‘ಒಟ್ಟು ಸಾಲ ಜಿಡಿಪಿಯ ಶೇ 25ರಷ್ಟನ್ನು ಮೀರಬಾರದು ಎಂಬ ಆರ್ಥಿಕ ಶಿಸ್ತನ್ನು ತರಲು ಇರುವ ಮಾನದಂಡಗಳನ್ನು ರಾಜ್ಯ ಸರ್ಕಾರ ಪೂರೈಸಿದೆ. ಸಾಲದ ಮೊತ್ತ ಶೇ 24.94ರಷ್ಟಿದೆ. ಮಿಗತೆ ಬಜೆಟ್ ಆಗದೇ ವಿತ್ತೀಯ ಕೊರತೆ ಆಗಿದೆ. ಇದಕ್ಕೆ ಕಾರಣಗಳಿವೆ’ ಎಂದರು.

‘ರಾಜಸ್ವ ಸಂಗ್ರಹದ ವಿಷಯಕ್ಕೆ ಬಂದರೆ, ಕಳೆದ ವರ್ಷದ ಬಜೆಟ್ಗಿಂತ ಸುಮಾರು ₹22,573 ಕೋಟಿ ಹೆಚ್ಚು ಸಂಗ್ರಹ ಆಗಬಹುದು. ₹2.92 ಲಕ್ಷ ಕೋಟಿಗಳಿದ್ದ ಕಳೆದ ವರ್ಷದ ಅಂದಾಜು ಈ ವರ್ಷ ₹3.15 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಿದ್ದೇವೆ’ ಎಂದು ಸಿದ್ದರಾಮಯ್ಯ ವಿವರಿಸಿದರು. ‘ಕೇಂದ್ರ ಸರ್ಕಾರ ಮಾಡಿದ ದ್ರೋಹದಿಂದ, ಜಿಎಸ್ಟಿ ಪರಿಹಾರ ಸಿಗದ ಕಾರಣ ಸುಮಾರು ₹2 ಲಕ್ಷ ಕೋಟಿಗೂ ಹೆಚ್ಚಿನ ನಷ್ಟ ರಾಜ್ಯಕ್ಕೆ ಆಗಿದೆ. ಪರಿಸ್ಥಿತಿ ಹೀಗಾದರೆ ರಾಜ್ಯಗಳ ಆರ್ಥಿಕತೆ ಹೇಗೆ ಉಳಿಯುತ್ತದೆ? ಗ್ಯಾರಂಟಿಯಂತಹ ಕಲ್ಯಾಣ ಯೋಜನೆಗಳಿಗೆ ನಯಾಪೈಸೆ ಖರ್ಚು ಮಾಡದ ಗುಜರಾತ್ ಈ ಬಾರಿ ₹1 ಲಕ್ಷ ಕೋಟಿ ಸಾಲ ಮಾಡುತ್ತಿದೆ’ ಎಂದರು.

‘ಬಿಜೆಪಿಯು ‘ಟಿಕಲ್ ಡೌನ್ ಎಕಾನಮಿ’ಯಲ್ಲಿ ನಂಬಿಕೆ ಇರಿಸಿದೆ. ನಮ್ಮದು ‘ಯೂನಿವರ್ಸಲ್ ಬೇಸಿಕ್ ಇನ್ಕಂ’ ಹಾಗೂ ಬೇಡಿಕೆಯ ಆರ್ಥಿಕ ತತ್ವ ಆಧರಿಸಿದೆ. ಬುದ್ಧನ ಕರುಣೆ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವನ್ನು ನಮ್ಮ ಬಜೆಟ್ ಆಧರಿಸಿದೆ’ ಎಂದು ಹೇಳಿದರು.

‘ನಮ್ಮ ಬಜೆಟ್ ಕುರಿತು ‘ಪ್ರಜಾವಾಣಿ’ ಸಂಪಾದಕೀಯ ಸೇರಿ ಹಲವು ಪತ್ರಿಕೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕಿರಣ್ ಮಜುಂದಾರ್ ಸೇರಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ ಸಿದ್ದರಾಮಯ್ಯ, ಅವರ ಮಾತುಗಳನ್ನು ಸದನದಲ್ಲಿ ಉಲ್ಲೇಖಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-51-1989679929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.