1 ಕೋಟಿ
* ದಲಿತ ಕವಿ ಸಿದ್ದಲಿಂಗಯ್ಯ ಮತ್ತು ಡಾ. ಡಿ.ಆರ್. ನಾಗರಾಜ ರವರ ಹೆಸರಿನಲ್ಲಿ ಟ್ರಸ್ಟ್ ರಚನೆ.
* ನಾ.ಡಿಸೋಜ ವಿರಚಿತ ʻಕೊಳಗʼ ಕಾದಂಬರಿ ಆಧರಿತ ನಾಟಕ ಪ್ರದರ್ಶನ.
* ಖ್ವಾಜಾ ಬಂದೇ ನವಾಜ್ರ ಕುರಿತು ಅಹೋರಾತ್ರಿ ನಾಟಕ ಪ್ರದರ್ಶನ.
* ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿಗೆ ₹ 2 ಕೋಟಿ
* ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ.
* ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಅಂಡಮಾನ್ನಲ್ಲಿ ಕರಾಳ ಶಿಕ್ಷೆಗೊಳಗಾದ ಕನ್ನಡಿಗರ ವೀರಗಾಥೆಯ ಕುರಿತು ʻಅನಾಮಿಕ ಸ್ವಾತಂತ್ರ್ಯ ಹೋರಾಟಗಾರರುʼ ಕೃತಿಗಳ ಪ್ರಕಟಣೆ.
* ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಿಗೆ
₹ 2 ಕೋಟಿ
* ಕೋಲಾರದ ‘ಆದಿಮ’, ಮೈಸೂರಿನ ʻರಂಗನಿರಂತರʼ, ಬೆಂಗಳೂರಿನ ʻಸಮುದಾಯʼಗಳಿಗೆ ಅನುದಾನ.
* ಕರಗ ಉತ್ಸವಕ್ಕೆ ₹ 2 ಕೋಟಿ ರೂ.
* ₹ 5 ಕೋಟಿ ವೆಚ್ಚದಲ್ಲಿ ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದ ಉನ್ನತೀಕರಣ.
.Karnataka Budget 2026: ಬಜೆಟ್ ಮುಖ್ಯಾಂಶಗಳು .ರಾಜ್ಯ ಬಜೆಟ್–2026: ಮೀನುಗಾರಿಕೆ ಕಿಟ್ ದರ ಹೆಚ್ಚಳ ಸೇರಿ ಹಲವು ಯೋಜನೆ ಘೋಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.