ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget-2022 ವಿಶ್ಲೇಷಣೆ: ತೃಪ್ತಿಯ ಬೂಸ್ಟರ್ ಡೋಸ್

Last Updated 1 ಫೆಬ್ರುವರಿ 2022, 18:58 IST
ಅಕ್ಷರ ಗಾತ್ರ

ಕೇಂದ್ರ ಬಜೆಟ್ 2022–23 ದೇಶದ ನಾಗರಿಕರಲ್ಲಿ ತೃಪ್ತಿಯ ಬೂಸ್ಟ್‌ರ ಡೋಸ್‌ ತಂದಿದೆ.

ಉತ್ತಮ ಜೀವನದ ಹುಡುಕಾಟದಲ್ಲಿರುವ ಯುವಕರು, ಪರಿಶಿಷ್ಟ ಜಾತಿ, ಪಂಗಡಗಳು, ಅಲ್ಪ ಸಂಖ್ಯಾತರು, ಹಾಗೂ ಮಹಿಳೆಯರ ಆಕಾಂಕ್ಷೆಯ ಮಾನವ ಸಂಪನ್ಮೂಲವನ್ನು ಪುನರುಜ್ಜೀವನಗೊಳಿಸಿ, ಮೂಲ ಸೌಕರ್ಯಗಳೊಂದಿಗೆ ಕೌಶಲ್ಯಾಭಿವೃದ್ಧಿ, ಆರೋಗ್ಯ ಹಾಗೂ ರೈತರ ಪರವಾಗಿ ಹೆಚ್ಚಿನ ಗಮನ ಹರಿಸಿ ಶಿಕ್ಷಣ ವೆಚ್ಚವನ್ನು ಹೆಚ್ಚಿಸುವಂತಹ ಧ್ಯೇಯಗಳೊಂದಿಗೆ ಒಟ್ಟು ಸಮಾಜದ ವಿವಿಧ ವಲಯಗಳನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯನ್ನು ಈ ಬಜೆಟ್ ಹೊಂದಿದೆ.

* ಮೂಲ ಸೌಕರ್ಯಗಳನ್ನು ಬಳಸಿ, ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಡವರಿಗೆ ಉದ್ಯೋಗಾವಕಾಶವನ್ನು ಒದಗಿಸಲು ಆದ್ಯತೆ ನೀಡಲಾಗಿದೆ.

* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಇತ್ತೀಚೆಗೆ ಮಿಷನ್ ಸಾಕ್ಷಿ ವಾತ್ಸಲ್ಯ ಸಕ್ಷಮ್ ಅಂಗನವಾಡಿಗಳು ಮತ್ತು ಪೋಷಣ್ 2.0 ಅನ್ನು ಪ್ರಾರಂಭಿಸಿ ಬಲಪಡಿಸಿತು. ಈಗ 2 ಲಕ್ಷ ಅಂಗನವಾಡಿಗಳನ್ನು ಸಕ್ಷಮ ಅಂಗನವಾಡಿಗಳಾಗಿ ಮೇಲ್ದರ್ಜೆಗೆ ಏರಿಸುವುದು ಸ್ವಾಗತಾರ್ಹ ಕ್ರಮವಾಗಿದೆ. ಮಕ್ಕಳಲ್ಲಿ ಬಲವಾದ ಶೈಕ್ಷಣಿಕ ಅಡಿಪಾಯ ಹಾಕುವ ಈ ಕ್ರಮ ನಿರ್ಣಾಯಕವಾದುದಾಗಿದೆ.

* ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗಾಗಿ ಸರ್ಕಾರ ಕೈಗೊಂಡಿರುವುದು ಮಾನವೀಯ ನಡೆ. ಆಡು ಭಾಷೆಗಳಲ್ಲಿ ಡಿಜಿಟಲ್ ವಿಶ್ವವಿದ್ಯಾಲಯದ ಸ್ಥಾಪನೆಯು ಯುವ ಭಾರತವನ್ನು ಪುನರುಜ್ಜೀವನಗೊಳಿಸುತ್ತದೆ. ಎನ್.ಇ.ಪಿ 2020 ಅನುಷ್ಠಾನಕ್ಕೆ ಅನುಕೂಲವಾಗುತ್ತದೆ. ಸಮಗ್ರ ಶಿಕ್ಷಾ ಅಭಿಯಾನ ಶೇ 28 ಆತ್ಮ ನಿರ್ಭರ್ ಭಾರತ್ ರೋಜಗಾರ ಯೋಜನೆಗೆ ಶೇ 28, ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆ ಶೇ 35 ಹೆಚ್ಚಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ₹63,449 ಕೋಟಿ, ಉನ್ನತ ಶಿಕ್ಷಣಕ್ಕೆ ₹40,828 ಕೋಟಿ ಬಜೆಟ್ ಮಂಜೂರು ಮಾಡಿದೆ. ಆದರೆ ಪ್ರಾಥಮಿಕ ಮತ್ತು ಪ್ರೌಢ ಹಾಗೂ ಉನ್ನತ ಶಿಕ್ಷಣಕ್ಕೆ ಇನ್ನು ಹೆಚ್ಚಿನ ಹಣವನ್ನು ಮಂಜೂರು ಮಾಡಬೇಕಿತ್ತು.

* ಈಸ್‌ ಆಫ್ ಡುಯಿಂಗ್ ಬಿಸಿನೆಸ್ 2.0 ಮತ್ತು ಈಸ್‌ ಆಫ್ ಲಿವಿಂಗ್ ನ ಮುಂದಿನ ಹಂತ ಆರಂಭಿಸುವುದರಿಂದ ಬಂಡವಾಳ ಮತ್ತು ಮಾನವ ಸಂಪನ್ಮೂಲಗಳ ಉತ್ಪಾದಕ ದಕ್ಷತೆಯನ್ನು ಸುಧಾರಿಸುವಂತಾಗುತ್ತದೆ. ಎಸ್.ಇ.ಝಡ್ ಗಳ ಸಂಪೂರ್ಣ ಐಟಿ ಚಾಲಿತ ಕಸ್ಟಮ್ಸ್ ಅಡ್ಮಿನಿಸ್ಟ್ರೇಷನ್, ಎಸ್.ಇ.ಝಡ್ ಘಟಕಗಳ ವ್ಯವಹಾರವನ್ನು ಗಣನೀಯವಾಗಿ ಸುಲಭಗೊಳಿಸುತ್ತದೆ.

* ಉದ್ಯಮ, ಇ-ಶ್ರಮ್, ಎನ್.ಸಿ.ಎಸ್. ಮತ್ತು ಎ.ಎಸ್.ಇ.ಇ.ಎಂ. ಪೋರ್ಟಲ್ ಗಳನ್ನು ಎಂಎಸ್‌ಎಂಇ ಗಳಿಗೆ ಸಾಲ ಸೌಲಭ್ಯ ಕೌಶಲ ಮತ್ತು ನೇಮಕಾತಿಗೆ ಲಿಂಕ್ ಮಾಡುವುದು ಎಲ್ಲರಿಗೂ ಉದ್ಯಮಶೀಲತೆಯ ಅವಕಾಶಗಳನ್ನು ಹೆಚ್ಚಿಸುವ ಗುರಿಯೊಂದಿಗೆ ಯುವಶಕ್ತಿಗೆ ಉತ್ತಮ ವರವಾಗಿದೆ.

* ರಾಷ್ಟ್ರೀಯ ಶಿಕ್ಷಣ ನೀತಿ 2020 ಒಟ್ಟು ಬಜೆಟ್ ನ ಕನಿಷ್ಠ ಶೇ 6ರಷ್ಟು ಶಿಕ್ಷಣಕ್ಕೆ ಮೀಸಲಿರಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಶಿಕ್ಷಣದ ನಿರ್ಣಾಯಕ ಅಂಶಗಳಾದ, ಒಳ್ಳೆಯ ಶಿಕ್ಷಕರನ್ನು ಒದಗಿಸುವುದು, ಶಿಕ್ಷಕರ ತರಬೇತಿ ಇತ್ಯಾದಿಗಳಿಗೆ ಹಣಕಾಸಿನ ಬೆಂಬಲವನ್ನು ನೀಡುತ್ತದೆ.ಪರಿಣಾಮಕಾರಿ ಶಿಕ್ಷಣ, ಸಂಪನ್ಮೂಲಗಳಸೂಕ್ತ ಬಳಕೆಗೆ ಯೋಜಿಸಲಾಗಿದೆ. ಈಗಾಗಲೆ ಮಂಜೂರು ಮಾಡಿದ ಹಣಕ್ಕಿಂತ ಇನ್ನೂ ಹೆಚ್ಚಿನ ಹಣ
ವನ್ನು ಉನ್ನತ ಶಿಕ್ಷಣಕ್ಕೆ ಮೀಸಲಿಡಬಹುದಿತ್ತು.

* ಗ್ರಾಮೀಣ ಭಾಗದ ಪರಿಶಿಷ್ಟ ಪಂಗಡದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಸ್ಕಾಲರ್ ಶಿಪ್ ಹಾಗೂ ವಯಸ್ಕರ ಶಿಕ್ಷಣಕ್ಕಾಗಿ ಪಡನಾ ಲಿಖನಾ ಅಭಿಯಾನ್ ಮುಂದುವರಿಸಬೇಕಿತ್ತು.ಮಹಿಳಾ ಉದ್ಯಮಿಗಳಿಗೆ ತೆರಿಗೆ ಸಡಿಲಿಕೆಯು ಹಾಗೂ 2ರಿಂದ 3 ವರ್ಷಗಳವರೆಗೆ ಅಸಾಧಾರಣ ಅಥವಾ ಹೆಚ್ಚುವರಿ ಸೆಕ್ಷನ್ 80 ಸಿ ಪ್ರಯೋಜನ ನೀಡುವ ನಿರೀಕ್ಷೆಯಿತ್ತು.

ಒಟ್ಟನಲ್ಲಿ ಈ ಬಜೆಟ್ ಕೋವಿಡ್ ನಂತರ, ಯುವಶಕ್ತಿಯ ಸರ್ವಾಂಗೀಣ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸಿದ ಬಜಟ್ ಇದಾಗಿದೆ. ಅತಿ ಮಹತ್ವಾಕಾಂಕ್ಷೆಯ ಬಜೆಟ್ ಕೇವಲ ಆತ್ಮನಿರ್ಭರ್ ಆಗಿ ಮಾಡದೆ, ಜಾಗತಿಕ ಶಕ್ತಿ ಕೇಂದ್ರವನ್ನಾಗಿ ರೂಪಿಸಿ ಯುವಸಮುದಾಯದಲ್ಲಿ ಆತ್ಮಸ್ಥೈರ್ಯ ತುಂಬಲಿದೆ.

ಲೇಖಕರು: ವಿಶ್ರಾಂತ ಕುಲಪತಿ

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT