ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2020| ಮಿತಿ ಮೀರಿದ ವಿತ್ತೀಯ ಕೊರತೆ

2019–20ನೇ ಹಣಕಾಸು ವರ್ಷ: ವರಮಾನ ಸಂಗ್ರಹದಲ್ಲಿ ಇಳಿಕೆ ಪರಿಣಾಮ
Last Updated 31 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ವರಮಾನ ಸಂಗ್ರಹದಲ್ಲಿ ಇಳಿಕೆ ಆಗಿರುವುದರಿಂದ ವಿತ್ತೀಯ ಕೊರತೆಯು ಡಿಸೆಂಬರ್‌ ಅಂತ್ಯಕ್ಕೆ ಬಜೆಟ್ ಅಂದಾಜನ್ನೂ ಮೀರಿ ಶೇ 132.4ಕ್ಕೆ ಏರಿಕೆಯಾಗಿದೆ.

ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಣ ಅಂತರವಾದ ವಿತ್ತೀಯ ಕೊರತೆ ₹ 9.31 ಲಕ್ಷ ಕೋಟಿಗಳಷ್ಟಾಗಿದೆ ಎಂದು ಸಿಜಿಎ ಮಾಹಿತಿ ನೀಡಿದೆ.

2020ರ ಮಾರ್ಚ್‌ ಅಂತ್ಯಕ್ಕೆ ವಿತ್ತೀಯ ಕೊರತೆಯನ್ನು ₹ 7.03 ಲಕ್ಷ ಕೋಟಿಗೆ (ಶೇ 3.3ರಲ್ಲಿ) ಮಿತಿಗೊಳಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಆದರೆ ಡಿಸೆಂಬರ್‌ ಅಂತ್ಯದ ವೇಳೆಗೆ ಆ ಗುರಿಯನ್ನು ಮೀರಿದೆ.2018–19ರಲ್ಲಿ ಬಜೆಟ್‌ ಅಂದಾಜಿನಂತೆ ವಿತ್ತೀಯ ಕೊರತೆ ಶೇ 112.4ರಷ್ಟಿತ್ತು.

ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 2019ರ ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್‌ ತೆರಿಗೆ ದರದಲ್ಲಿ ಇಳಿಕೆ ಮಾಡಿತು. ಇದರಿಂದಾಗಿ ಸರ್ಕಾರದ ವರಮಾನ ಸಂಗ್ರಹದಲ್ಲಿ ₹ 1.45 ಲಕ್ಷ ಕೋಟಿ ಕೊರತೆ ಬೀಳುವ ಅಂದಾಜು ಮಾಡಲಾಗಿದೆ.

2019–20ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿಯೂ ಜಿಡಿಪಿ ಬೆಳವಣಿಗೆ ದರ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಟ್ಟಾರೆ ಹಣಕಾಸು ವರ್ಷಕ್ಕೆ ಶೇ 5ರಷ್ಟಿರುವ ಅಂದಾಜು ಮಾಡಲಾಗಿದೆ. ಇದು ಸಹ 11 ವರ್ಷಗಳ ಕನಿಷ್ಠ ಮಟ್ಟದ ಬೆಳವಣಿಗೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT