ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ಇದು ‘ಸರ್ವರಿಗೂ ಸಮಪಾಲು’ ಅಲ್ಲ, ಕೇವಲ ‘ಅಲ್ಪಸಂಖ್ಯಾತರಿಗೆ ಮಾತ್ರ ಬೊಕ್ಕಸದ ಪಾಲು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಜೆಟ್ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯ ಅವರೇ, ಇಂದು ನೀವು ಮಂಡಿಸಿರುವುದು ಜಬೆಟ್ ‘ಸರ್ವರಿಗೂ ಸಮಪಾಲು’ ಅಲ್ಲ, ಕೇವಲ ‘ಅಲ್ಪಸಂಖ್ಯಾತರಿಗೆ ಮಾತ್ರ ಬೊಕ್ಕಸದ ಪಾಲು’ ಆಗಿದೆ ಎಂದು ಟೀಕಿಸಿದ್ದಾರೆ.

‘ಅಲ್ಪಸಂಖ್ಯಾತರಿಗೆ ₹1,000 ಕೋಟಿ ವೆಚ್ಚದಲ್ಲಿ ಶಾಲಾ ಉನ್ನತೀಕರಣ. ಆದರೆ, ಹಿಂದೂಗಳ ದೇವಸ್ಥಾನದ ದುರಸ್ತಿಗೆ ಹಣವಿಲ್ಲವೇ?, ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ₹3 ಲಕ್ಷ ಸಹಾಯಧನ, ಆದರೆ, ಸಾಮಾನ್ಯ ವರ್ಗದ ನಿರುದ್ಯೋಗಿಗಳಿಗೆ ಬರಿ ಭರವಸೆಯ ಹುತ್ತವೇ’ ಎಂದು ಪ್ರಶ್ನಿಸಿದ್ದಾರೆ.

‘ಹುಬ್ಬಳ್ಳಿ-ಕಲಬುರಗಿಯಲ್ಲಿ ಹಜ್ ಭವನ ಕಟ್ಟುವ ನಿಮಗೆ, ಹಿಂದೂ ಧಾರ್ಮಿಕ ಕೇಂದ್ರಗಳ ಮೂಲಸೌಕರ್ಯ ನೆನಪಾಗುವುದೇ ಇಲ್ಲವೇ?, ಅಲ್ಪಸಂಖ್ಯಾತರಿಗೆ ಮೃಷ್ಟಾನ್ನ ಭೋಜನ, ಬಹುಸಂಖ್ಯಾತ ಹಿಂದೂಗಳಿಗೆ ಬಜೆಟ್ನಲ್ಲಿ ಶೂನ್ಯ ದರ್ಶನ’ ಎಂದು ಕುಟುಕಿದ್ದಾರೆ.

‘ಸಿದ್ದರಾಮಯ್ಯ ಅವರೇ, ನೀವು ಕೇವಲ ಒಂದು ಸಮುದಾಯದ ಮುಖ್ಯಮಂತ್ರಿಯೇ?, ಬೊಕ್ಕಸದ ಬಹುಪಾಲನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಬರೆದುಕೊಡುತ್ತಿರುವ ಸಾಲರಾಮಯ್ಯ ಅವರೇ, ನಿಮ್ಮ ಈ ಅತಿರೇಕದ ಓಲೈಕೆ ರಾಜಕಾರಣಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಗುಡುಗಿದ್ದಾರೆ.
.Karnataka Budget 2026: ಬಜೆಟ್ ಮುಖ್ಯಾಂಶಗಳು .ರಾಜ್ಯದ ಭವಿಷ್ಯ ಅಡಮಾನ: ಸಿದ್ದರಾಮಯ್ಯ ಬಜೆಟ್ಗೆ ಆರ್.ಅಶೋಕ್ ಟೀಕೆ.Karnataka Budget: ಉದ್ಯೋಗಾಕಾಂಕ್ಷಿಗಳಿಗೆ ಬಂಪರ್; ಇಲ್ಲಿದೆ ಉದ್ಯೋಗಗಳ ವಿವರ.Karnataka Budget: ರಿಯಾಯತಿ ದರದಲ್ಲಿ 50 ಸಾವಿರ ನಿವೇಶನ ವಿತರಣೆ; ಸಿದ್ದರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.