ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

87 ನಿಮಿಷದಲ್ಲಿ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌

Last Updated 1 ಫೆಬ್ರುವರಿ 2023, 9:42 IST
ಅಕ್ಷರ ಗಾತ್ರ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಸತತ 5ನೇ ಬಜೆಟ್‌ ಮಂಡನೆ ಪೂರ್ಣಗೊಳಿಸಿದ್ದು, ಈ ಸಲದ ಬಜೆಟ್‌ ಭಾಷಣವನ್ನು 87 ನಿಮಿಷಗಳಲ್ಲಿ ಮುಗಿಸಿದ್ದಾರೆ.

ಹಿಂದಿನ ವರ್ಷ 92 ನಿಮಿಷಕ್ಕೆ ಮುಗಿಸಿದ್ದರು. ಇದು ಅತ್ಯಂತ ಕಡಿಮೆ ಅವಧಿಯ ಬಜೆಟ್‌ ಭಾಷಣ ಎಂಬ ದಾಖಲೆ ಮಾಡಿತ್ತು. 2021ರಲ್ಲಿ ಒಂದು ಗಂಟೆ 50 ನಿಮಿಷಗಳ ಕಾಲ ಮಾತನಾಡಿದ್ದರು.

2020ರಲ್ಲಿ 2 ಗಂಟೆ 40 ನಿಮಿಷ ಬಜೆಟ್‌ ಮಂಡಿಸಿ ಸುದೀರ್ಘ ಬಜೆಟ್‌ ಮಂಡನೆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಈ ಬಜೆಟ್‌ ವೇಳೆ ಅವರು ಸಣ್ಣ ವಿರಾಮವನ್ನು ತೆಗೆದುಕೊಂಡಿದ್ದರು. ‌

ಅಮೃತ ಕಾಲದ ಮೊದಲ ಬಜೆಟ್‌ ಎಂದು ಇಂದಿನ ಭಾಷಣ ಪ್ರಾರಂಭಿಸಿದ ಸೀತಾರಾಮನ್‌, ಸಮಗ್ರ ಅಭಿವೃದ್ಧಿಯೇ ನರೇಂದ್ರ ಮೋದಿ ಸರ್ಕಾರದ ಮೊದಲ ಆದ್ಯತೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT