ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2022: ಪರಿಸರ ಸಚಿವಾಲಯಕ್ಕೆ ಅನುದಾನ ಹಂಚಿಕೆ ಹೆಚ್ಚಳ

Last Updated 1 ಫೆಬ್ರುವರಿ 2022, 18:58 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಪರಿಸರ ಸಚಿವಾಲಯಕ್ಕೆ ಕಳೆದ ಸಾಲಿಗಿಂತ ಶೇಕಡ 5.6 ರಷ್ಟು ಅನುದಾನವನ್ನು ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿಸಿರುವ ಕೇಂದ್ರ ಸರ್ಕಾರ, ಮಾಲಿನ್ಯ ನಿಯಂತ್ರಣಕ್ಕೆ ಮಾಡಲಾಗಿದ್ದ ಹಂಚಿಕೆಯಲ್ಲಿ ₹ 10 ಕೋಟಿಗಳಷ್ಟು ಕಡಿತಗೊಳಿಸಿದೆ.

ನ್ಯಾಷನಲ್‌ ಮಿಷನ್‌ ಫಾರ್‌ ಗ್ರೀನ್‌ ಇಂಡಿಯಾಗೆ ಕಳೆದ ಹಣಕಾಸು ವರ್ಷದಲ್ಲಿ ನೀಡಲಾಗಿದ್ದ ₹290 ಕೋಟಿ ಹಣವನ್ನು ₹361.69 ಕೋಟಿಗೆ ಏರಿಕೆ ಮಾಡಲಾಗಿದೆ. ಇದರಲ್ಲಿರಾಷ್ಟ್ರೀಯ ಅರಣ್ಯೀಕರಣ ಕಾರ್ಯಕ್ರಮಕ್ಕೆ ₹300 ಕೋಟಿ ನಿಗದಿ ಮಾಡಲಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ₹460 ಹಂಚಿಕೆ ಮಾಡಲಾಗಿದ್ದು, ಇದು ಕಳೆದ ವರ್ಷದ ಬಜೆಟ್‌ನಲ್ಲಿ ನೀಡಲಾಗಿದ್ದ ಮೊತ್ತಕ್ಕಿಂತ ₹10 ಕೋಟಿ ಕಡಿಮೆಯಾಗಿದೆ.

ಕೇಂದ್ರ ಸರ್ಕಾರವು ವನ್ಯಜೀವಿ ಸಂರಕ್ಷಣೆಗಾಗಿ ಪ್ರಾರಂಭಿಸಿರುವ ಪ್ರಾಜೆಕ್ಟ್‌ ಟೈಗರ್‌ ಮತ್ತು ಪ್ರಾಜೆಕ್ಟ್‌ ಎಲಿಫೆಂಟ್‌ ಯೋಜನೆಗಳಿಗೆ ಈ ವರ್ಷ ಹಂಚಿಕೆಯನ್ನು ಹೆಚ್ಚಳ ಮಾಡಲಾಗಿದೆ. ಪ್ರಾಜೆಕ್ಟ್‌ ಟೈಗರ್‌ಗೆ ₹50 ಕೋಟಿ (₹300 ಕೋಟಿ) ಹಾಗೂಪ್ರಾಜೆಕ್ಟ್‌ ಎಲಿಫೆಂಟ್‌ಗೆ ₹ 2 ಕೋಟಿಯನ್ನು (₹35 ಕೋಟಿ) ಏರಿಕೆ ಮಾಡಲಾಗಿದೆ. ಕಳೆದ ವರ್ಷ ಪ್ರಾಜೆಕ್ಟ್‌ ಟೈಗರ್‌ ಮತ್ತುಪ್ರಾಜೆಕ್ಟ್‌ ಎಲಿಫೆಂಟ್‌ಗೆ ಕ್ರಮವಾಗಿ ₹250 ಕೋಟಿ ಹಾಗೂ ₹33 ಕೋಟಿ ಹಂಚಿಕೆ ಮಾಡಲಾಗಿತ್ತು.

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT