ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್: ಪಿಎಂಎಸ್‌ಎಸ್‌ವೈ ಎರಡು ಉಪ ಯೋಜನೆಗಳಾಗಿ ವಿಂಗಡಣೆ

Last Updated 1 ಫೆಬ್ರುವರಿ 2023, 13:55 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ್‌ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯನ್ನು (ಪಿಎಂಎಸ್‌ಎಸ್‌ವೈ) ಹೊಸ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ಎರಡು ಉಪ ಯೋಜನೆಗಳಾಗಿ ವಿಭಜಿಸಲಾಗಿದೆ.

ಮೊದಲನೆಯದು ಪಿಎಂಎಸ್‌ಎಸ್‌ವೈ; ಇದಕ್ಕೆ ₹3,365 ಕೋಟಿ ಅನುದಾನ, ಎರಡನೆಯದು 22 ಹೊಸ ಎಐಐಎಂಎಸ್‌ (ಏಮ್ಸ್‌) ಸ್ಥಾಪನಾ ವೆಚ್ಚದ ಯೋಜನೆ; ಇದಕ್ಕಾಗಿ ₹6,835 ಕೋಟಿ ಅನುದಾನ ಹಂಚಿಕೆಯಾಗಿದೆ.

ನ್ಯಾಷನಲ್‌ ಹೆಲ್ತ್‌ ಮಿಷನ್‌ಗೆ ₹29,085.26 ಕೋಟಿ, ಪ್ರಧಾನ್ ಮಂತ್ರಿ ಜನ್‌ ಆರೋಗ್ಯ ಯೋಜನೆಗೆ (ಪಿಎಂ–ಜೆಎವೈ) ₹7,200 ಕೋಟಿ, ನ್ಯಾಷನಲ್‌ ಹೆಲ್ತ್‌ ಡಿಜಿಟಲ್‌ ಮಿಷನ್‌ಗೆ ₹341.02 ಕೋಟಿ, ನ್ಯಾಷನಲ್‌ ಟೆಲಿ ಮೆಂಟಲ್‌ ಹೆಲ್ತ್‌ ಪ್ರೋಗ್ರಾಮ್‌ಗೆ ₹133.73 ಕೋಟಿ, ಆರೋಗ್ಯ ವಲಯದ ಸ್ವಾಯತ್ತ ಸಂಸ್ಥೆಗಳಿಗೆ ₹17,322.55 ಕೋಟಿ ಅನುದಾನ ಹಂಚಿಕೆಯಾಗಿದೆ. ಆದರೆ, ‌‌ನವದೆಹಲಿಯ ಎಐಐಎಂಎಸ್‌ಗೆ ನೀಡಲಾಗುತ್ತಿದ್ದ ಅನುದಾನವನ್ನು ₹4,400.24 ಕೋಟಿಯಿಂದ ₹ 4,134.67 ಕೋಟಿಗೆ ಇಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT