ಗುರುವಾರ, 16 ಏಪ್ರಿಲ್ 2026
×
ADVERTISEMENT

Budget 2026: ಸಿದ್ದರಾಮಯ್ಯ ಬಜೆಟ್‌ ಭಾಷಣದ ಅಂದ ಹೆಚ್ಚಿಸಿದ ವಚನದ ಸಾರ

Published : 6 ಮಾರ್ಚ್ 2026, 10:24 IST
Last Updated : 6 ಮಾರ್ಚ್ 2026, 10:24 IST
ADVERTISEMENT
ಫಾಲೋ ಮಾಡಿ
Comments
ಧನಶೀಲ ಮನಶೀಲ ತನುಶೀಲಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲಇಂತೀ ವ್ರತಸಂಪದವೆಲ್ಲವೂಅದಾರ ಕುರಿತು ಮಾಡುವ ನೇಮಎಂಬುದ ತಾನರಿಯಬೇಕು
-ವಚನಕಾರ್ತಿ ಅಕ್ಕಮ್ಮ
ನ್ಯಾಯವು ನಮ್ಮ ಪರವಾಗಿರುವಾಗ, ಈ ಹೋರಾಟದಲ್ಲಿ ನಾವು ಸೋಲಲು ಸಾಧ್ಯವೇ ಇಲ್ಲ. ಈ ಹೋರಾಟವು ನನಗೆ ಹರ್ಷದಾಯಕ ಸಂಗತಿಯಾಗಿದೆ. ಇದು ಪರಿಪೂರ್ಣ ಅರ್ಥದಲ್ಲಿ ಆಧ್ಯಾತ್ಮಿಕವಾದ ಹೋರಾಟವಾಗಿದೆ.
ಡಾ. ಬಿ.ಆರ್. ಅಂಬೇಡ್ಕರ್‌
ಧರೆಯ ಕೃಷಿ ಶುದ್ಧವಾಗಿಯಲ್ಲದೆ, ಸಸಿ ಶುದ್ಧವಿಲ್ಲ
-ವಚನಕಾರ ಶಿವಲೆಂಕ ಮಂಚಣ್ಣ
ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ, ನಮ್ಮ ಉಸಿರು ಉಡುಗುತ್ತಾ ಬಂದಂತೆ
-ಕೆ.ಪಿ. ಪೂರ್ಣಚಂದ್ರ ತೇಜಸ್ವಿ
 ಗುಲಾಬಿಯೆಂದರೆಅಮ್ಮನಿಗೆ ಇಷ್ಟಗೊತ್ತು ಅವಳಿಗೆ ಮುಳ್ಳಲ್ಲಿ ಅರಳುವ ಕಷ್ಟ
-ಬಿ.ಎಂ. ಬಶೀರ್‌
ಕುರಿಗಳ ಕಾಯುವ ಕುರುಬನ ಕೂಗುಜನರ ಮಾತು ಕವನಸೋತ ರಟ್ಟೆಗಳ ಹೂತ ಕಾಲುಗಳಬೆವರ ಹಸಿರು ಕವನ
- ಸಿದ್ದಲಿಂಗಯ್ಯ
ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ,ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ
-ಬಿ.ಆರ್. ಲಕ್ಷ್ಮಣರಾವ್
ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ; ಬರಲಿ ವಿಜ್ಞಾನ ಬುದ್ಧಿ
- ರಾಷ್ಟ್ರಕವಿ ಕುವೆಂಪು
ಜನಮನದ ನುಡಿಯಾಗಿ ಬಾಳು ತಾಯಿ, ಮೂಕಜನರಿಗು ಕೂಡ ಬರಲಿ ಬಾಯಿ
-ದಿನಕರ ದೇಸಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT