ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2026–27ನೇ ಸಾಲಿನ ಬಜೆಟ್ನಲ್ಲಿ ತವರು ಮೈಸೂರು ಜಿಲ್ಲೆಗೆ ಹಲವು ಕೊಡುಗೆಗಳ ‘ಬಾಗಿನ’ವನ್ನು ನೀಡಿದ್ದಾರೆ.

ಜಯದೇವ ಹೃದ್ರೋಗ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ಸಿಲ್ಕ್ ಪಾರ್ಕ್ ನಿರ್ಮಾಣ, ‘ಷ್ನೈಡರ್ ಎಲೆಕ್ಟ್ರಿಕ್ ಯೂತ್ ಇಂಪ್ಯಾಕ್ಟ್ ಕೇಂದ್ರ’ದಂಥ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ.

ಮೈಸೂರು ನಗರ ಕೇಂದ್ರಿತವಾದ ಘೋಷಣೆಗಳು ಹೆಚ್ಚು. ಹೊಸ ತಾಲ್ಲೂಕುಗಳಾದ ಸರಗೂರು ಹಾಗೂ ಸಾಲಿಗ್ರಾಮದ ಪ್ರಸ್ತಾಪವೇ ಇಲ್ಲ. ಬಹುಬೇಡಿಕೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಪಾರಂಪರಿಕ ಕಟ್ಟಡಗಳಿಗೆ ಅನುದಾನದ ಬೇಡಿಕೆಯ ಬಗ್ಗೆ ಚಕಾರವನ್ನೆತ್ತಿಲ್ಲ. ಬೃಹತ್ ಮೈಸೂರು ಮಹಾನಗರಪಾಲಿಕೆ (ಬಿಎಂಸಿಸಿ) ರಚನೆಗೆ ತಕ್ಕಂತೆ ಅನುದಾನದ ಪ್ರಸ್ತಾಪವಿಲ್ಲ.

ಆರೋಗ್ಯ ಕ್ಷೇತ್ರ, ಸೌಕರ್ಯ ಹಾಗೂ ಯುವಜನರ ಭವಿಷ್ಯ ರೂಪಿಸುವಂತಹ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ತಾವು ಪ್ರತಿನಿಧಿಸುವ ವರುಣ ಕ್ಷೇತ್ರಕ್ಕೆ ಕೆಲವು ಯೋಜನೆಗಳನ್ನು ಕೊಟ್ಟಿದ್ದಾರೆ.

ಸಿಕ್ಕಿದ್ದೇನು?

ಹೆಚ್ಚಿನ ಪ್ರವಾಸಿಗರು ಹಾಗೂ ಪರಿಸರ ಪ್ರೇಮಿಗಳನ್ನು ಆಕರ್ಷಿಸಲು, ನಗರದ ಲಿಂಗಾಂಬುಧಿ ಪಾಳ್ಯದಲ್ಲಿರುವ ‘ಲಿಂಗಾಂಬುಧಿ ಸಸ್ಯತೋಟ’ವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದಿದ್ದರೂ ಅನುದಾನದ ಉಲ್ಲೇಖವಿಲ್ಲ. ‘ಜೀವವೈವಿಧ್ಯದ ತಾಣವಾದ ಕೆರೆಗೆ ಚರಂಡಿ ನೀರು ಸೇರ್ಪಡೆಯು ತಲೆನೋವಾಗಿದ್ದು, ತಡೆಯಬೇಕು’ ಎಂಬುದು ಸ್ಥಳೀಯರ ಹಾಗೂ ಪರಿಸರ ಪ್ರೇಮಿಗಳ ಒತ್ತಾಯ. ಈ ನಡುವೆಯೇ ಅಭಿವೃದ್ಧಿಯ ಘೋಷಣೆ ಹೊರಬಿದ್ದಿದೆ. ನಂಜನಗೂಡು ತಾಲ್ಲೂಕಿನತಾಂಡವಪುರದಲ್ಲಿ ‘ಸಿಲ್ಕ್ ಪಾರ್ಕ್’ ಸ್ಥಾಪನೆ ಬಗ್ಗೆ ಘೋಷಿಸಲಾಗಿದೆ. ಇದಕ್ಕೆ ಅನುದಾನದ ಪ್ರಸ್ತಾಪವಿಲ್ಲ.

ಮೇಕೆ ತಳಿ ಸಂವರ್ಧನಾ ಕೇಂದ್ರ: ಸ್ಥಳೀಯ ಮೇಕೆ ತಳಿಗಳ ಉನ್ನತೀಕರಣಕ್ಕಾಗಿ ಮೈಸೂರಿನಲ್ಲಿ ‘ಬೋಯರ್’ ಮೇಕೆ ತಳಿ ಸಂವರ್ಧನಾ ಕೇಂದ್ರ ಸ್ಥಾಪನೆ, ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದಾಗಿ ಪ್ರಕಟಿಸಲಾಗಿದೆ.

ರಾಜ್ಯ ಉಗ್ರಾಣ ನಿಗಮವನ್ನು ಆರ್ಥಿಕವಾಗಿ ಸದೃಢಗೊಳಿಸಲು ಅನುಪಯುಕ್ತ ಆಸ್ತಿಗಳ ನಗದೀಕರಣಕ್ಕೆ ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮೈಸೂರಿನ ಬಂಬೂಬಜಾರ್ನಲ್ಲಿರುವ ಕೇಂದ್ರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು ಎಂದು ತಿಳಿಸಲಾಗಿದೆ.

ವಸತಿ ನಿಲಯ: ಪರಿಶಿಷ್ಟ ಉದ್ಯೋಗಸ್ಥ ಮಹಿಳೆಯರಿಗೆ ತಲಾ 50 ಸಂಖ್ಯಾಬಲದ 10 ವಸತಿನಿಲಯಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದರೂ ಮೈಸೂರಿಗೆ ಎಷ್ಟು ಎಂಬುದು ಸ್ಪಷ್ಟವಿಲ್ಲ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ 150 ಸಂಖ್ಯಾಬಲದ 50 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗುವುದು ಎಂದಿದೆ. ಮೈಸೂರಿಗೆ ಎಷ್ಟು ಎನ್ನುವುದು ಪ್ರಸ್ತಾಪಿಸಿಲ್ಲ.

ನಗರದ ಧೋಬಿಘಾಟ್ನಲ್ಲಿ ಮಡಿವಾಳ ಸಮಾಜದವರಿಗೆ ವಾಷಿಂಗ್ ಮಷಿನ್, ಡ್ರೈಯರ್ ಮತ್ತು ಐರನಿಂಗ್ ಮೆಷಿನ್ ಮೊದಲಾದ ಸಾಮಗ್ರಿಗಳನ್ನು ಒಳಗೊಂಡಂತೆ ₹ 75 ಲಕ್ಷ ವೆಚ್ಚದಲ್ಲಿ ಆಧುನಿಕ ಲ್ಯಾಂಡ್ರಿ ಸ್ಥಾಪಿಸಲಾಗುವುದು.

₹ 16 ಕೋಟಿ ವೆಚ್ಚದಲ್ಲಿ ಕೇಂದ್ರ: ಮೈಸೂರಿನಲ್ಲಿ ₹ 16 ಕೋಟಿ ವೆಚ್ಚದಲ್ಲಿ ಷ್ನೈಡರ್ ಎಲೆಕ್ಟ್ರಿಕ್ (Schneider Electric) ಯೂತ್ ಇಂಪ್ಯಾಕ್ಟ್ ಕೇಂದ್ರ ಸ್ಥಾಪನೆಗೆ ಬಗ್ಗೆ ಘೋಷಿಸಲಾಗಿದೆ. ಪ್ರತಿ ವರ್ಷ ಒಟ್ಟಾರೆ 2ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗವಕಾಶ ಕಲ್ಪಿಸಲು ನೆರವಾಗಲಿದೆ. ಮೈಸೂರಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಆರಂಭಿಸಲಾಗುವುದು ಎಂದು ಪ್ರಕಟಿಸಲಾಗಿದೆ.

‘ಕಾವಾ’ದಲ್ಲಿ ಕಲಾ ಗ್ಯಾಲರಿ ನಿರ್ಮಾಣ: ನಗರದ ಸಿದ್ಧಾರ್ಥನಗರದಲ್ಲಿರುವ ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನ (ಕಾವಾ) ಸಂಸ್ಥೆಯ ಆವರಣದಲ್ಲಿ ಸುಸಜ್ಜಿತ ಕಲಾ ಗ್ಯಾಲರಿ ಸಭಾಂಗಣ ನಿರ್ಮಾಣ, ಲ್ಯಾಂಡ್ಸ್ಕೇಪಿಂಗ್ ಶಿಲ್ಪಕಲಾ ಕೃತಿಗಳ ಪೆಡೆಸ್ಟಲ್ಗಳ ನಿರ್ಮಾಣ ಸೇರಿ ಮೂಲಸೌಕರ್ಯ ಕಲ್ಪಿಸಲು ₹ 2 ಕೋಟಿ ಒದಗಿಸಲಾಗುವುದು ಎಂದು ಪ್ರಕಟಿಸಲಾಗಿದೆ.

ಮೈಸೂರಿನ ‘ರಂಗನಿರಂತರ’ ಸಂಸ್ಥೆಗೆ ಅನುದಾನ, ದಟ್ಟಗಳ್ಳಿಯಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಿಸಲಾಗುವುದು. ಮೈಸೂರಿನಲ್ಲಿರುವ ವಸ್ತುಪ್ರದರ್ಶನ ಪ್ರಾಧಿಕಾರದ ಸಮಗ್ರ ಮೂಲಸೌಕರ್ಯಕ್ಕಾಗಿ ₹ 10 ಕೋಟಿ ಎಂದು ತಿಳಿಸಲಾಗಿದೆ.

ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಪಿಪಿಪಿ ಮಾದರಿಯಲ್ಲಿ ಪ್ರಕೃತಿ ನಿರೂಪಣಾ ಕೇಂದ್ರ ಸ್ಥಾಪನೆಯ ಯೋಜನೆ ಪ್ರಕಟಿಸಲಾಗಿದೆ.

ಚಿತ್ರನಗರಿಗಾಗಿ: ಮೈಸೂರು ಫಿಲ್ಮ್ ಸಿಟಿ (ಚಿತ್ರ ನಗರಿ) ಸ್ಥಾಪಿಸಲು ಈ ಮೊದಲು ₹ 500 ಕೋಟಿಗೆ ಅನುಮೋದನೆ ನೀಡಲಾಗಿತ್ತು. ಫಿಲ್ಮ್ ಸಿಟಿ ಸೌಲಭ್ಯಗಳನ್ನು ಒಳಗೊಂಡಂತೆ ಪ್ರವಾಸಿಗರಿಗೆ ಅನುಕೂಲ ಆಗುವಂತೆ ಥೀಮ್ ಪಾರ್ಕ್, ಸ್ಟಾರ್ ಹೊಟೇಲ್ ಮತ್ತು ರೆಸ್ಟೊರಂಟ್ಗಳನ್ನು ಒಳಗೊಂಡು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ವ್ಯವಹಾರ ವಹಿವಾಟುದಾರರನ್ನು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ ‘ಇ-ಕೋರ್ಟ್’ ಸ್ಥಾಪನೆ ಬಗ್ಗೆ ಪ್ರಕಟಿಸಲಾಗಿದೆ.

ಮೈಸೂರು ರಾಜ್ಯದ ‘2ನೇ ಐಟಿ ಸಿಟಿ’...

ಮೈಸೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿದ್ದರಿಂದ 100 ಕಂಪನಿಗಳಲ್ಲಿ 30ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಹಾಗೂ ವಿಕೇಂದ್ರೀಕೃತ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮೈಸೂರು ನಗರವನ್ನು ರಾಜ್ಯದ 2ನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಲಾಗಿದೆ.

ಏರೋಸ್ಪೇಸ್ ಕೈಗಾರಿಕೆಗಳನ್ನು ಉತ್ತೇಜಿಸಲು ಮೈಸೂರು ಮಂಡಕಳ್ಳಿಯಲ್ಲಿರುವ ವಿಮಾನನಿಲ್ದಾಣದ ಸಮೀಪದಲ್ಲಿ ಕೆಐಎಡಿಬಿಯಿಂದ ‘ಏರೋಸ್ಪೇಸ್ ಪಾರ್ಕ್’ ಅಭಿವೃದ್ಧಿಪಡಿಸಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಮೈಸೂರಿನಲ್ಲಿ ಉದ್ಯಮಿಗಳಿಗೆ ಇನ್ಕ್ಯುಬೇಶನ್ ಸೌಲಭ್ಯಗಳನ್ನು ಒದಗಿಸಲು ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪ್ಲಗ್-ಅಂಡ್-ಪ್ಲೇ ಸೌಲಭ್ಯದ ‘ಲೀಪ್ ಲ್ಯಾಬ್ಸ್: ಸ್ಥಾಪಿಸಲಾಗುವುದು. ಮೈಸೂರಿನ ಕೆಲವು ಭಾಗಗಳಲ್ಲಿ ಯುಜಿಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಇನ್ನಷ್ಟು..

ಮೈಸೂರು ತಾಲ್ಲೂಕಿನ ಬಿದ್ರಹಳ್ಳಿಹುಂಡಿ ಬಳಿ ಕಾಲುವೆಯ ಆಧುನೀಕರಣ.

ತಿ. ನರಸೀಪುರ ತಾಲ್ಲೂಕಿನ ಹಾರೋಹಳ್ಳಿ ಬಳಿ ಕಾಲುವೆಯ ಆಧುನೀಕರಣ. ಹೈ ಲೆವೆಲ್ ಹಾಗೂ ಲೋ ಲೆವೆಲ್ ಕಾಲುವೆಗಳ ಆಯಕಟ್ಟನ್ನು ಹೆಚ್ಚಿಸಲು ನೀರನ್ನು ಎತ್ತುವ ಯೋಜನೆ.

ಕಬಿನಿ ಬಲದಂಡೆ ನಾಲೆಯ ವಿತರಣಾ ನಾಲೆ ಸಂ.35ರ ಆಧುನೀಕರಣ.

ತಿ. ನರಸೀಪುರ ತಾಲ್ಲೂಕಿನ ರಾಜರಾಜೇಶ್ವರಿ ಕಾಲುವೆ, ಹರೋಹಳ್ಳಿ ಹೈ ಲೆವೆಲ್ ಕಾಲುವೆಗಳ ಸುಧಾರಣೆ.

ತಿ. ನರಸಿಪುರ ತಾಲ್ಲೂಕಿನ ಆರ್.ಪಿ. ಕಾಲುವೆಯ ಹರೋಹಳ್ಳಿ ಪಿಕಪ್ ಕಾಲುವೆ ಹಾಗೂ ಬಂಡಿಬಚ್ಚಲು ಶಾಖಾ ಕಾಲುವೆಯ ಸುಧಾರಣೆ.

ಮೈಸೂರು ತಾಲ್ಲೂಕಿನ ಚಿಕ್ಕಂಕನಹಳ್ಳಿ ಕೆರೆಯ ಅಡಿಯಲ್ಲಿ ಕಿಗ್ಗಾಲುವೆ ಮತ್ತು ಮೆಗ್ಗಾಲುವೆಗಳ ಆಧುನೀಕರಣ.

ಕಬಿನಿ ಅಣೆಕಟ್ಟೆಯ ಮೇಲ್ಭಾಗದಲ್ಲಿ ಪುನರುಜ್ಜೀವನ ಕಾಮಗಾರಿ.

ತಿ. ನರಸೀಪುರ ತಾಲ್ಲೂಕಿನ ನಂಜಾಪುರ ಏತ ನೀರಾವರಿ ಯೋಜನೆ.

ಕಟ್ಟೆಮಳವಾಡಿ ಕಾಲುವೆ ಹಾಗೂ ವಡಕೆಕಟ್ಟೆ ಹೈ ಲೆವೆಲ್ ಕಾಲುವೆಗಳ ಸುಧಾರಣೆ.

ವರುಣ ಕೆರೆಯ ಪುನರುಜ್ಜೀವನ ಮತ್ತು ಸಂರಕ್ಷಣೆ. ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸರಣಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಯೋಜಿಸಲಾಗಿದೆ.

ವರುಣ ಕ್ಷೇತ್ರದ ಗ್ರಾಮಗಳ ಕೆರೆಗಳಿಗೆ ಏತ ನೀರಾವರಿ ಕಾಮಗಾರಿ.

ಜಿಲ್ಲೆಯ ಕೆರೆಗಳ ಕೆರೆ ಹಾಗೂ ನಾಲೆ ಅಭಿವೃದ್ಧಿ.

ಹೆಮ್ಮಿಗೆ–ಮುದುಗನೂರು ಫೀಡರ್ ನಾಲೆ ಅಭಿವೃದ್ಧಿ. ನಂಜನಗೂಡು ತಾಲ್ಲೂಕು ಕಾರ್ಯ ಗ್ರಾಮದ ಇಂಗು ಕೆರೆಯ ಅಭಿವೃದ್ಧಿ ಕಾಮಗಾರಿ.

ವರುಣ, ಎಚ್.ಡಿ. ಕೋಟೆ, ಪಿರಿಯಾಪಟ್ಟಣ, ನಂಜನಗೂಡು, ಕೆ.ಆರ್. ನಗರ ಕ್ಷೇತ್ರದಲ್ಲಿ ಶ್ರಮಿಕ ವಸತಿ ಶಾಲೆ.

.Karnataka Budget: 17ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.