ಬೆಂಗಳೂರು: ದಾಖಲೆಯ 17ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಕಾರ್ಮಿಕರ ಅಭಿವೃದ್ಧಿಗಾಗಿ ಒತ್ತು ಕೊಟ್ಟು ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ಅದರಲ್ಲಿ ಶ್ರಮಿಕ ವಸತಿ ಶಾಲೆಗಳ ಆರಂಭ ಬಹಳ ಗಮನ ಸೆಳೆದಿದ್ದು, ಇದರಿಂದ ಅನೇಕ ಕಾರ್ಮಿಕರು ಸಂತಸಗೊಂಡಿದ್ದಾರೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗಾಗಿ ಹಂತ ಹಂತವಾಗಿ 76 ನೂತನ ಶ್ರಮಿಕ ವಸತಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ.

ನೋಂದಾಯಿತ ಕಾರ್ಮಿಕರ 6 ರಿಂದ 12ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳು ಈ ಶಾಲೆಗಳಲ್ಲಿ ಉಚಿತ ವಸತಿ ಶಿಕ್ಷಣ ಪಡೆಯಬಹುದು.

ವಿಧಾನಸಭಾ ಕ್ಷೇತ್ರವಾರು ಈ ಶಾಲೆಗಳು ತಲೆ ಎತ್ತಲಿವೆ. ಮೊದಲ ಹಂತದಲ್ಲಿ 42 ಹಾಗೂ ಎರಡನೇ ಹಂತದಲ್ಲಿ 32 ಶಾಲೆಗಳು ತೆರೆಯಲಿವೆ.

ಮೊದಲ ಹಂತದಲ್ಲಿನ ಶಾಲೆಗಳ ವಿವರ

ಮೊದಲ ಹಂತದಲ್ಲಿನ ಶಾಲೆಗಳ ವಿವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.