ಸೋಮವಾರ, ಆಗಸ್ಟ್ 8, 2022
24 °C

Karnataka Budget Live Updates: ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ

Published:
Updated:
2022ರ ಸಾಲಿನ ಪ್ರಗತಿಯ ಮುನ್ನೋಟವೆಂದೇ ಬಿಂಬಿಸಲಾದ ತಮ್ಮ ಮೊದಲ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದಾರೆ. ಈ ಬಾರಿ ಯಾವುದೇ ತೆರಿಗೆ ಹೆಚ್ಚಳ ಮಾಡಲಾಗಿಲ್ಲ. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಸಹಾಯ ಧನ ₹ 1,000 ಹೆಚ್ಚಳ ಮಾಡಲಾಗಿದೆ.
 • 08:22 pm

  ಜನರ ನಿರೀಕ್ಷೆ ಹುಸಿಗೊಳಿಸಿದ ಬಸವರಾಜ ಬೊಮ್ಮಾಯಿ: ಬಂಡೆಪ್ಪ ಕಾಶೆಂಪೂರ್

 • 4-3-2022
  07:25 pm

  Karnataka Budget 2022: ಬೊಮ್ಮಾಯಿ ಬಜೆಟ್ ಬಗ್ಗೆ ಯಾರು ಏನಂದರು?

 • 4-3-2022
  07:24 pm

  Infographic | ಕರ್ನಾಟಕ ಬಜೆಟ್‌ 2022–23: ಪ್ರಮುಖಾಂಶಗಳು

 • 4-3-2022
  06:54 pm

  ತವರು ಜಿಲ್ಲೆ ಹಾವೇರಿಗೆ ಬಜೆಟ್‌ನಲ್ಲಿ ಸಿಎಂ ಕೊಟ್ಟಿದ್ದೇನು?

 • 4-3-2022
  06:43 pm

  ನವ ಕರ್ನಾಟಕದಿಂದ ನವ ಭಾರತದತ್ತ: ಬೊಮ್ಮಾಯಿ ಬಜೆಟ್‌ಗೆ ನಳಿನ್ ಮೆಚ್ಚುಗೆ

 • 4-3-2022
  06:42 pm

  Video-ಕರ್ನಾಟಕ ಬಜೆಟ್‌ 2022–23: ಪ್ರಮುಖ ಘೋಷಣೆಗಳು

 • 4-3-2022
  06:40 pm

  Video-ಕರ್ನಾಟಕ ಬಜೆಟ್‌ 2022–23: ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಏನೇನು?

 • 4-3-2022
  06:39 pm

  ಕರ್ನಾಟಕ ಬಜೆಟ್‌ 2022–23: ಯಶಸ್ವಿನಿ ಯೋಜನೆ ಮರುಜಾರಿ

 • 4-3-2022
  06:38 pm

  ಕರ್ನಾಟಕ ಬಜೆಟ್‌ 2022–23: ಗೋವು ದತ್ತು ಪಡೆಯಲು 'ಪುಣ್ಯಕೋಟಿ ದತ್ತು ಯೋಜನೆ'

 • 4-3-2022
  06:37 pm

  ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ

 • 4-3-2022
  04:37 pm

  Karnataka Budget: ಬೊಮ್ಮಾಯಿ ಬಜೆಟ್‌ನಲ್ಲಿ ಕೃಷಿಗೆ ಸಿಕ್ಕಿದ್ದೇನು?

 • 4-3-2022
  04:34 pm

  ವೀರಶೈವ ಲಿಂಗಾಯತ, ಒಕ್ಕಲಿಗ ಅಭಿವೃದ್ಧಿ ನಿಗಮಗಳಿಗೆ ತಲಾ ₹100 ಕೋಟಿ ಯೋಜನೆ

 • 4-3-2022
  04:22 pm

  ಕರ್ನಾಟಕ ಬಜೆಟ್‌ 2022–23

 • 4-3-2022
  04:21 pm

  #KarnatakaBudget2022: ಹೇಗಿದೆ ರಾಜ್ಯದ ಆರ್ಥಿಕ ಪರಿಸ್ಥಿತಿ?

 • 4-3-2022
  04:21 pm

  ರಾಜ್ಯ ಬಜೆಟ್ ಒಳನೋಟ

 • 4-3-2022
  04:20 pm

  Karnataka Budget: ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಬೊಮ್ಮಾಯಿ ಘೋಷಿಸಿದ್ದೇನು?‌

 • 4-3-2022
  04:18 pm

  ಕರ್ನಾಟಕ ಬಜೆಟ್‌ 2022–23: ಯಾವ ವಲಯಕ್ಕೆ ಎಷ್ಟು ಅನುದಾನ?

 • 4-3-2022
  02:37 pm

  ಕಾರ್ಮಿಕರ ಕ್ಷೇಮಾಭಿವೃದ್ಧಿ

  • 2.30 ಲಕ್ಷ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2610 ಕೋಟಿ ರೂ. ಗಳ ಯೋಜನೆಗಳ ಅನುಷ್ಠಾನ.
  • ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಪ್ರಾರಂಭ
  • ಕಟ್ಟಡ ಕಾರ್ಮಿಕರ ರಿಯಾಯಿತಿ ಬಸ್ ಪಾಸ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ
  • ಕೇಂದ್ರ ಸರ್ಕಾರದ ನೆರವಿನೊಂದಿಗೆ ಹುಬ್ಬಳ್ಳಿ ಮತ್ತು ದಾವಣಗೆರೆ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳ ಹಾಸಿಗೆಗಳ ಸಾಮಥ್ರ್ಯ 100ಕ್ಕೆ ಹೆಚ್ಚಳ; 19 ಹೊಸ ಚಿಕಿತ್ಸಾಲಯಗಳ ಪ್ರಾರಂಭ.

 • 4-3-2022
  02:35 pm

  Karnataka Budget 2022: ಬೆಂಗಳೂರಿಗೆ ಏನೇನು?


  ಬೆಂಗಳೂರು: ಬೆಂಗಳೂರಿನ ಸಮಗ್ರ ಅಭಿವೃದ್ಧಿ, ಸುಗಮ ಸಂಚಾರ, ಹಸಿರು ಬೆಂಗಳೂರು ಹಾಗೂ ನಾಗರಿಕ ಸೇವೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬಜೆಟ್‌ ಭಾಷಣದಲ್ಲಿ ಘೋಷಿಸಿದರು. 

  * ಅಮೃತ್‌ ನಗರೋತ್ಥಾನ ಯೋಜನೆ: ನಗರದ ಮೂಲಭೂತ ಸೌಕರ್ಯಕ್ಕಾಗಿ 3 ವರ್ಷಗಳಲ್ಲಿ ₹6,000 ಕೋಟಿ.

  * ಸ್ಮಾರ್ಟ್‌ ಸಿಟಿ ನಿರ್ಮಾಣ ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಬಾಕಿ ಇರುವ 1,297 ಎಕರೆ ಭೂಸ್ವಾಧೀನ.

  * ಹಳೆಯ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನರುಜ್ಜೀವನ ಮತ್ತು ಉನ್ನತೀಕರಣಕ್ಕಾಗಿ ₹1,500 ಕೋಟಿ.

  * ₹312 ಕೋಟಿ ವೆಚ್ಚದ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾಮಗಾರಿ 2022–23ನೇ ಸಾಲಿನಲ್ಲಿ ಮುಕ್ತಾಯ.

  * ಕೆ–100 ಸಿಟಿಜನ್‌ ವಾಟರ್‌ ವೇ ಯೋಜನೆ: ಕೆ.ಆರ್‌.ಮಾರುಕಟ್ಟೆ ಜಂಕ್ಷನ್‌ ನಿಂದ ಬೆಳ್ಳಂದೂರು ಕೆರೆಯ ವರೆಗೆ ಕೋರಮಂಗಳ ರಾಜಕಾಲುವೆಯ ಅಭಿವೃದ್ಧಿಗೆ ₹195 ಕೋಟಿ.

  * ಅಮೃತ್‌ ನಗರೋತ್ಥಾನ ಯೋಜನೆ: ಬೃಹತ್‌ ಮಳೆನೀರುಗಾಲುವೆ ಹಾಗೂ ರಾಜಕಾಲುವೆ ಅಭಿವೃದ್ಧಿಗೆ ₹1,500 ಕೋಟಿ.

 • 02:26 pm

  ಕರ್ನಾಟಕ ಬಜೆಟ್ 2022: ಯಾವುದೇ ತೆರಿಗೆ ಹೆಚ್ಚಳ ಇಲ್ಲ

 • 02:19 pm

  ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಉದ್ಯೋಗ:

  • ಆಯ್ದ ಸ್ವ-ಸಹಾಯ ಸಂಘಗಳಿಗೆ ತಲಾ 1.5 ಲಕ್ಷ ರೂ. ನೆರವು, 500 ಕೋಟಿ ರೂ. ಅನುದಾನ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಗುಂಪುಗಳಿಗೆ ವಿಶೇಷ ಆದ್ಯತೆ. 3.9 ಲಕ್ಷ ಮಹಿಳೆಯರಿಗೆ ಅನುಕೂಲ.
  • ಮಹಿಳಾ ಸ್ವ-ಸಹಾಯ ಸಂಘಗಳಿಗೆ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಸೌಲಭ್ಯ ಒದಗಿಸಲು ಏಕಗವಾಕ್ಷಿ ಸಾಲ ಸೌಲಭ್ಯ ವ್ಯವಸ್ಥೆ.  
  • ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ಬ್ರ್ಯಾಂಡಿಂಗ್, ಮೌಲ್ಯವರ್ಧನೆ, ಪ್ಯಾಕಿಂಗ್ ಸೌಲಭ್ಯ ಒದಗಿಸಿ, ಮಾರುಕಟ್ಟೆ ಒದಗಿಸಲು “ಅಸ್ಮಿತೆ” ಹೆಸರಿನಡಿ ಎಲ್ಲಾ ಉತ್ಪನ್ನಗಳ ಮಾರಾಟ; ಹೋಬಳಿ/ ಜಿಲ್ಲೆ/ ರಾಜ್ಯ ಮಟ್ಟದಲ್ಲಿ ಮಾರಾಟ ಮೇಳ ಆಯೋಜನೆ.
  • ವೇತನ, ವಹಿವಾಟು, ಉದ್ಯೋಗ ಮತ್ತು ರಫ್ತು ಹೆಚ್ಚಳ ಗುರಿಯೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ, ಧಾರವಾಡದಲ್ಲಿ ಕಸೂತಿ, ಕೊಪ್ಪಳದಲ್ಲಿ ಕೌದಿ ಮತ್ತು ಕಿನ್ಹಾಳ ಬೊಂಬೆ, ಮೈಸೂರಿನಲ್ಲಿ ಅಗರಬತ್ತಿ, ನವಲಗುಂದದಲ್ಲಿ ಜಮಖಾನಾ, ಚನ್ನಪಟ್ಟಣದಲ್ಲಿ ಆಟಿಕೆ ಹಾಗೂ ಇಳಕಲ್, ಗುಳೇದಗುಡ್ಡ, ಬೆಳಗಾವಿ - ಶಹಾಪುರ, ಶಿಡ್ಲಘಟ್ಟ ಮತ್ತು ಮೊಳಕಾಲ್ಮುರುನÀಲ್ಲಿ ಸೀರೆ ಮೈಕ್ರೋಕ್ಲಸ್ಟರ್ ಅಭಿವೃದ್ಧಿ.
   

 • 02:19 pm

  ದುರ್ಬಲ ವರ್ಗಗಳ ಸಬಲೀಕರಣ

  • ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ 800 ಕೋಟಿ ರೂ.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ಮಕ್ಕಳಿಗಾಗಿ 250 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1000 ಸಾಮಥ್ರ್ಯದ ಬಹುಮಹಡಿಯ ದೀನ್‍ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಸಮುಚ್ಛಯ ನಿರ್ಮಾಣ.
  • ಪ್ರತಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಒಂದು ಶಾಲೆಯನ್ನು ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಾಗಿ ಮರುನಾಮಕರಣ; ಪದವಿ ಪೂರ್ವ ತರಗತಿ ಪ್ರಾರಂಭ; ಸಿಬಿಎಸ್‍ಇ ಮಾನ್ಯತೆ ಪಡೆಯಲು ಕ್ರಮ. 25 ಕೋಟಿ ರೂ. ಅನುದಾನ.
  • ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ಶ್ರೀ ನಾರಾಯಣ ಗುರು ವಸತಿ ಶಾಲೆ ಪ್ರಾರಂಭ.
  • ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ  ಅಡಿಯಲ್ಲಿರುವ ಎಲ್ಲಾ ಅಭಿವೃದ್ಧಿ ನಿಗಮಗಳ ಸ್ವಯಂ ಉದ್ಯೋಗ ಮತ್ತು ಇತರೆ ಕಾರ್ಯಕ್ರಮಗಳ ಗುರಿಯಲ್ಲಿ ಶೇ.25ರಷ್ಟು ಮಹಿಳೆಯರಿಗೆ ಮೀಸಲು.
  • ಗಂಗಾ ಕಲ್ಯಾಣ ಯೋಜನೆಯಲ್ಲಿ ಸುಧಾರಣೆ; ಬೋರ್ ವೆಲ್ ಕೊರೆಯಲು ಡಿ.ಬಿ.ಟಿ. ಮೂಲಕ ಹಣ ವರ್ಗಾವಣೆ; ವಿದ್ಯುದೀಕರಣ ಶುಲ್ಕ ಸರ್ಕಾರದಿಂದ ಪಾವತಿ. 2022-23ರಲ್ಲಿ ಒಟ್ಟಾರೆ
  1,115 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ.
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯಗಳ ನಿಗಮಗಳಡಿ 400 ಕೋಟಿ ರೂ. ಅಭಿವೃದ್ಧಿ ಯೋಜನೆ. ದೇವರಾಜ ಅರಸು ಅಭಿವೃದ್ಧಿ ನಿಗಮದಡಿ ಬರುವ ಇತರ ಹಿಂದುಳಿದ ಸಮುದಾಯಗಳಿಗೆ 400 ಕೋಟಿ ರೂ. ಯೋಜನೆ
  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ತಲಾ 100 ಕೋಟಿ ರೂ. ಯೋಜನೆ.
  • ಮರಾಠಾ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳಿಗೆ 50 ಕೋಟಿ ರೂ.
  • ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ 50 ಕೋಟಿ ರೂ. ಯೋಜನೆ ಹಾಗೂ ಜೈನ, ಸಿಖ್ ಮತ್ತು ಬೌದ್ಧ ಸಮುದಾಯಗಳ ಅಭಿವೃದ್ಧಿಗೆ 50 ಕೋಟಿ ರೂ. ಯೋಜನೆ.

 • 02:18 pm

  ಎಲ್ಲರಿಗೂ ಆರೋಗ್ಯ; ಎಲ್ಲೆಡೆಯೂ ಆರೋಗ್ಯ:

  • ಬೆಂಗಳೂರಿನ ಎಲ್ಲಾ ವಾರ್ಡ್‍ಗಳಲ್ಲಿ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣೆಗೆ ಒಟ್ಟು 438 "ನಮ್ಮ ಕ್ಲಿನಿಕ್"ಗಳ ಸ್ಥಾಪನೆ.
  • ರಾಜ್ಯದಲ್ಲಿ ಮಹಿಳಾ ಆರೋಗ್ಯ ಸಮಸ್ಯೆಗಳಿಗೆ ಸಲಹೆ ನೀಡಲು 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ.  
  • ಬಡ ಹಿರಿಯ ನಾಗರಿಕರಿಗೆ ಯೋಜನೆಯಡಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ಸೌಲಭ್ಯ.  
  • ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರ ಸ್ಥಾಪನೆ.
  • ಬೆಳಗಾವಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪನೆ.
  • ಆಯ್ದ 10 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ನೀಡುವ Iಟಿಜಿusioಟಿ ಅeಟಿಣಡಿe ಗಳನ್ನು ಸ್ಥಾಪಿಸಲಾಗುವುದು.
  • ಏಳು ತಾಲ್ಲೂಕು ಆಸ್ಪತ್ರೆಗಳು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ.
  • ತುಮಕೂರಿನÀಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಕೇಂದ್ರ ಸ್ಥಾಪನೆ; 2022-23ರಲ್ಲಿ 10 ಕೋಟಿ ರೂ. ಅನುದಾನ.
  • ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ 75 ತಾಲ್ಲೂಕು ಆಸ್ಪತ್ರೆಗಳ ಮ್ಯಾಪಿಂಗ್, ತಾಲ್ಲೂಕು ಮಟ್ಟದಲ್ಲಿ ಹೃದಯ ಸಂಬಂಧಿ ಚಿಕಿತ್ಸೆ.
  • ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‍ಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲು ಅನುವಾಗುವಂತೆ 200ಕ್ಕೂ ಹೆಚ್ಚು ಹಾಸಿಗೆಗಳ ಸಾಮಥ್ರ್ಯವಿರುವ ಸರ್ಕಾರಿ ಆಸ್ಪತ್ರೆಗಳನ್ನು ಎನ್.ಎಂ.ಸಿ.ಯ ಅನುಮೋದನೆ ಪಡೆದು ಬೋಧನಾ ಆಸ್ಪತ್ರೆಗಳಾಗಿ ಪರಿವರ್ತನೆ; ಈ ವರ್ಷ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಪ್ರಾರಂಭ.
  • “ಮುಖ್ಯಮಂತ್ರಿ ಆರೋಗ್ಯ ವಾಹಿನಿ” ಯೋಜನೆಯಡಿ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸಲು ಬೀದರ್, ಚಾಮರಾಜನಗರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಚಾರಿ ಕ್ಲಿನಿಕ್ ಪ್ರಾರಂಭ.
  • ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು ಸ್ಥಾಪನೆ.
  • ಬಡವರಿಗೆ ವೈದ್ಯಕೀಯ ಶಿಕ್ಷಣ ಅವಕಾಶ ಒದಗಿಸಲು ಕೈಗೊಳ್ಳುವ ಕ್ರಮಗಳು:
  ಅ. ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ನೀಟ್ ಪರೀಕ್ಷೆಗೆ ತರಬೇತಿ.
  ಆ. ಸರ್ಕಾರಿ ಕೋಟಾದಡಿ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲ ಒದಗಿಸಲು ನೆರವು.
  ಇ. ಖಾಸಗಿ ವೈದ್ಯಕೀಯ ಕಾಲೇಜುಗಳ ವರ್ಗೀಕರಣ ಹಾಗೂ ಶುಲ್ಕ ನಿಯಂತ್ರಣ ಸಮಿತಿಯ ಮೂಲಕ ಶುಲ್ಕ ನಿಗದಿಪಡಿಸಲು ಕ್ರಮ
  ಅಪೌಷ್ಟಿಕತೆ ನಿವಾರಣೆಗೆ ಒತ್ತು
  • ಪೌಷ್ಟಿಕ ಕರ್ನಾಟಕ ಯೋಜನೆಯಡಿ 93 ಕೋಟಿ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ರಾಜ್ಯದ 14 ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆ.
  • ಬಾಲ್ಯವಿವಾಹ ಹಾಗೂ ಹೆಣ್ಣುಮಕ್ಕಳು ಶಾಲೆಬಿಡುವುದನ್ನು ತಪ್ಪಿಸಿ, ಅಪೌಷ್ಟಿಕತೆ ನಿವಾರಿಸುವ “ಸ್ಫೂರ್ತಿ” ಯೋಜನೆ ರಾಜ್ಯಾದ್ಯಂತ ವಿಸ್ತರಣೆ.

 • 02:17 pm

  ಗುಣಮಟ್ಟದ ಶಿಕ್ಷಣ

  • ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮಾರ್ಗಸೂಚಿಯಂತೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯಕ್ರಮ ರಚನೆ.
  • ಹೋಬಳಿ ಮಟ್ಟದಲ್ಲಿ "ಮಾದರಿ ಶಾಲೆ"ಗಳಾಗಿ ಮೂಲಭೂತ ಸೌಕರ್ಯವಿರುವ ಶಾಲೆಗಳ ಉನ್ನತೀಕರಣ.
  • ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ. ಆಯ್ದ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಆದ್ಯತೆ.
  • ಸರ್ಕಾರಿ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪೀಠೋಪಕರಣ ಒದಗಿಸಲು 100 ಕೋಟಿ ರೂ.
  • ‘ನೋಡಿ ಕಲಿ ಮಾಡಿ ತಿಳಿ’ ಪರಿಕಲ್ಪನೆಯಡಿ ರಾಜ್ಯದ 169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಲ್ಯಾಬ್-ಇನ್-ಎ-ಕಿಟ್ ವಿತರಣೆ.
  • Karnataka Institute of Technology ಗಳನ್ನಾಗಿ ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣ; ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ.
  • ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳ ಸ್ಥಾಪನೆ.

 • 02:14 pm

  2022-23ನೇ ಸಾಲಿನ ಹೊಸ ಘೋಷಣೆಗಳು

  ರೈತರ ಆದಾಯ ಹೆಚ್ಚಳಕ್ಕೆ ಆದ್ಯತೆ:
  • ‘ರೈತ ಶಕ್ತಿ’ ನೂತನ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ 250 ರೂ. ಗಳಂತೆ ಡೀಸೆಲ್ ಸಹಾಯಧನ; 600 ಕೋಟಿ ರೂ. ಅನುದಾನ.
  • ಕೆಪೆಕ್ ಮೂಲಕ ಕೃಷಿ ಉತ್ಪನ್ನಗಳ ಕೊಯ್ಲಿನೋತ್ತರ ನಿರ್ವಹಣೆ, ಮಾರಾಟ ಮತ್ತು ರಫ್ತು ಮಾಡಲು 50 ಕೋಟಿ ರೂ. ಹಂಚಿಕೆ.
  • ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆ.
  • ದ್ರಾಕ್ಷಿ ಬೆಳೆಯ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಾಣಿಕೆಗೆ ವಿಜಯಪುರ ಜಿಲ್ಲೆ, ತೊರವಿಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹ ವ್ಯವಸ್ಥೆ ಸ್ಥಾಪನೆ ಹಾಗೂ ಶೀತಲೀಕೃತ ಸರಕು ಸಾಗಣೆ ವಾಹನ ಪೂರೈಕೆ.
  • ಬಡ್ಡಿ ರಿಯಾಯಿತಿ ಯೋಜನೆಯಡಿ 3 ಲಕ್ಷ ಹೊಸ ರೈತರೂ ಸೇರಿದಂತೆ 33 ಲಕ್ಷ ರೈತರಿಗೆ 24,000 ಕೋಟಿ ಸಾಲ ವಿತರಣೆ ಗುರಿ.

  ಕೃಷಿ ಉತ್ಪಾದನೆ ಹೆಚ್ಚಳ ಹಾಗೂ ರೈತರ ಕ್ಷೇಮಾಭಿವೃದ್ಧಿ
  • ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ ಒದಗಿಸಲು ಪರಿಷ್ಕøತ ರೂಪದಲ್ಲಿ ಯಶಸ್ವಿನಿ ಯೋಜನೆ ಮರುಜಾರಿ. ರಾಜ್ಯ ಸರ್ಕಾರದಿಂದ 300 ಕೋಟಿ ರೂ. ಅನುದಾನ.
  • 57 ತಾಲ್ಲೂಕುಗಳಲ್ಲಿ 642 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ-2.0 ಜಾರಿ.
  • ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಬೆಳಗಾವಿ ಜಿಲ್ಲೆ, ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ.

  ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ
  • ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರತಿ ಟನ್ ದ್ವಿತಳಿ ರೇಷ್ಮೆಗೂಡಿಗೆ 10 ಸಾವಿರ ರೂ. ಪ್ರೋತ್ಸಾಹ ಧನ
  • ದ್ವಿತಳಿ ಮೊಟ್ಟೆ ಉತ್ಪಾದಿಸಿ ಶೈತೀಕರಿಸಲು ಮದ್ದೂರು, ರಾಣೆಬೆನ್ನೂರು ಮತ್ತು ದೇವನಹಳ್ಳಿಯಲ್ಲಿ 15 ಕೋಟಿ ರೂ.ಗಳ ವೆಚ್ಚದಲ್ಲಿ ಶೈತ್ಯಾಗಾರ ನಿರ್ಮಾಣ.
  • ಕಲಬುರಗಿ ಮತ್ತು ಹಾವೇರಿ ಜಿಲ್ಲೆಯಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ.
  • ದ್ವಿತಳಿ ಬಿತ್ತನೆ ಗೂಡಿಗೆ ಪ್ರತಿ ಕೆಜಿಗೆ 50 ರೂ. ಪ್ರೋತ್ಸಾಹಧನ ಹೆಚ್ಚಳ;  ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಪ್ರೋತ್ಸಾಹಧನ.
  • ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆಯಲ್ಲಿ ರೇಷ್ಮೆ ತರಬೇತಿ ಕೇಂದ್ರ.

  ಪಶು ಸಂಗೋಪನೆ, ಹೈನುಗಾರಿಕೆಗೆ ಉತ್ತೇಜನ
  • ನೂತನ 100 ಪಶುಚಿಕಿತ್ಸಾಲಯಗಳ ಪ್ರಾರಂಭ.
  • ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ. ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಷೇರು ಬಂಡವಾಳ.
  • ರಾಜ್ಯದಲ್ಲಿರುವ ಗೋಶಾಲೆಗಳ ಸಂಖ್ಯೆ 100ಕ್ಕೆ ಹೆಚ್ಚಳ;
  50 ಕೋಟಿ ರೂ. ಅನುದಾನ.
  • ಗೋಶಾಲೆಗಳಲ್ಲಿನ ಗೋವುಗಳ ದತ್ತು ಪ್ರೋತ್ಸಾಹಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ.
  • ಹಾವೇರಿಯಲ್ಲಿ ಮೆಗಾಡೈರಿ ಸ್ಥಾಪನೆ; ಶಿವಮೊಗ್ಗ, ದಾವಣಗೆರೆ-ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ.
  • ಆಕಸ್ಮಿಕ ಮರಣ ಹೊಂದುವ ಕುರಿ/ ಮೇಕೆ ಸಾಕಾಣಿಕೆದಾರರು/ ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂ. ವಿಮಾ ಸೌಲಭ್ಯ.
  • ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಸಂಯೋಜನೆಯೊಂದಿಗೆ 100 ಆಳ ಸಮುದ್ರ ಮೀನುಗಾರಿಕಾ ಹಡಗುಗಳಿಗೆ ನೆರವು ನೀಡಲು ‘ಮತ್ಸ್ಯ ಸಿರಿ’ ಯೋಜನೆ ಜಾರಿ.

  ನೀರಾವರಿಗೆ ಆದ್ಯತೆ
  • ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಮಾಡಲಾದ ಅನುದಾನ ಹಂಚಿಕೆ:
  ಅ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 – 5,000 ಕೋಟಿ ರೂ.
  ಆ. ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ- 1,000 ಕೋಟಿ ರೂ.
  ಇ. ಭದ್ರಾ ಮೇಲ್ದಂಡೆ ಯೋಜನೆ- 3,000 ಕೋಟಿ ರೂ.
  ಈ. ಎತ್ತಿನಹೊಳೆ ಯೋಜನೆ – 3,000 ಕೋಟಿ ರೂ. ಅನುದಾನ.
  ಉ. ಮೇಕೆದಾಟು ಯೋಜನೆ- 1,000 ಕೋಟಿ ರೂ. ಅನುದಾನ.
  • ತುಂಗಭದ್ರಾ ಜಲಾಶಯದ ನೀರು ಸಂಗ್ರಹಣೆ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1,000 ಕೋಟಿ ರೂ. ಅನುದಾನ.
  • ಕೇಂದ್ರ ಸರ್ಕಾರವು PಒಏSಙ-ಂIಃP ಅಡಿಯಲ್ಲಿ ಸನ್ನತಿ ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು 2ರಲ್ಲಿನ ಬೂದಿಹಾಳ ಪೀರಾಪುರ, ನಂದವಾಡಗಿ, ನಾರಾಯಣಪುರ ಬಲದಂಡೆ (9ಎ) ಕಾಲುವೆ ವಿಸ್ತರಣೆ ಯೋಜನೆ ಅನುಷ್ಠಾನಕ್ಕೆ ಕ್ರಮ.
  • ಪ್ರಗತಿಯಲ್ಲಿರುವ 14 ನೀರಾವರಿ ಯೋಜನೆ ಪೂರ್ಣಗೊಳಿಸಿ, 35,319 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ.
  • 2021-22ನೇ ಸಾಲಿನಲ್ಲಿ ಅನುಮೋದಿಸಿದ 8,774 ಕೋಟಿ ರೂ.ಗಳ ಹೊಸ ನೀರಾವರಿ ಯೋಜನೆಗಳಿಗೆ ರೂಪುರೇಷೆ ಸಿದ್ಧಪಡಿಸಲು ಕ್ರಮ.
  • ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್‍ಲ್ಯಾಂಡ್ ಯೋಜನೆ ಅನುಷ್ಠಾನ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಅನುಷ್ಠಾನ.
  • ರಾಜ್ಯದ ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ. ಇದರಲ್ಲಿ ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ಕೋಟಿ ರೂ. ಅನುದಾನ.
  • ಕಾಳಿ ನದಿಯಿಂದ ನೀರನ್ನು ಬಳಸಿಕೊಂಡು, ಉತ್ತರ ಕರ್ನಾಟಕದ
  5 ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲು ಕ್ರಮ.

  ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿ
  • ವಿವಿಧ ಅಭಿವೃದ್ಧಿ ಸೂಚಕಗಳಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಇರುವ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಒಟ್ಟು 3,000 ಕೋಟಿ ರೂ. ಅನುದಾನ. 93 ತಾಲ್ಲೂಕುಗಳಲ್ಲಿ ಶಿಕ್ಷಣ ಗುಣಮಟ್ಟ ವೃದ್ಧಿ, 100 ತಾಲ್ಲೂಕುಗಳಲ್ಲಿ ಆರೋಗ್ಯ ಸೇವೆ ಬಲಪಡಿಸಲು ಮತ್ತು 102 ತಾಲ್ಲೂಕುಗಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಕ್ರಮ.
  ಅ. ಎರಡು ವರ್ಷಗಳಲ್ಲಿ 100 ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ 25 ಹಾಸಿಗೆಯ ಮಾದರಿ ಸಮುದಾಯ ಆರೋಗ್ಯ ಕೇಂದ್ರವಾಗಿ ತಲಾ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ; 1,000 ಕೋಟಿ ರೂ. ಅನುದಾನ.
  ಆ. ಲೋಕೋಪಯೋಗಿ ಇಲಾಖೆ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಯೋಜನೆಯಡಿ ಒದಗಿಸಿದ ಅನುದಾನದಿಂದ 750 ಕೋಟಿ ರೂ. ವೆಚ್ಚದಲ್ಲಿ 100 ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯ ಹಾಗೂ 10 ಕ್ರೈಸ್ ವಸತಿ ಶಾಲೆಗಳ ಕಟ್ಟಡಗಳ ನಿರ್ಮಾಣ.
  ಇ. ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯೊಂದಿಗೆ ಸಂಯೋಜಿಸಿ 1,000 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ.
  ಈ. 165 ಕೋಟಿ ರೂ. ವೆಚ್ಚದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಹಿಂದುಳಿದ ವರ್ಗಗಳ 50 “ಕನಕದಾಸ” ವಿದ್ಯಾರ್ಥಿನಿಲಯಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ.
  ಉ. ಅಪೌಷ್ಟಿಕತೆ ನಿವಾರಣೆಗೆ, ಸೃಷ್ಟಿ ಮತ್ತು ಕ್ಷೀರಭಾಗ್ಯ ಯೋಜನೆಯ ಸೌಲಭ್ಯ ಸಾಧಾರಣ ಅಪೌಷ್ಟಿಕ ಮಕ್ಕಳಿಗೂ ವಿಸ್ತರಣೆ.
  ಊ. 37 ಪೌಷ್ಟಿಕ ಪುನರ್ವಸತಿ ಕೇಂದ್ರಗಳ ಸ್ಥಾಪನೆ.

 • 02:12 pm

  ಸಿಎಂ ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸುತ್ತಿರುವ ಚೊಚ್ಚಲ ಬಜೆಟ್ ಅನ್ನು ಅವರ ಕುಟುಂಬದ  ಸದಸ್ಯರು ಇಂದು ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಕುಳಿತು ವೀಕ್ಷಣೆ ಮಾಡಿದರೆ. ಬಸವರಾಜ ಬೊಮ್ಮಾಯಿ ಅವರ  ಪತ್ನಿ ಚನ್ನಮ್ಮ, ಪುತ್ರ ಭರತ, ಮಗಳು ಅದಿತಿ, ಸೊಸೆ ಡಾ. ಇಬ್ಬನಿ ಮತ್ತು ಇತರರು ವಿಧಾನಸಭಾಧ್ಯಕ್ಷರ ಗ್ಯಾಲರಿಯಲ್ಲಿ ಇದ್ದರು.

 • 02:07 pm
 • 02:06 pm

  ಚೊಚ್ಚಲ ಬಜೆಟ್ ಮಂಡಿಸಿದ ಬೊಮ್ಮಾಯಿ

 • 4-3-2022
  01:50 pm

  ಪ್ರವಾಸೋದ್ಯಮ ಅಭಿವೃದ್ಧಿ

  * ಹಂಪಿ-ಬಾದಾಮಿ-ಐಹೊಳೆ-ಪಟ್ಟದಕಲ್ಲು-ವಿಜಯಪುರ ಪ್ರವಾಸಿ ವೃತ್ತವನ್ನು ಮತ್ತು ಮೈಸೂರು-ಶ್ರೀರಂಗಪಟ್ಟಣ-

  * ಹಾಸನ-ಬೇಲೂರು-ಹಳೆಬೀಡು ಪ್ರವಾಸಿ ವೃತ್ತ ಅಭಿವೃದ್ಧಿಗೆ ಕ್ರಮ. 

  * ಬೇಲೂರು, ಹಳೇಬೀಡು, ಸೋಮನಾಥಪುರಗಳನ್ನು ಒಳಗೊಂಡಂತೆ ಹೊಯ್ಸಳರ ಸ್ಮಾರಕಗಳನ್ನು ಪ್ರಸಕ್ತ ಸಾಲಿನಲ್ಲಿ ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲು ಕ್ರಮ.

  * ಜೋಗ ಜಲಪಾತದಲ್ಲಿ 116 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೋಟೆಲ್ ಹಾಗೂ ರೋಪ್ ವೇ ಅಭಿವೃದ್ಧಿ.

  * ನಂದಿ ಬೆಟ್ಟದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ನಿರ್ಮಾಣಕ್ಕೆ ಅನುಮೋದನೆ. ಉತ್ತರ ಕನ್ನಡ ಜಿಲ್ಲೆಯ

  * ಯಾಣದಲ್ಲಿ ರೋಪ್ ವೇ ನಿರ್ಮಾಣಕ್ಕೆ ಕ್ರಮ.

  * ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ.
  ಪರ್ವತ ಮಾಲಾ ಯೋಜನೆಯಡಿ ಚಾಮುಂಡಿ ಬೆಟ್ಟ ಹಾಗೂ ಮುಳ್ಳಯ್ಯನಗಿರಿ ದತ್ತಪೀಠಗಳಲ್ಲಿ ರೋಪ್ ವೇ ನಿರ್ಮಾಣಕ್ಕೆ ಕೇಂದ್ರ ಪ್ರಸ್ತಾವನೆ.

 • 4-3-2022
  01:49 pm

  2022-23ರಲ್ಲಿ ಯಾವುದೇ ತೆರಿಗೆ ಹೆಚ್ಚಳ ಇಲ್ಲ. 

  * 2022-23ರ ಸಾಲಿನಲ್ಲಿ ಯಾವುದೇ ತೆರಿಗೆ ಹೆಚ್ಚಳ ಇಲ್ಲ. 

  * 2022-23ನೇ ಸಾಲಿನ ವಾಣಿಜ್ಯ ಇಲಾಖೆಗೆ 77,010  ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15,000 ಕೋಟಿ ರೂ., ರಾಜ್ಯ ಅಬಕಾರಿ ಇಲಾಖೆಗೆ 29,000 ಕೋಟಿ ರೂ. ಹಾಗೂ ಸಾರಿಗೆ ಇಲಾಖೆಗೆ 8,007 ಕೋಟಿ ರೂ.ಗಳ ತೆರಿಗೆ ಸಂಗ್ರಹ ಗುರಿ ನಗದಿ.

 • 4-3-2022
  01:48 pm

  ಅಪೌಷ್ಟಿಕತೆ ನಿವಾರಣೆಗೆ ಒತ್ತು

  * ಪೌಷ್ಟಿಕ ಕರ್ನಾಟಕ ಯೋಜನೆಯಡಿ 93 ಕೋಟಿ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ರಾಜ್ಯದ 14 ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆ.

 • 4-3-2022
  01:47 pm

  ಸರ್ವರಿಗೂ ಸೂರು

  * ರಾಜ್ಯದಲ್ಲಿ 5 ಲಕ್ಷ ಹೊಸ ಮನೆಗಳ ನಿರ್ಮಾಣದ ಗುರಿ ನಿಗದಿ, 6612 ಕೋಟಿ ರೂ. ಮಂಜೂರು

  * ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡರ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರು, ಮೀನುಗಾರರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಆದ್ಯತೆ.

 • 4-3-2022
  01:43 pm

  ಗೌರವ ಧನ ಹೆಚ್ಚಳ

  ಗೌರವ ಧನ ಹೆಚ್ಚಳ
   

  * ಆಶಾ ಕಾರ್ಯಕರ್ತೆಯರಿಗೆ, ಗ್ರಾಮ ಸಹಾಯಕರಿಗೆ ಮತ್ತು ಬಿಸಿಯೂಟ ತಯಾರಕರಿಗೆ ಹಾಗೂ ಸಹಾಯಕರಿಗೆ ತಲಾ 1000 ರೂ. ಗೌರವಧನ ಹೆಚ್ಚಳ

  * ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾನುಭವ ಆಧಾರದಲ್ಲಿ 1000 ರೂ. - 1500 ರೂ.ಗಳಷ್ಟು ಗೌರವಧನ ಹೆಚ್ಚಳ
  ಪೌರ ಕಾರ್ಮಿಕರಿಗೆ ಮಾಸಿಕ 2,000 ರೂ. ಸಂಕಷ್ಟ ಭತ್ಯೆ. 

  * ಪ್ರವಾಸಿ ಗೈಡ್ ಗಳಿಗೆ ಮಾಸಿಕ 2,000 ರೂ. ಪ್ರೋತ್ಸಾಹಕ.

 • 4-3-2022
  01:40 pm

  ರಾಜ್ಯದ ಅಭಿವೃದ್ಧಿಗೆ ನಮ್ಮ ಸರ್ಕಾರದ ಪಂಚಸೂತ್ರಗಳು ಇಂತಿವೆ.

  * ರಾಜ್ಯದಲ್ಲಿ ಎಲ್ಲರನ್ನೂ ಒಳಗೊಂಡ, ಸಮಗ್ರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಮಾಡುವುದು.

  * ದುರ್ಬಲ ವರ್ಗದವರ ರಕ್ಷಣೆ ಹಾಗೂ ಏಳಿಗೆಗೆ ಒತ್ತು ನೀಡುವುದು, ಅವರನ್ನು ಪರಾವಲಂಬಿಗಳನ್ನಾಗಿ ಮಾಡದೆ,

  * ಸ್ವಾಭಿಮಾನದ ಬದುಕು ನಡೆಸಲು ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು.

  * ರಾಜ್ಯದ ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ

  * ಗುರುತಿಸಿ, ವಿವಿಧ ವಲಯಗಳ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಮಾಡುವ ಮೂಲಕ, ಅಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ರಾಜ್ಯದ ಸರಾಸರಿಗೆ ಸಮನಾಗಿ ತರುವುದು, ಕೃಷಿ ಕೈಗಾರಿಕೆ ಹಾಗೂ ಸೇವಾ ವಲಯದಲ್ಲಿ ಹೆಚ್ಚಿನ ಪಾಲುದಾರಿಕೆಯೊಂದಿಗೆ ಹೆಚ್ಚಿನ ಅಭಿವೃದ್ಧಿ ಸಾಧಿಸಲಾಗುವುದು.

  • ಹೊಸ ಚಿಂತನೆ, ಹೊಸ ಚೈತನ್ಯ ಹಾಗೂ ಮುನ್ನೋಟದೊಂದಿಗೆ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡಲಾಗುವುದು.

 • 4-3-2022
  01:39 pm

  ಸಮಗ್ರ ಉದ್ಯೋಗ ನೀತಿ; ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ, ಧಾರವಾಡದಲ್ಲಿ ಕಸೂತಿಗೆ ಆದ್ಯತೆ

  ಸಮಗ್ರ ಉದ್ಯೋಗ ನೀತಿ; ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ, ಧಾರವಾಡದಲ್ಲಿ ಕಸೂತಿಗೆ ಆದ್ಯತೆ

  ಬೆಂಗಳೂರು:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022–23ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ವೇತನ, ವಹಿವಾಟು, ಉದ್ಯೋಗ ಮತ್ತು ರಫ್ತು ಹೆಚ್ಚಳ ಗುರಿಯೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ, ಧಾರವಾಡದಲ್ಲಿ ಕಸೂತಿ, ಕೊಪ್ಪಳದಲ್ಲಿ ಕೌದಿ ಮತ್ತು ಕಿನ್ಹಾಳ ಬೊಂಬೆ, ಮೈಸೂರಿನಲ್ಲಿ ಅಗರಬತ್ತಿ ತಯಾರಿಕೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

  ನವಲಗುಂದದಲ್ಲಿ ಜಮಖಾನಾ, ಚನ್ನಪಟ್ಟಣದಲ್ಲಿ ಆಟಿಕೆ ಹಾಗೂ ಇಳಕಲ್, ಗುಳೇದಗುಡ್ಡ, ಬೆಳಗಾವಿ- ಶಹಾಪುರ, ಶಿಡ್ಲಘಟ್ಟ ಮತ್ತು ಮೊಳಕಾಲ್ಮೂರಿನಲ್ಲಿ ಸೀರೆ ಮೈಕ್ರೊಕ್ಲಸ್ಟರ್ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

  ಉದ್ಯೋಗ ಸೃಜನೆಗೆ ಒತ್ತು ನೀಡುವ ಸಮಗ್ರ ಉದ್ಯೋಗ ನೀತಿ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಹೆಚ್ಚುವರಿ ಪ್ರೋತ್ಸಾಹ ನೀಡುವ ಜೊತೆಗೆ, ಜವಳಿ, ಆಟಿಕೆ ತಯಾರಿಕೆ, ಎಪ್ಎಂಸಿಜಿ, ಚರ್ಮ ಉತ್ಪನ್ನಗಳು, ಆಹಾರ ಸಂಸ್ಕರಣೆ ಮತ್ತು ಆಭರಣ ವಲಯಗಳಿಗೆ ಹೂಡಿಕೆದಾರರನ್ನು ಆಕರ್ಷಿಸಲು ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.

  ನವ ಕರ್ನಾಟಕ ನಿರ್ಮಾಣಕ್ಕಾಗಿ ಪ್ರತಿ ವಿಭಾಗದಲ್ಲಿ ತಲಾ ಒಂದು ಯೋಜನಾಬದ್ಧ ಪರಿಸರಸ್ನೇಹಿ ನವನಗರ (integrated township) ದ ಅಭಿವೃದ್ಧಿ ಮಾಡಲಾಗುವುದು. ರಾಜ್ಯದಲ್ಲಿ ದೊಡ್ಡ ಗಾತ್ರದ ಹೂಡಿಕೆ ಪ್ರದೇಶಗಳು ಮತ್ತು ಕೈಗಾರಿಕಾ ವಸಾಹತುಗಳ ಸ್ಥಾಪನೆ, ಕಾರ್ಯಾಚರಣೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ ರಚಿಸಲಾಗುವುದು. ತುಮಕೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ವಿಶೇಷ ಹೂಡಿಕೆ ಪ್ರದೇಶ ಅಧಿಸೂಚನೆ ಹೊರಡಿಸಲಾಗುವುದು ಎಂದಿದ್ದಾರೆ.

 • 4-3-2022
  01:35 pm

  ವಿಮಾನ ನಿಲ್ದಾಣ

  *186 ಕೋಟಿ ರೂ. ವೆಚ್ಚದಲ್ಲಿ ರಾಯಚೂರಿನಲ್ಲಿ ಗ್ರೀನ್ ಪೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ

  * ದಾವಣೆಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕಾರ್ಯಸಾಧ್ಯತಾ ವರದಿ ತಯಾರಿ.

  * ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ.

 • 4-3-2022
  01:34 pm

  ರಸ್ತೆ ಮತ್ತು ರೈಲು ಮಾರ್ಗ ಅಭಿವೃದ್ಧಿ

  ರಸ್ತೆ ಮತ್ತು ರೈಲು ಮಾರ್ಗ ಅಭಿವೃದ್ಧಿ
  * ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-4ರ ಘಟ್ಟ-2ರಡಿ ಒಟ್ಟು 2,275 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3,500 ಕೋಟಿ ರೂ.

  * ಜೀವಿತಾವಧಿ ಮೀರಿ 1,008 ಕಿ.ಮೀ. ಉದ್ದದ ರಾಜ್ಯ ಹದ್ದಾರಿಗಳ ಮರುಡಾಂಬರೀಕರಣಕ್ಕೆ 440 ಕೋಟಿ ರೂ. ಅನುದಾನ

  * 640 ಕೋಟಿ ಅಂದಾಜು ವೆಚ್ಚದ 55 ಕಿ.ಮೀ. ಉದ್ದದ ಗದಗ-ಯಲವಿಗಿ ನೂತನ ರೈಲು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವಣೆ

  * 927 ಕೋಟಿ ರೂ. ವೆಚ್ಚದ ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಕ್ರಮ. 

  * ಚೆನ್ನೈ-ಬೆಂಗಲೂರು-ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ಕೇಂದ್ರದೊಂದಿಗೆ ಸಹಯೋಗ. 

   *ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿರುವ ನದಿಗಳ ಹೊಳೆತ್ತುವಿಕೆ ಮತ್ತು ಹೊಸ ಕೆರೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಭಾಗಿತ್ವದಲ್ಲಿ ಹೊಸ ಯೋಜನೆ. 

   

 • 4-3-2022
  01:32 pm

  ಯುವ ಸಬಲೀಕರಣ ಮತ್ತು ಕ್ರೀಡೆಗೆ ಪ್ರೋತ್ಸಾಹ

  ಯುವ ಸಬಲೀಕರಣ ಮತ್ತು ಕ್ರೀಡೆಗೆ ಪ್ರೋತ್ಸಾಹ

  * ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಸ್ವಾಮಿ ವಿವೇಕಾನಂದ ಯುವಕರ ಸ್ವಸಹಾಯ ಗುಂಪುಗಳ ರಚನೆ. 

  * ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಂಗಣ ಉನ್ನತೀಕರಣಕ್ಕೆ 100 ಕೋಟಿ ರೂ. ಗಳ ಸಮಗ್ರ ಯೋಜನೆ. 

  * ಗ್ರಾಮೀಣ ಹಾಗೂ ದೇಸಿ ಕ್ರೀಡೆಗಳನ್ನು ಉತ್ತೇಜಿಸಲು ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 504 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಅಂಕಣ ನಿರ್ಮಾಣ

  * ಸಾಹಸ ಕ್ರೀಡಾ ಮೂಲಸೌಕರ್ಯ ಒದಗಿಸಿ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಉನ್ನತೀಕರಣಕ್ಕೆ ಕ್ರಮ. 
  * ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಆಯೋಜನೆ.

 • 4-3-2022
  01:27 pm

  ದೇವಾಲಯಗಳಿಗೆ ಸ್ವಾಯತ್ತತೆ, ತಸ್ತೀಕ್ ಮೊತ್ತ ಹೆಚ್ಚಳ

  * ಭಕ್ತಾದಿಗಳ ಬಹುಕಾಲದ ಬೇಡಿಕೆಯಂತೆ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡಲು ಕ್ರಮ.

  * 2021-22 ರಾಜ್ಯದಲ್ಲಿರುವ ದೇವಾಲಯಗಳ ಅಭಿವೃದ್ಧಿಗೆ ಸಾಲಿನಲ್ಲಿ 168 ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ. ಪ್ರಸಕ್ತ ಸಾಲಿನಲ್ಲಿ 25 ಕೋಟಿ ರೂ. ವೆಚ್ಚ.

  * ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ತಸ್ತಿಕ್ ಮೊತ್ತ 60,000 ರೂ.ಗಳಿಗೆ ಹೆಚ್ಚಳ

  * ಭಕ್ತಾದಿಗಳಿಗೆ ಆನ್‌ಲೈನ್ ಮುಖಾಂತರ ವಿವಿಧ ಸೇವೆಗ ಒದಗಿಸಲು Integrated Temple Management Sy ತಂತ್ರಾಂಶ ಜಾರಿ.

 • 4-3-2022
  01:25 pm

  ನೇಕಾರರ ಹಿತರಕ್ಷಣೆ

  * ನೇಕಾರರ ಸಮ್ಮಾನ್ ಯೋಜನೆಯಡಿ ನೋಂದಾಯಿತ ಕೈಮಗ್ಗ ನೇಕಾರರ ವಾರ್ಷಿಕ ನೆರವು 5,000 ರೂ. ಗಳಿಗೆ ಹೆಚ್ಚಳ

  * ರಾಜ್ಯದ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್ ಗಳ ಮೂಲಕ ನೇಕಾರರು ಪಡೆಯುವ ಸಾಲದ ಮೇಲೆ ಶೇ.8ರಷ್ಟು ಬಡ್ಡಿ ಸಹಾಯಧನ ಸೌಲಭ್ಯ.

  * ನೇಕಾರರ ಮಕ್ಕಳಿಗೆ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಯೋಜನೆ.

  ಕಾರ್ಮಿಕರ ಕ್ಷೇಮಾಭಿವೃದ್ಧಿ.
  * 2.30 ಲಕ್ಷ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2610 ಕೋಟಿ ರೂ.ಗಳ ಯೋಜನೆಗಳ ಅನುಷ್ಠಾನ.

  * ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಪ್ರಾರಂಭ. 

  * ಕಟ್ಟಡ ಕಾರ್ಮಿಕರ ರಿಯಾಯಿತ್ ಬಸ್ ಪಾಸ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ

  * ಕೇಂದ್ರ ಸರ್ಕಾರದ ನೆರವಿನೊಂದಿಗೆ ಹುಬ್ಬಳ್ಳಿ ಮತ್ತು ದಾವಣೆಗೆರೆ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳ ಹಾಸಿಗೆಗಳ ಸಾಮರ್ಥ್ಯ 100ಕ್ಕೆ ಹೆಚ್ಚಳ, 19 ಹೊಸ ಚಿಕಿತ್ಸಾಲಯಗಳ ಪ್ರಾರಂಭ. 

  * ಯೆಲ್ಲೋ ಬೋರ್ಡ್ ಚಾಲಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾನಿಧಿ ಯೋಜನೆ, ಆರೋಗ್ಯ ಸೌಲಭ್ಯಕ್ಕೆ ವಿಶೇಷ ಯೋಜನೆ.

 • 4-3-2022
  01:23 pm

  ಯಾತ್ರಾಸ್ಥಳ ಶ್ರೀಶೈಲದಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ಸಂಕೀರ್ಣ ನಿರ್ಮಾಣ

  * ಯಾತ್ರಾಸ್ಥಳ ಶ್ರೀಶೈಲದಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ಸಂಕೀರ್ಣ ನಿರ್ಮಾಣ, ಮೊದಲ ಹಂತದ ಕಾಮಗಾರಿಗೆ 45 ಕೋಟಿ ರೂ. ಅನುದಾನ.

  * ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಕೆ.ಎಸ್.ಟಿ.ಡಿ.ಸಿ. ರೂಪಿಸಲಾಗುವುದು.

  * ರಾಜ್ಯದಿಂದ ಕಾಶಿ ಯಾತ್ರೆಯನ್ನು ಕೈಗೊಳ್ಳುವ ಸುಮಾರು 30,000 ಯಾತ್ರಾರ್ಥಿಗಳಿಗೆ ಸರ್ಕಾರದಿಂದ ಸಹಾಯಧನ. ತಲಾ 5,000 ರೂ.ಗಳ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಕೊಲ್ಲೂರು, ತಿರುಪತಿ, ಮಂತ್ರಾಲಯ, ಮೇಲ್‌ಮರವತ್ತೂರು ಇನ್ನಿತರ ಸ್ಥಳಗಳಿಗೆ ಪ್ಯಾಕೇಜ್ ಟ್ರಿಪ್ ಸೇವೆ ಪ್ರಾರಂಭ.

 • 4-3-2022
  01:20 pm

  ಹಸಿರು ಬೆಂಗಳೂರು 

  * ಎನ್‌ಜಿಇಎಫ್ ನ 105 ಎಕರೆ ಪ್ರದೇಶದಲ್ಲಿ ಸಿಂಗಾಪುರ ಮಾದರಿಯಲ್ಲಿ ಗ್ರೀನ್ ಎಕ್ಸ್ ಪೋ ನಿರ್ಮಾಣ. 

  * ಯಲಹಂಕ ಬ ಳಿಕ ಜಾರಕಬಂಡೆ ಕಾವಲ್ ನಲ್ಲಿ 350 ಎಕರೆ ವಿಸ್ತೀರ್ಣದ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಅಭಿವೃದ್ಧಿ. 

  * ಬೆಂಗಳೂರಿನ ನಾಲ್ಕು ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ. 

  * ಅಸಾಂಕ್ರಾಮಿಕ ರೋಗಗಳ ತಪಾಸಣೆಗೆ ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ

  * ಬೆಂಗಳೂರಿನ ಆಯ್ದ 20 ಶಾಲೆಗಳನ್ನು 89 ಕೋಟಿ ರೂ.ಗಳಲ್ಲಿ ಉನ್ನತೀಕರಣ, ಬೆಂಗಳೂರು ಪಬ್ಲಿಕ್ ಶಾಲೆಗಳ ಅಭಿವೃದ್ಧಿ.

 • 4-3-2022
  01:18 pm

  ಗುಣಮಟ್ಟದ ಶಿಕ್ಷಣ

  * ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮಾರ್ಗಸೂಚಿಯಂತೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯಕ್ರಮ ರಚನೆ.

  * ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳಾಗಿ ಮೂಲಭೂತ ಸೌಕರ್ಯವಿರುವ ಶಾಲೆಗಳ ಉನ್ನಥೀಕರಣ

  * ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ. ಆಯ್ದ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಆದ್ಯತೆ. 

  * ಸರ್ಕಾರಿ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪೀಠೋಪಕರಣ ಒದಗಿಸಲು 100 ಕೋಟಿ ರೂ. 

  * ನೋಡಿ ಕಲಿ ಮಾಡಿ ತಿಳಿ ಪರಿಕಲ್ಪನೆಯಡಿ ರಾಜ್ಯದ 169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಲ್ಯಾಬ್-ಇನ್-ಎ-ಕಿಟ್ ವಿತರಣೆ

 • 4-3-2022
  01:16 pm

  ಯಶಸ್ವಿನಿ ಯೋಜನೆ ಮರು ಜಾರಿ

  ಯಶಸ್ವಿನಿ ಯೋಜನೆ ಮರು ಜಾರಿಗೆ ₹ 300 ಕೋಟಿ ಅನುದಾನ.

 • 4-3-2022
  01:15 pm

  ರಾಜ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ

  ರಾಜ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ

  * ಮೈಸೂರು, ಮಂಗಳೂರು, ಹುಬ್ಬಳಿಯಲ್ಲಿ ಸ್ಟಾರ್ಟಪ್ ಗಳಿಗೆ ಪ್ರೋತ್ಸಾಹ ನೀಡಲು ತಲಾ 20 ಕೋಟಿ ರೂ. ವೆಚ್ಚದಲ್ಲಿ 'ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ ಫಾರ್ ಸ್ಟಾರ್ಟಪ್' ಸ್ಥಾಪನೆ. ಪ್ರಸಕ್ತ ಸಾಲಿನಲ್ಲಿ 12 ಕೋಟಿ ರೂ. ಅನುದಾನ.

  * ಮೈಸೂರಿನಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಮೈಸೂರು ದಿ ಗ್ಲೋಬಲ್ ಟೆಕ್ನಾಲಜಿ ಫಾರ್ ಪ್ಲಗ್ ಆ್ಯಂಡ್ ಪ್ಲೇ ಸೌಲಭ್ಯ ಸ್ಥಾಪನೆ. 2022-23ರಲ್ಲಿ 10 ಕೋಟಿ ರೂ. ಅನುದಾನ

  * ರಾಜ್ಯದ 15 ಪ್ರವಾಸಿ ತಾನಗಳ ಎಆರ್/ವಿಆರ್ ತುಣುಕುಗಳ ಸೃಜನೆಗೆ 15 ಕೋಟಿ ರೂ. ಅನುದಾನ

 • 4-3-2022
  01:14 pm

  ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ

  * ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ, 10,000 ಜನರಿಗೆ ಉದ್ಯೋಗಾವಕಾಶ

  * ಧಾರವಾಡದಲ್ಲಿ FMCG Cluster ಅಭಿವೃದ್ಧಿ. ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಘೋಷಣೆ. 

  * ಮುಂದಿನ ಎರಡು ವರ್ಷ ಸರ್ಕಾರದಿಂದದೇಲ ಮೈಷುಗರ್ ಕಾರ್ಖಾನೆ ನಡೆಸಲು ನಿರ್ಧಾರ. ಯಂತ್ರೋಪಕರಣ ದುರಸ್ತಿಗೆ 50 ಕೋಟಿ ರೂ. 

  * ಕಲಬುರಗಿ ಮತ್ತು ವಿಜಯಪುರದಲ್ಲಿ ಮೆಗಾ-ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾಪ

  * ನವಲಗುಂದ ಮತ್ತು ರಾಣೆ ಬೆನ್ನೂರಿನಲ್ಲಿ ಜವಳಿ ಪಾರ್ಕ್ ಸ್ಥಾಪನೆ. 

 • 4-3-2022
  01:12 pm

  ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಉದ್ಯೋಗ

  * ಆಯ್ದ ಸ್ವ-ಸಹಾಯ ಸಂಘಟಗಳಿಗೆ ತಲಾ 1.5 ಲಕ್ಷ ರೂ. ನರೆವು, 500 ಕೋಟಿ ರೂ. ಅನುದಾನ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಗುಂಪುಗಳಿಗೆ ವಿಶೇಷ ಆದ್ಯತೆ. 3.9 ಲಕ್ಷ ಮಹಿಳೆಯರಿಗೆ ಅನುಕೂಲ. 
  * ಮಹಿಳಾ ಸ್ವಸಹಾಯ ಸಂಘಗಳಿಗೆ ವಾಣಿಜ್ಯ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಒದಗಿಸಲು ಏಕಗವಾಕ್ಷಿ ಸಾಲ ಸೌಲಭ್ಯ ವ್ಯವಸ್ಥೆ

 • 4-3-2022
  01:11 pm

  ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1,000 ಕೋಟಿ ರೂ. ಅನುದಾನ

  * ತುಂಗಭದ್ರಾ ಜಲಾಶಯದ ನೀರು ಸಂಗ್ರಹನೆ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1,000 ಕೋಟಿ ರೂ. ಅನುದಾನ

  * 2021-22ನೇ ಸಾಲಿನಲ್ಲಿ ಅನುಮೋದಿಸಿದ 8,774 ಕೋಟಿ ರೂ.ಗಳ ಹೊಸ ನೀರಾವರಿ ಯೋಜನೆಗಳಿಗೆ ರೂಪುರೇಷೆ ಸಿದ್ಧಪಡಿಸಲು ಕ್ರಮ. 

  * ರಾಜ್ಯದ ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ. ಅದರಲ್ಲಿ ಪ್ರವಾಹದಿಂದ ಹಾನಿಯಾದ

  * ಕೆರೆಗಳ ದುರಸ್ತಿಗೆ 200 ಕೋಟಿ ರೂ. ಅನುದಾನ
   

 • 4-3-2022
  01:07 pm

  ನೀರಾವರಿಗೆ ಆದ್ಯತೆ

  *ರಾಜ್ಯದ ಪ್ರಮುಖ ನೀರಾವರಿ ಯೋಜನಗಳಿಗೆ ಮಾಡಲಾದ ಅನುದಾನ ಹಂಚಿಕೆ
  *ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3: 5000 ಕೋಟಿ ರೂ. 
  *ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ: 1000 ಕೋಟಿ ರೂ. 
  *ಭದ್ರಾ ಮೇಲ್ದಂಡೆ ಯೋಜನೆ: 3000 ಕೋಟಿ ರೂ. 
  *ಎತ್ತಿನಹೊಳೆ ಯೋಜನೆ: 3,000 ಕೋಟಿ ರೂ. ಅನುದಾನ
  *ಮೇಕೆದಾಟು ಯೋಜನೆ: 1,000 ಕೋಟಿ ರೂ. ಅನುದಾನ

 • 4-3-2022
  01:04 pm

  ಹಾಲು ುತ್ಪಾದಕರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್

  ಪಶು ಸಂಗೋಪನೆ, ಹೈನುಗಾರಿಕೆಗೆ ಉತ್ತೇಜನ:

  * ನೂತನ 100 ಪಶುಚಿಕಿತ್ಸಾಲಯಗಳ ಪ್ರಾರಂಭ,
  * ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ, ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಷೇರು  ಬಂಡವಾಳ
  * ರಾಜ್ಯದಲ್ಲಿರುವ ಗೋಶಾಲೆಗಳ ಸಂಖ್ಯೆ 100ಕ್ಕೆ ಹೆಚ್ಚಳ, 50 ಕೋಟಿ ರೂ. ಅನುದಾನ
  *ಗೋಶಾಲೆಗಳಲ್ಲಿನ ಗೋವುಗಳ ದತ್ತು ಪ್ರೋತ್ಸಾಹಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ.
   

 • 4-3-2022
  01:02 pm

  ಬೆಂಗಳೂರು ಸಮಗ್ರ ಅಭಿವೃದ್ಧಿ:

  ಮೂಲಸೌಕರ್ಯ ಅಭಿವೃದ್ಧಿ
  * ಬೆಂಗಳೂರು ನಗರದ ಮೂಲಭೂತ ಸೌಕರ್ಯಕ್ಕಾಗಿ ಮೂರು ವರ್ಷದಲ್ಲಿ ₹6,000 ಕೋಟಿ ವೆಚ್ಚದ ಅಮೃತ್

  ನಗರೋತ್ಥಾನ ಯೋಜನೆ ಅನುಷ್ಠಾನ. 
  * ನಾಡಪ್ರಭು ಕೆಂಪೇಗೌಡ ಬಡವಾಣೆ ನಿರ್ಮಾಣಕ್ಕೆ ಬಾಕಿ ಇರುವ 1,297 ಎಕರೆ ಭೂಸ್ವಾಧೀನ ಪೂರ್ಣಗೊಳಿಸಿ, ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಕ್ರಮ

 • 4-3-2022
  12:59 pm

  ಸಿಎಂ ಆರೋಗ್ಯ ವಾಹಿನಿ

  * ಆರೋಗ್ಯ ಸೇವೆಗೆ ಏರ್ ಆಂಬ್ಯುಲೆನ್ಸ್

  * ಹುಬ್ಬಳ್ಳಿಯಲ್ಲಿ 250 ಕೋಟಿ ವೆಚ್ಚದಲ್ಲಿ ಜಯದೇವ ಆಸ್ಪತ್ರೆ

  * ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು

 • 4-3-2022
  12:56 pm

  ನವ ಕರ್ನಾಟಕ ನಿರ್ಮಾಣ

  ನವ ಕರ್ನಾಟಕ ನಿರ್ಮಾಣಕ್ಕಾಗಿ ಪ್ರತಿ ವಿಭಾಗದಲ್ಲಿ ತಲಾ ಒಂದು ಯೋಜನಾಬದ್ಧ ಪರಿಸರಸ್ನೇಹಿ ನವನಗರ ಅಭಿವೃದ್ಧಿ.

 • 4-3-2022
  12:54 pm

  ಕರ್ನಾಟಕ ಬಜೆಟ್ ಲೈವ್ ಇಲ್ಲಿ ವೀಕ್ಷಿಸಿ

 • 4-3-2022
  12:52 pm

  ರೈತರ ಆದಾಯ ಹೆಚ್ಚಳಕ್ಕೆ ಆದ್ಯತೆ


  ರೈತ ಶಕ್ತಿ ನೂತನ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ 250 ರೂ. ಗಳಂತೆ ಡೀಸೆಲ್ ಸಹಾಯಧನ: ₹600 ಕೋಟಿ ಅನುದಾನ.

 • 4-3-2022
  12:51 pm

   ಆಯವ್ಯಯ ಗಾತ್ರ (ಸಂಚಿತ ನಿಧಿ): 2,65,720 ಕೋಟಿ ರೂ.

  ವಿವಿಧ ವಲಯಗಳಿಗೆ ಒದಗಿಸಲಾದ ಅನುದಾನ:
  1.ಕೃಷಿ ಮತ್ತು ಪೂರಕ ಚಟುವಟಿಕೆಗಳು: ₹33,700 ಕೋಟಿ
  2. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ: ₹68,479 ಕೋಟಿ
  3. ಆರ್ಥಿಕ ಅಭಿವೃದ್ಧಿಗೆ ಉತ್ತೇಜನ: ₹55,657 ಕೋಟಿ
  4. ಬೆಂಗಳೂರು ಸಮಗ್ರ ಅಭಿವೃದ್ಧಿ: ₹8,409 ಕೋಟಿ
  5. ಸಂಸ್ಕೃತಿ, ಸುಧಾರಣೆ ಮತ್ತು ಸಾರ್ವಜನಿಕ ಸೇವೆ: ₹56,710 ಕೋಟಿ

  ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಆಯವ್ಯಯದಲ್ಲಿ ಒದಗಿಸಿದ ಅನುದಾನ ₹43,188 ಕೋಟಿ

  ಮಕ್ಕಳ ಅಭ್ಯುದಯಕ್ಕೆ ಆಯವ್ಯಯದಲ್ಲಿ ಒದಗಿಸಿದ ಅನುದಾನ: ₹40,944 ಕೋಟಿ

 • 4-3-2022
  12:44 pm

  ರಾಜ್ಯದ ಜಿಎಸ್‌ಟಿ ಸಂಗ್ರಹ ಹೆಚ್ಚಾಗಿದ್ದು, ಚೇತರಿಕೆಯ ಹಾದಿಯಲ್ಲಿದೆ: ಬೊಮ್ಮಾಯಿ

  ನವ ಭಾರತಕ್ಕಾಗಿ ನವ ಕರ್ನಾಟಕದ ನಿರ್ಮಾಣ ಮಾಡಲಾಗುವುದ. ರಾಜ್ಯದ ಜಿಎಸ್‌ಟಿ ಸಂಗ್ರಹ ಹೆಚ್ಚಾಗಿದ್ದು, ಚೇತರಿಕೆಯ ಹಾದಿಯಲ್ಲಿದೆ.

 • 4-3-2022
  12:29 pm

  ಬಜೆಟ್ ಪ್ರತಿಯನ್ನು ಹಿಡಿದು ವಿಧಾನಸಭೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಜೆಟ್ ಪ್ರತಿಯನ್ನು ಹಿಡಿದು ವಿಧಾನಸಭೆಗೆ ಆಗಮಿಸಿದರು. ಸಚಿವರು ಮತ್ತು ಶಾಸಕರುಸಿಎಂ ಜೊತೆ ಆಗಮಿಸಿದ್ದಾರೆ.

  ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರು ವಿಧಾನಸೌಧಕ್ಕೆ ಆಗಮಿಸಿದರು.

 • 4-3-2022
  12:00 pm

  ಬೊಮ್ಮಾಯಿ ಜನಪರ ಬಜೆಟ್ ಕೊಡುವುದಕ್ಕೆ ಅವರ ಹಿಂದೆ ಇರುವವರು ಬಿಡಬೇಕಲ್ಲಾ: ಎಚ್‌ಡಿಕೆ

  ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಾಕಷ್ಟು ಅನುಭವ ಇರುವವರು. ಅವರು ಇಂದು ಮಂಡಿಸುತ್ತಿರುವ ಬಜೆಟ್ ಬಗ್ಗೆ ತೀವ್ರ ನಿರೀಕ್ಷೆ ಇದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

  ಬಜೆಟ್ ಅಧಿವೇಶನಕ್ಕೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬೊಮ್ಮಾಯಿ ಅವರಿಗೆ ಅನುಭವ ಏನೋ ಇದೆ. ಆದರೆ, ಅವರು ಜನಪರ ಬಜೆಟ್ ಮಂಡಿಸಲು ಅವರ ಹಿಂದೆ ಇರುವವರು ಬಿಡಬೇಕಲ್ಲ’ ಎಂದು ಪರೋಕ್ಷವಾಗಿ ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿದರು.

 • 4-3-2022
  11:53 am

  ಕರ್ನಾಟಕ ಬಜೆಟ್ ನೇರಪ್ರಸಾರ: ಇಲ್ಲಿ ವೀಕ್ಷಿಸಿ..

 • 4-3-2022
  11:47 am

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ, ಕರಾವಳಿಗೆ ಹಲವು ನಿರೀಕ್ಷೆ

 • 11:23 am

  12.30ಕ್ಕೆ ಸರಿಯಾಗಿ ಬಜೆಟ್ ಮಂಡನೆ

 • 11:17 am

  ಬಜೆಟ್‌ಗೂ ಮುನ್ನ ಸಿಎಂ ಅವರಿಂದ ವಿಶೇಷ ಪೂಜೆ

 • 10:57 am

  2022- 23 ನೇ ಸಾಲಿನ ಬಜೆಟ್ ಪುಸ್ತಕ ಸಿಎಂಗೆ ಹಸ್ತಾಂತರ

  ರೇಸ್ ಕೋರ್ಸ್ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಣಕಾಸು ಇಲಾಖೆ ಅಧಿಕಾರಿಗಳು ಬಜೆಟ್ ಪ್ರತಿಯನ್ನು ಹಸ್ತಾಂತರಿಸಿದರು. 

  ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್ ಎನ್ ಪ್ರಸಾದ್, ಕಾರ್ಯದರ್ಶಿಗಳಾದ ಎಕ್ ರೂಪ್ ಕೌರ್, ಪಿ ಸಿ ಜಾಫರ್ ಅವರು ಸಿಎಂ ಬೊಮ್ಮಾಯಿ ಅವರಿಗೆ ಬಜೆಟ್‌ ಪುಸ್ತಕ ಹಸ್ತಾಂತರಿಸಿದರು. ಈ ಸಂದರ್ಭ ಸಚಿವರಾದ ಗೋವಿಂದ ಕಾರಜೋಳ, ಸಿಸಿ ಪಾಟೀಲ್, ಬೈರತಿ ಬಸವರಾಜ ಉಪಸ್ಥಿತರಿದ್ದರು

 • 10:33 am

  ಪೂಜೆ ಸಲ್ಲಿಸಿದ ಬಳಿಕ ಸಿಎಂ ಬೊಮ್ಮಾಯಿ ಪೌರ ಕಾರ್ಮಿಕರ ಜತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.

 • 10:26 am

  ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

  ಚೊಚ್ಚಲ ಬಜೆಟ್ ಮಂಡನೆ ಮಾಡಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಶುಕ್ರವಾರ ಬೆಳಗ್ಗೆ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಮಸ್ತ ಕರ್ನಾಟಕದ ಜನತೆ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ರಾಜ್ಯದ ಜನತೆಗೆ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.