ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಹೊಸ್ತಿಲಲ್ಲಿ ಬೊಮ್ಮಾಯಿ ಜಾಣ ನಡೆ: ಬಜೆಟ್‌ ಕುರಿತು ತಜ್ಞರ ಅಭಿಪ್ರಾಯ

Last Updated 4 ಮಾರ್ಚ್ 2022, 13:46 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಶುಕ್ರವಾರ ಚೊಚ್ಚಲ ಬಜೆಟ್‌ ಮಂಡಿಸಿದ್ದಾರೆ.

ರಾಜ್ಯ ಬಜೆಟ್‌ ಒಳನೋಟ ಕುರಿತು ಆರ್ಥಿಕ ತಜ್ಞ ಆರ್.ಜಿ. ಮುರಳೀಧರ್ ಹಾಗೂ ಅರ್ಥಶಾಸ್ತ್ರಜ್ಞೆ ಸಂಗೀತಾ ಕಟ್ಟಿಮನಿ ಅವರು ‘ಪ್ರಜಾವಾಣಿ’ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

2023–24ನೇ ಸಾಲಿನ ವಾಣಿಜ್ಯ ತೆರಿಗೆ ಮಿತಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ನೀರಾವರಿ, ಮೂಲಸೌಕರ್ಯ ಸೇರಿದಂತೆ ವಿವಿಧ ವಲಯಗಳಿಗೆ ಹಣ ಹಂಚಿಕೆ ಮಾಡಿದ ವಿಧಾನ ಉತ್ತಮವಾಗಿದೆ. ರಾಜ್ಯದಲ್ಲಿ ಹಣಕಾಸಿನ ಒಳಹರಿವು ಉತ್ತಮವಾಗಿರುವ ಕಾರಣಕ್ಕೆ ತೆರಿಗೆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಬೆಲೆ ಏರಿಕೆ ಮಾಡಲು ಮುಂದಾಗಿಲ್ಲ. ಬಹಳ ವರ್ಷಗಳ ನಂತರ ಅಬಕಾರಿ ಶುಲ್ಕ ಹೆಚ್ಚಳ ಮಾಡದಿರುವುದು ಈ ಬಾರಿ ಬಜೆಟ್‌ನ ವಿಶೇಷ ಎನ್ನುತ್ತಾರೆ ಆರ್ಥಿಕ ತಜ್ಞ ಆರ್.ಜಿ. ಮುರಳೀಧರ್.

ಕೋವಿಡ್‌ ಸಮಯದಲ್ಲಿ ಐಟಿ–ಬಿಟಿ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಆನ್‌ಲೈನ್ ಮಾರಾಟ ಹೆಚ್ಚಾಗಿ ಅಧಿಕ ಪ್ರಮಾಣದ ತೆರಿಗೆ ಸಂಗ್ರಹವಾಗಿದೆ. ತೆರಿಗೆ ವಿಚಾರದಲ್ಲಿ ಸೋಂಕು ವರದಾನವಾಗಿ ಪರಿಣಮಿಸಿತ್ತು ಎಂದರೆ ತಪ್ಪಲ್ಲ. ಸರಕು ಸಾಗಣೆ ವೆಚ್ಚ ಹೆಚ್ಚಳವಾಗಿರುವುದರಿಂದ ಜನರ ಕೊಳ್ಳುವ ಶಕ್ತಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಮುರಳೀಧರ್ ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ಹೂಡಿಕೆ ಮಾಡುತ್ತಿರುವ ಹಣಕಾಸಿನ ಪ್ರಮಾಣ ಕಡಿಮೆ. ಈ ಕ್ಷೇತ್ರಗಳತ್ತ ಸಿಎಂ ಮೊಮ್ಮಾಯಿ ಮತ್ತಷ್ಟು ಗಮನ ಹರಿಸಬಹುದಿತ್ತು. ಅಮೆರಿಕ ಡಾಲರ್‌ ಮೌಲ್ಯ ಅಧರಿಸಿ ಇಂಧನ ದರದಲ್ಲಿ ಏರಿಳಿತ ಆಗುವುದು ಸಹಜ. ಕೋವಿಡ್‌ ನಂತರದ ದಿನಗಳಲ್ಲಿ ಆರ್ಥಿಕ ಶಿಸ್ತು ಕಾಪಾಡಿಕೊಂಡು, ಯಾವುದೇ ತೆರಿಗೆ ವಿಧಿಸದೆ, ಜನರಿಗೆ ಹೊರೆಯಾಗದೆ, ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಕಟಿಸುವಲ್ಲಿ ಸಿಎಂ ಬೊಮ್ಮಾಯಿ ಹಾಗೂ ಹಣಕಾಸು ಇಲಾಖೆಯ ಜಾಣ್ಮೆಯ ನಡೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಆರ್.ಜಿ. ಮುರಳೀಧರ್ ಅಭಿಪ್ರಾಯಪಟ್ಟರು.

ಈ ಬಾರಿಯ ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಮತ್ತು ನೈಮರ್ಲ್ಯ ಹಾಗೂ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಮತ್ತಷ್ಟು ಗಮನ ಹರಿಸಬಹುದಿತ್ತು ಎಂದು ಅರ್ಥಶಾಸ್ತ್ರಜ್ಞೆ ಸಂಗೀತಾ ಕಟ್ಟಿಮನಿ ಹೇಳಿದ್ದಾರೆ.

ದೇವಾಲಯಗಳಿಗೆ ಸ್ವಾಯತ್ತತೆ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗಿದೆ. ಹಾಗಾಗಿ ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಎಂಜಿನಿಯರಿಂಗ್ ಕೌಶಲ ಎದ್ದು ಕಾಣುತ್ತಿದೆ ಹಾಗಾಗಿ 10 ಅಂಕಗಳಲ್ಲಿ 9 ಅಂಕಗಳನ್ನು ನೀಡುವುದಾಗಿ ಸಂಗೀತಾ ಕಟ್ಟಿಮನಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT