ಬೆಂಗಳೂರು: ವಿಮಾ ಆಸ್ಪತ್ರೆಗಳ ಉನ್ನತೀಕರಣ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮತ್ತು ಲಸಿಕೆ ಸೇರಿದಂತೆ ಕಾರ್ಮಿಕರ ಆರೋಗ್ಯದ ಕಡೆಗೆ ಈ ಬಾರಿಯ ಬಜೆಟ್ನಲ್ಲಿ ಗಮನ ಹರಿಸಲಾಗಿದೆ. ಆದರೆ, ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಣೆ, ತುಟ್ಟಿಭತ್ಯೆ ಏರಿಸುವ ಬಗ್ಗೆ ಯಾವುದೇ ಘೋಷಣೆಗಳಿಲ್ಲದೇ ಕಾರ್ಮಿಕರಿಗೆ ನಿರಾಸೆ ಉಂಟು ಮಾಡಿದೆ.

ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ವೇತನ ಸಹಿತ ಒಂದು ದಿನ ರಜೆ, ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ತಲಾ ₹ 60 ಕೋಟಿ ವೆಚ್ಚದಲ್ಲಿ 10 ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳನ್ನು (ಜಿಟಿಟಿಸಿ) ಸ್ಥಾಪಿಸಲು ಮುಂದಾಗಿರುವುದು, ಒಟ್ಟು 104 ಶ್ರಮಿಕ ವಸತಿ ಶಾಲೆಗಳನ್ನು ತೆರೆಯುವ ಗುರಿ ಇಟ್ಟುಕೊಂಡಿರುವುದು ಸಕಾರಾತ್ಮಕ ಅಂಶಗಳಾಗಿವೆ.

ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ₹ 200 ಕೋಟಿ ವೆಚ್ಚದಲ್ಲಿ ಕೌಶಲ ತರಬೇತಿ ಅಕಾಡೆಮಿ ಸ್ಥಾಪನೆ, ₹5 ಕೋಟಿ ವೆಚ್ಚದಲ್ಲಿ ʻಕಾಯಕ ಭಾಗ್ಯʼ ಆನ್ಲೈನ್ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಾಪನೆ, ಹುಬ್ಬಳ್ಳಿ, ಇಂದಿರಾನಗರ, ಮೈಸೂರು ಮತ್ತು ದೊಡ್ಡಬಳ್ಳಾಪುರದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್, ಇಂದಿರಾನಗರದಲ್ಲಿ ಮೂರು ವರ್ಷದ ಸ್ನಾತಕೋತ್ತರ (ಡಿಎನ್ಬಿ) ಕೋರ್ಸ್, ರಾಯಚೂರು, ವಿಜಯಪುರ, ಬಾಗಲಕೋಟೆ, ಬೀದರ್, ಕೊಪ್ಪಳ, ಚಿತ್ರದುರ್ಗ, ಮಂಡ್ಯ, ಭದ್ರಾವತಿ, ಕೆ.ಜಿ.ಎಫ್ ಮತ್ತು ಚಿಕ್ಕಮಗಳೂರಿನಲ್ಲಿರುವ ಕಾರ್ಮಿಕ ರಾಜ್ಯ ವಿಮಾ (ಇಎಸ್ಐ) ಆಸ್ಪತ್ರೆಗಳನ್ನು ಉನ್ನತೀಕರಿಸುತ್ತಿರುವುದು ಉತ್ತಮ ಬೆಳವಣಿಗೆ.

9 ವರ್ಷಗಳಿಂದ ಕನಿಷ್ಠ ವೇತನ ಪರಿಷ್ಕರಣೆ ಆಗಿಲ್ಲ. ಈ ಬಾರಿಯಾದರೂ ಈ ಬಗ್ಗೆ ಪ್ರಸ್ತಾವ ಇರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಗೆ ಮುಂದಾಗಿರುವುದು ಸಮಾಧಾನಕರ ವಿಷಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.