ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021–22ನೇ ಸಾಲಿನ ಕೇಂದ್ರ ಬಜೆಟ್ಅನ್ನು ಮಂಡಿಸುತ್ತಿದ್ದಾರೆ. ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕವಾಗಿ ಬಸವಳಿದಿರುವ ಜನಸಾಮಾನ್ಯರಿಗೆ ಬಜೆಟ್ನಲ್ಲಿನ ಘೋಷಣೆಗಳು ಸಮಾಧಾನ ತರುವ ನಿರೀಕ್ಷೆ ಇದೆ. ಆರೋಗ್ಯ ಸೇವೆ, ಮೂಲಸೌಕರ್ಯ ಮತ್ತು ರಕ್ಷಣಾ ಕ್ಷೇತ್ರಗಳ ಮೇಲೆ ಮಾಡುವ ವೆಚ್ಚ ಹೆಚ್ಚಿಸುವ ಮೂಲಕ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆ ಕೂಡ ಬಜೆಟ್ ಮೇಲಿದೆ. ಬಜೆಟ್ಗೆ ಸಂಬಂಧಿಸಿದ ಕ್ಷಣ–ಕ್ಷಣದ ಸುದ್ದಿಗಳನ್ನು ಇಲ್ಲಿ ಓದಿ.
Close

ಅಂಜನಾದ್ರಿ ಅಭಿವೃದ್ಧಿ: ಭೂಸ್ವಾಧೀನ ಕಾರ್ಯಕ್ಕೆ ಪೂರ್ವಭಾವಿ ಸಭೆ ದಸರಾ ಸಂಬಂಧಿಸಿ ಜುಲೈ ಮೊದಲ ವಾರ ಉನ್ನತಮಟ್ಟದ ಸಭೆ: ಸಚಿವ ಎಸ್.ಟಿ. ಸೋಮಶೇಖರ್ ಚಾಮುಂಡಿ ಬೆಟ್ಟಕ್ಕೆ ಲಲಿತಮಹಲ್ ಬಳಿಯಿಂದ ಬಸ್ ವ್ಯವಸ್ಥೆ: ಸಚಿವ ಸೋಮಶೇಖರ್ Podcast | ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು, 27 ಜೂನ್ 2022 ಅಥಣಿ: ಕಾಗವಾಡ ಶಾಸಕ ಶ್ರೀಮಂತ ಪಾಟೀಲರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಪರಿಷ್ಕೃತ ಪಠ್ಯ ವಾಪಸ್ ಪಡೆಯಲು ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಆಗ್ರಹ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನ್ಯಾಯಾಂಗ ಬಂಧನ ಅವಧಿ 2 ವಾರ ವಿಸ್ತರಣೆ ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣ: ಇ.ಡಿ ವಿಚಾರಣೆ ಎದುರಿಸಿದ ಜಾಕ್ವೆಲಿನ್ ಕೋವಿಡ್ ಸೋಂಕಿತರಿಗೆ ನರರೋಗ ಸಾಧ್ಯತೆ ಅಧಿಕ ದಾಖಲೆ ಪರಿಶೀಲನೆ ನೆಪದಲ್ಲಿ ವಾಹನ ತಡೆಯದಂತೆ ಸಂಚಾರ ಪೊಲೀಸರಿಗೆ ಡಿಜಿ–ಐಜಿಪಿ ಸೂಚನೆ ಉದ್ಧವ್ ಠಾಕ್ರೆ ಪರ ಕೇವಲ 15 ಶಾಸಕರು, ನಾಲ್ವರು ಸಚಿವರು ದಾಖಲೆ ಪರಿಶೀಲನೆ ನೆಪದಲ್ಲಿ ₹2,500 ವಸೂಲಿ: ಎಎಸ್ಐ, ಕಾನ್ಸ್ಟೆಬಲ್ ಅಮಾನತು ಮರಾಠಿ ಭಾಷೆಯಲ್ಲಿ ದಾಖಲೆ ಕೋರಿ ಪ್ರತಿಭಟನೆ: ಎಂಇಎಸ್ಗೆ ಮರಾಠಿಗರಿಂದ ಸಿಗದ ಬೆಂಬಲ ಬಡವರ ಕಲ್ಯಾಣ ಕೇಂದ್ರ ಸರ್ಕಾರದ ಆಶಯ: ಸಚಿವ ಸೋಮ ಪ್ರಕಾಶ ಸಮಾಜ ವಿಜ್ಞಾನ ಪಾಠದಲ್ಲಿ ‘ಸಂವಿಧಾನ ಶಿಲ್ಪಿ’ ಪುನರ್ ಸೇರ್ಪಡೆ: ಸರ್ಕಾರ ಆದೇಶ ಆಪರೇಷನ್ ಕಮಲಕ್ಕೆ ಪಾಪದ ಹಣ: ಸಿದ್ದರಾಮಯ್ಯ ಆರೋಪ ವಿಧಾನಸೌಧದ ಆವರಣದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಬೊಮ್ಮಾಯಿ ಭರವಸೆ ‘ಮಹಾ’ಬಂಡಾಯ: ಏಕನಾಥ್ ಶಿಂಧೆ ಖಾತೆ ಹಿಂಪಡೆದ ಸಿಎಂ ಉದ್ಧವ್ ಠಾಕ್ರೆ ಹೊಸಪೇಟೆ: ಯದುವೀರ ಒಡೆಯರ್ ಹಂಪಿಗೆ ಭೇಟಿ ಸಂಜಯ್ ರಾವುತ್ಗೆ ಇ.ಡಿ ಸಮನ್ಸ್: 'ತಲೆ ತೆಗೆದರೂ ಗುವಾಹಟಿ ದಾರಿ ಹಿಡಿಯೆನು'
- ಅಂಜನಾದ್ರಿ ಅಭಿವೃದ್ಧಿ: ಭೂಸ್ವಾಧೀನ ಕಾರ್ಯಕ್ಕೆ ಪೂರ್ವಭಾವಿ ಸಭೆ
- ದಸರಾ ಸಂಬಂಧಿಸಿ ಜುಲೈ ಮೊದಲ ವಾರ ಉನ್ನತಮಟ್ಟದ ಸಭೆ: ಸಚಿವ ಎಸ್.ಟಿ. ಸೋಮಶೇಖರ್
- ಚಾಮುಂಡಿ ಬೆಟ್ಟಕ್ಕೆ ಲಲಿತಮಹಲ್ ಬಳಿಯಿಂದ ಬಸ್ ವ್ಯವಸ್ಥೆ: ಸಚಿವ ಸೋಮಶೇಖರ್
- Podcast | ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು, 27 ಜೂನ್ 2022
- ಅಥಣಿ: ಕಾಗವಾಡ ಶಾಸಕ ಶ್ರೀಮಂತ ಪಾಟೀಲರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
- ಪರಿಷ್ಕೃತ ಪಠ್ಯ ವಾಪಸ್ ಪಡೆಯಲು ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಆಗ್ರಹ
- ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನ್ಯಾಯಾಂಗ ಬಂಧನ ಅವಧಿ 2 ವಾರ ವಿಸ್ತರಣೆ
ಬಜೆಟ್ 2021 Infographic: ಅನುದಾನ ಹಂಚಿಕೆ
ರಕ್ಷಣಾ ಕ್ಷೇತ್ರಕ್ಕೆ ಶೇ. 20ರಷ್ಟು ಹೆಚ್ಚು ಅನುದಾನ
ಆದಾಯ, ಪಿಂಚಣಿ ಮತ್ತು ಬಂಡವಾಳ ಎಂಬ ಮೂರು ಅಂಶಗಳನ್ನು ರಕ್ಷಣಾ ಬಜೆಟ್ ಒಳಗೊಂಡಿದೆ. 2020-21ರಲ್ಲಿ ₹1,13,734 ಕೋಟಿ ಇದ್ದ ಅನುದಾನ, ಈ ಬಾರಿ ₹1,35,060 ಕೋಟಿಗೆ ತಲುಪಿದೆ. ಅಂದರೆ, ಶೇ. 20ರಷ್ಟು ಹೆಚ್ಚಾಗಿದೆ
– ಟಿ.ವಿ.ಸೋಮನಾಥನ್, ಕಾರ್ಯದರ್ಶಿ, ವೆಚ್ಚ ವಿಭಾಗ
ಈ ಬಜೆಟ್ ಭಾರತದ ವಿಶ್ವಾಸವನ್ನು ಪ್ರದರ್ಶಿಸುತ್ತಿದೆ : ಮೋದಿ
ಅಸಮಾನ್ಯ ಪರಿಸ್ಥಿತಿಯಲ್ಲಿ ನಾವು ಈ ಬಜೆಟ್ ಮಂಡಿಸಿದ್ದೇವೆ. ಇಂದಿನ ಈ ಬಜೆಟ್ ಭಾರತದ ವಿಶ್ವಾಸವನ್ನು ಪ್ರದರ್ಶಿಸುತ್ತಿದೆ. ಸ್ವಾವಲಂಬನೆಯ ದೃಷ್ಟಿಯನ್ನು ಹೊಂದಿದೆ. ಸಮಾಜದ ಪ್ರತಿಯೊಂದು ವರ್ಗವನ್ನು ಒಳಗೊಂಡಿದೆ.
ರಕ್ಷಣಾ ಇಲಾಖೆಗೆ ₹4.78 ಲಕ್ಷ ಕೋಟಿ, ಗೃಹ ಇಲಾಖೆಗೆ ₹1.66 ಕೋಟಿ
ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ: WHO ನಿರ್ದೇಶಕಿ
ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ಭಾರತವು ಕೋವಿಡ್ ವಿರುದ್ಧ ಹೋರಾಡುವ ಬದ್ಧತೆ ಪ್ರದರ್ಶಿಸಿದೆ. ಬಲವಾದ ಆರೋಗ್ಯ ವ್ಯವಸ್ಥೆ ಸೃಷ್ಟಿಸುವ ಭಾರತದ ಬದ್ಧತೆಯನ್ನು ಇದು ತೋರಿಸುತ್ತದೆ. ಮೊದಲಿನಿಂದಲೂ, ಭಾರತವು ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿಯಂತ್ರಿಸಿದೆ.
- ಪೂನಮ್ ಕ್ಷೇತ್ರಪಾಲ್ಸಿಂಗ್, ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾಂತೀಯ ನಿರ್ದೇಶಕರು
ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಪ್ರಾಯ
ಹಣಕಾಸು ಸಚಿವರು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದರು. ಅವರು ಅವೆಲ್ಲವನ್ನೂ ಪೂರೈಸಿದ್ದಾರೆ. ಈಗಿನ ಸನ್ನಿವೇಶವನ್ನು ಗಮನಿಸಿದರೆ, ಬಜೆಟ್ ಭಾರತದ ಬೆಳವಣಿಗೆಯ ಮೇಲೆ ಕೇಂದ್ರೀಕೃತವಾಗಿದೆ. ಬೆಳವಣಿಗೆಯ ದರವನ್ನು ವೇಗಗೊಳಿಸಲು ಅನುಗುಣವಾಗಿದೆ
- ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್
ಮೊಬೈಲ್, ಬಿಡಿಭಾಗಗಳ ಬೆಲೆ ಹೆಚ್ಚಳ
ದೇಶೀಯ ಎಲೆಕ್ಟ್ರಾನಿಕ್ ಉತ್ಪಾದನೆ ವೇಗವಾಗಿ ಬೆಳೆಯುತ್ತಿದೆ. ದೇಶೀಯ ಮೌಲ್ಯ ವೃದ್ಧಿಗಾಗಿ ಚಾರ್ಜರ್ಗಳ ಭಾಗ ಮತ್ತು ಮೊಬೈಲ್ಗಳ ಬಿಡಿ ಭಾಗಗಳ ಮೇಲಿನ ಕೆಲವು ವಿನಾಯಿತಿಗಳನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ. ಮೊಬೈಲ್ಗಳ ಬಿಡಿ ಭಾಗಗಳ ದರ ಶೇ. 2.5% ಏರಿಕೆಯಾಗಲಿದೆ.
ದುಬಾರಿಯಾಗಿದ್ದು...
ಪೆಟ್ರೋಲ್, ಡೀಸೆಲ್, ಕಾಬೂಲ್ ಕಡಲೆ, ಸೇಬು, ಮದ್ಯ, ಚಿನ್ನ–ಬೆಳ್ಳಿ, ವಾಹನ ಬಿಡಿಭಾಗ, ಹುರಿಗಡಲೆ, ಹತ್ತಿ, ಸೂರ್ಯಕಾಂತಿ
ಆತ್ಮನಿರ್ಭರ ಭಾರತದ ಬಜೆಟ್–ರಾಜನಾಥ್ ಸಿಂಗ್
ಆತ್ಮ ನಿರ್ಭರ ಭಾರತಕ್ಕಾಗಿ ಮಂಡಿಸಿದ ಬಜೆಟ್ ಇದು. ಇದು ನಮ್ಮ ಆರ್ಥಿಕತೆಯನ್ನು ಬಲಪಡಿಸುತ್ತದೆ.
– ರಾಜನಾಥ್ ಸಿಂಗ್
ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆ್ಸ್
ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆ್ಸ್
ಡೀಸೆಲ್ ₹4, ಪೆಟ್ರೋಲ್ ₹2.30 ಏರಿಕೆ
ಕೆಲವು ಸರಕುಗಳ ಮೇಲೆ ಮೂಲಸೌಕರ್ಯ ಅಭಿವೃದ್ಧಿ ಸೆಸ್ ವಿಧಿಸಲು ಕೇಂದ್ರ ಸರ್ಕಾರ ನಿರ್ಧಾರ.
ಪೆ. 2ರಿಂದ ಇದು ಜಾರಿಗೆ ಬರಲಿದೆ.
15 ನೇ ಹಣಕಾಸು ಆಯೋಗದ ವರದಿ ಮಂಡನೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 15 ನೇ ಹಣಕಾಸು ಆಯೋಗದ ವರದಿಯನ್ನು ಮಂಡಿಸಿದ್ದಾರೆ.
1 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಜ್ವಲಾ ಯೋಜನೆ ವಿಸ್ತರಣೆ
ಸರ್ಕಾರದಿಂದ ಬಡವರಿಗೆ ಉಚಿತ ಅಡುಗೆ ಅನಿಲ ವಿತರಿಸುವ ‘ಉಜ್ವಲ‘ ಯೋಜನೆಯನ್ನು ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ವಿಸ್ತರಿಸುತ್ತಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕಸ್ಟಮ್ ಸುಂಕ ಹೆಚ್ಚಳ
ಸೋಲಾರ್, ವಾಹನ ಬಿಡಿಭಾಗಗಳು, ಹತ್ತಿ, ರೇಷ್ಮೆ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಳಳ ಮಾಡಲಾಗಿದೆ.
ಬಜೆಟ್ ಮಂಡನೆಯ ಲೈವ್ ವೀಕ್ಷಿಸಿ
ಜಿಎಸ್ಟಿ ಸಂಗ್ರಹ ಹೆಚ್ಚಳ
ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ನಿಯಮಾವಳಿಗಗಳನ್ನು ಸಡಿಲಿಸಲು ಸರ್ಕಾರ ನಿರ್ಧರಿಸಿದೆ.
ವಿಮಾನ ಗುತ್ತಿಗೆಗೆ ತೆರಿಗೆ ವಿನಾಯಿತಿ ನೀಡಲಾಗುವುದು. ವಲಸೆ ಕಾರ್ಮಿಕರಿಗೆ ಕೈಗೆಟುಕುವ ವಸತಿಗಾಗಿ ತೆರಿಗೆ ವಿನಾಯಿತಿ ನೀಡಲಾಗುವುದು. ಕಳೆದ ಕೆಲವು ತಿಂಗಳಲ್ಲಿ ಜಿಎಸ್ಟಿ ಸಂಗ್ರಹವು ಗಣನೀಯ ಹೆಚ್ಚಳವಾಗಿದೆ. ಸ್ಟಾರ್ಟಪ್ಗಳಿಗೆ ಒಂದು ವರ್ಷದ ವರೆಗೆ ತೆರಿಗೆ ವಿನಾಯ್ತಿ ನೀಡಲಾಗಿದೆ.
ಡಿಜಿಟಲೀಕರಣಕ್ಕೆ ಪ್ರೋತ್ಸಾಹ
ಡಿಜಿಟಲ್ ತಂತ್ರಜ್ಞಾನ ಬಳಸಿ ವ್ಯವಹಾರ ನಡೆಸುವ ಕಂಪನಿಗಳಿಳ ತೆರಿಗೆ ಲೆಕ್ಕಪರಿಶೋಧನೆಯ ಮಿತಿಯನ್ನು ₹10 ಕೋಟಿಗೆ ದ್ವಿಗುಣಗೊಳಿಸಲಾಗಿದೆ.
ಹಿರಿಯ ನಾಗರಿಕರಿಗೆ ಐಟಿ ರಿಟರ್ನ್ ಸಲ್ಲಿಕೆ ಇಲ್ಲ
75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಐಟಿ ರಿಟರ್ನ್ ಸಲ್ಲಿಕೆ ಇಲ್ಲ (ಪಿಂಚಣಿ ಮಾತ್ರ ಇರುವವರಿಗೆ)
ಡಿಜಿಟಲ್ ಜನಗಣತಿಗೆ ₹3,768 ಕೋಟಿ
ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ಕಾಗಿ ನಾನು ಈ ವರ್ಷದಲ್ಲಿ ₹3,768 ಕೋಟಿಗಳನ್ನು ಮೀಸಲಿಟ್ಟಿದ್ದೇನೆ.
– ನಿರ್ಮಲಾ ಸೀತಾರಾಮನ್
ಕೋವಿಡ್ನಿಂದ ಅದಾಯಕ್ಕೆ ಕುತ್ತು, ಖರ್ಚು ಹೆಚ್ಚು
ಕೋವಿಡ್ -19 ಸಾಂಕ್ರಾಮಿಕವು ಆದಾಯದ ಸಂಗ್ರಹಕ್ಕೆ ಹೊಡೆತ ನೀಡಿದೆ. ಅದೇ ವೇಳೆ ಖರ್ಚು ಹೆಚ್ಚಿಸಿದೆ. - ನಿರ್ಮಲಾ
ಕೋವಿಡ್ ಪರಿಹಾರ ಕಾರ್ಯಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಖರ್ಚು 34.50 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ವರ್ಷದ ಹಿಂದೆ 30.42 ಲಕ್ಷ ಕೋಟಿಯ ಬಜೆಟ್ ಮಂಡಿಸಲಾಗಿತ್ತು. ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣಕಾಸಿನ ಕೊರತೆಯು ಜಿಡಿಪಿಯ ಶೇ. 9.5 ರಷ್ಟಿದೆ, ಮುಂದಿನ ದಿನಗಳಲ್ಲಿ ಅದು ಶೇ. 6.8% ಆಗಲಿದೆ.
ಅಸಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಪೋರ್ಟಲ್
ಅಸಂಘಟಿತ ಕಾರ್ಮಿಕರ ಕಲ್ಯಾಣದ ಕಡೆಗಿನ ನಮ್ಮ ಪ್ರಯತ್ನಗಳನ್ನು ವಿಸ್ತರಿಸಿದ್ದೇವೆ. ನಿರ್ಮಾಣ ಕಾರ್ಮಿಕರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಪೋರ್ಟಲ್ ಅನ್ನು ಪ್ರಾರಂಭಿಸಲು ಚಿಂತಿಸಲಾಗಿದೆ. ವಲಸೆ ಕಾರ್ಮಿಕರಿಗೆ ಆರೋಗ್ಯ, ವಸತಿ, ಕೌಶಲ್ಯ, ವಿಮಾ ಸಾಲ ಮತ್ತು ಆಹಾರ ಯೋಜನೆಗಳನ್ನು ರೂಪಿಸಲು ಇದು ಸಹಕಾರಿ.
ಒಂದು ದೇಶ ಒಂದೇ ರೇಷನ್ ಕಾರ್ಡ್ ಘೋಷಣೆ
ನಾವು ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಪರಿಕಲ್ಪನೆ ಜಾರಿಗೆ ತರುತ್ತಿದ್ದೇವೆ. ಈ ಯೋಜನೆ ಮೂಲಕ ಫಲಾನುಭವಿಗಳು ಪಡಿತರವನ್ನು ದೇಶದಲ್ಲಿ ಎಲ್ಲಿಯಾದರೂ ಪಡೆಯಬಹುದು. ನಿರ್ದಿಷ್ಟವಾಗಿ ವಲಸೆ ಕಾರ್ಮಿಕರು ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ. ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಯೋಜನೆಯನ್ನು 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ಜಾರಿಗೆ ತರುತ್ತೇವೆ.
ಕನಿಷ್ಠ ಬೆಂಬಲ ಬೆಲೆ ರದ್ದು ಇಲ್ಲ: ಅಂಕಿ ಅಂಶದೊಡನೆ ಸ್ಪಷ್ಟನೆ ನೀಡಿದ ಕೇಂದ್ರ
ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ, ಖರೀದಿ ಪ್ರಕ್ರಿಯೆ ಮುಂದುವರಿದಿದೆ ಗೋಧಿ ರೈತರಿಗೆ 19-20 60,000 ಕೋಟಿ, 2020-21 ರಲ್ಲಿ - 75,060 ಕೋಟಿ, ಭತ್ತ ಖರೀದಿ ಪ್ರಕ್ರಿಯೆಯಿಂದ ರೈತರಿಗೆ ಪಾವತಿ-2013-14 ರಲ್ಲಿ 63,928, 2019-20 ರಲ್ಲಿ 1,41,930 ಕೋಟಿ, 2020-21 - 1,72,742 ಕೋಟಿ (ಅಂದಾಜು) ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಫಲಾನುಭವಿ ರೈತರ ಸಂಖ್ಯೆ 19-20ರಲ್ಲಿ 1.24 ಕೋಟಿಯಿಂದ 20-21 ರಲ್ಲಿ 1.54 ಕೋಟಿಗೆ ಹೆಚ್ಚಳ.
2021-22ರಲ್ಲಿ ಎಲ್ಐಸಿಯ ಐಪಿಒ: ನಿರ್ಮಲಾ ಸೀತಾರಾಮನ್
2021-22ರಲ್ಲಿ ಎಲ್ಐಸಿಯ ಐಪಿಒ ಅನ್ನು ಸಹ ತರುತ್ತೇವೆ, ಇದಕ್ಕಾಗಿ ನಾನು ಈ ಅಧಿವೇಶನದಲ್ಲಿಯೇ ಅಗತ್ಯ ತಿದ್ದುಪಡಿಗಳನ್ನು ತರುತ್ತೇನೆ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್
11:58 am
ರೈಲ್ವೆಗಾಗಿ ₹ 1,10,055 ಕೋಟಿ ದಾಖಲೆಯ ಹಣ
ನಾನು ರೈಲ್ವೆಗಾಗಿ ₹ 1,10,055 ಕೋಟಿ ದಾಖಲೆಯ ಹಣ ನೀಡುತ್ತಿದ್ದೇನೆ. ಅದರಲ್ಲಿ 1,07,100 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮಾತ್ರ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್
2021-22ರಲ್ಲಿ ಕೋವಿಡ್ ಲಸಿಕೆಗಾಗಿ 35,000 ಕೋಟಿ ನೀಡಿದ್ಧೇವೆ
2021-22ರಲ್ಲಿ ಕೋವಿಡ್ ಲಸಿಕೆಗಾಗಿ 35,000 ಕೋಟಿ ನೀಡಿದ್ಧೇವೆ. ಅಗತ್ಯಬಿದ್ದರೆ ಹೆಚ್ಚಿನ ಹಣವನ್ನು ಒದಗಿಸಲು ನಾನು ಬದ್ಧನಾಗಿರುತ್ತೇನೆ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್
ಮಾರ್ಚ್ 2022 ರ ಹೊತ್ತಿಗೆ ನಾವು ಇನ್ನೂ 8,500 ಮತ್ತು 11,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ
3.3 ಲಕ್ಷ ಕೋಟಿ ವೆಚ್ಚದಲ್ಲಿ 13,000 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಈಗಾಗಲೇ 5.35 ಲಕ್ಷ ಕೋಟಿ ಭಾರತ್ಮಾಲಾ ಯೋಜನೆಯಡಿ ಹಣ ನೀಡಲಾಗಿದೆ. ಅದರಲ್ಲಿ 3,800 ಕಿ.ಮೀ. ನಿರ್ಮಾಣವಾಗಿದ್ದು, ಮಾರ್ಚ್ 2022 ರ ಹೊತ್ತಿಗೆ ನಾವು ಇನ್ನೂ 8,500 ಮತ್ತು 11,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಅನ್ನು ಪೂರ್ಣಗೊಳಿಸುತ್ತೇವೆ
ಬೆಂಗಳೂರು ಮೆಟ್ರೋಗೆ ₹ 14,788 ಸಾವಿರ ಕೋಟಿ
ಬೆಂಗಳೂರಿನಲ್ಲಿ 58 ಕಿ.ಮೀ ಹೊಸ ಮೆಟ್ರೋ ರೈಲು ಮಾರ್ಗಕ್ಕೆ 14,788 ಕೋಟಿ ಅನುದಾನ ಘೋಷಣೆ: ನಿರ್ಮಲಾ ಸೀತಾರಾಮನ್
6 ವರ್ಷಗಳಲ್ಲಿ ಸುಮಾರು 64,180 ಕೋಟಿಗಳಷ್ಟು ವಿನಿಯೋಗ
ಕೇಂದ್ರೀಯ ಪ್ರಾಯೋಜಿತ ಹೊಸ ಯೋಜನೆ ಪಿಎಂ ಆತ್ಮನಿರ್ಭರ್ ಸ್ವಸ್ತ್ ಭಾರತ್ ಯೋಜನೆ 6 ವರ್ಷಗಳಲ್ಲಿ ಸುಮಾರು 64,180 ಕೋಟಿಗಳಷ್ಟು ವಿನಿಯೋಗದೊಂದಿಗೆ ಪ್ರಾರಂಭಿಸಲಾಗುವುದು: ವಿತ್ತ ಸಚಿವ ನಿರ್ಮಲಾ ಸೀತಾರಾಮನ್
ಈ ಬಜೆಟ್ ಈ ದಶಕದ ಮೊದಲನೆ ಮತ್ತು ಡಿಜಿಟಲ್ ಬಜೆಟ್ ಸಹ ಆಗಿದೆ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್
ಸರ್ಕಾರವು ತನ್ನ ಸಂಪನ್ಮೂಲಗಳನ್ನು ಬಡವರ ಅನುಕೂಲಕ್ಕಾಗಿ ವಿನಿಯೋಗಿಸಿತು. ಪಿಎಂ ಗರಿಬ್ ಕಲ್ಯಾಣ್ ಯೋಜನೆ, ಮೂರು ಆತ್ಮ ನಿರ್ಭರ ಭಾರತ್ ಪ್ಯಾಕೇಜುಗಳು ಮತ್ತು ನಂತರದ ಘೋಷಣೆಗಳು ಐದು ಮಿನಿ ಬಜೆಟ್ ಗಳಂತೆ ಇದ್ದವು: ನಿರ್ಮಲಾ ಸೀತಾರಾಮನ್
ಮತ್ತಷ್ಟು ಲಸಿಕೆಗಳ ನಿರೀಕ್ಷೆ
ಇಂದು ಭಾರತವು 2 ಲಸಿಕೆಗಳನ್ನು ಹೊಂದಿದೆ ಮತ್ತು ಕೋವಿಡ್ ವಿರುದ್ಧ ತನ್ನ ನಾಗರಿಕರನ್ನು ಮಾತ್ರವಲ್ಲದೆ 100 ಅಥವಾ ಹೆಚ್ಚಿನ ದೇಶಗಳನ್ನೂ ರಕ್ಷಿಸಲು ನಿಂತಿದೆ. ಮತ್ತಷ್ಟು ಲಸಿಕೆಗಳನ್ನು ನಿರೀಕ್ಷಿಸಲಾಗುತ್ತಿದೆ
ಆತ್ಮನಿರ್ಭರ ಭಾರತವನ್ನು ಉಲ್ಲೇಖಿಸಿದ ನಿರ್ಮಲಾ
ಮೇ 2020 ರಲ್ಲಿ, ಸರ್ಕಾರವು ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅನ್ನು ಘೋಷಿಸಿತು. ಅರ್ಥಿಕತೆಗೆ ಚೈತನ್ಯ ತರಲು ನಾವು ಇನ್ನೂ ಎರಡು ಆತ್ಮನಿರ್ಭರ್ ಪ್ಯಾಕೇಜುಗಳನ್ನು ಘೋಷಣೆ ಮಾಡಿದೆವು. ಆರ್ಬಿಐ ಕೈಗೊಂಡ ಕ್ರಮಗಳೂ ಸೇರಿದಂತೆ ಎಲ್ಲಾ ಪ್ಯಾಕೇಜ್ಗಳ ಆರ್ಥಿಕ ಪರಿಣಾಮಗಳ ಒಟ್ಟು ಮೊತ್ತ ಸುಮಾರು 27.1 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ:
- ನಿರ್ಮಲಾ ಸೀತಾರಾಮನ್
ನಿರ್ಮಲಾ ಭಾಷಣ
ದೇಶದ ಮೇಲೆ ಪರಿಣಾಮ ಬೀರುವ ವಿಪತ್ತುಗಳ ದೃಷ್ಟಿಯಿಂದ, ಈ ಬಜೆಟ್ ಅನ್ನು ಹಿಂದೆಂದೂ ಕಂಡು ಕೇಳರಿಯದಂಥ, ವಿಶಿಷ್ಟ ಸನ್ನಿವೇಶದಲ್ಲಿ ಸಿದ್ಧಪಡಿಸಲಾಗಿದೆ.
ಬಜೆಟ್ ಮಂಡನೆ ಆರಂಭ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿದ್ದಾರೆ.
ಕೇಂದ್ರ ಬಜೆಟ್ 2021–22ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡನೆ ಆರಂಭವಾಗಲಿದೆ
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಿ ಕಪ್ಪು ನಿಲುವಂಗಿ ಧರಿಸಿ ಸಂಸತ್ ಪ್ರವೇಶಿಸಿದ ಕಾಂಗ್ರೆಸ್ ಸಂಸದರಾದ ಜಸ್ಬೀರ್ ಸಿಂಗ್ ಗಿಲ್ ಮತ್ತು ಗುರ್ಜೀತ್ ಸಿಂಗ್
ಲೋಕಸಭೆ ಸ್ಪೀಕರ್ ಓ ಬಿರ್ಲಾ ಅವರು ಸಂಸತ್ಗೆ ಆಗಮಿಸಿದರು
ಸಂಪುಟ ಸಭೆ ಆರಂಭ
ಕೇಂದ್ರ ಬಜೆಟ್ಗೂ ಮೊದಲು ನಡೆಯುವ ಸಂಪುಟ ಸಭೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂತ್ರಿ ಮಂಡಲ ಸಭೆ ನಡೆಯಲಿದೆ. ಮಂಡನೆಗೂ ಮೊದಲು ಕ್ಯಾಬಿನೆಟ್ ಬಜೆಟ್ ಅನ್ನು ಅನುಮೋದಿಸಬೇಕಾಗುತ್ತದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಸಂಸತ್ ತಲುಪಿದ ಸಂದರ್ಭ
ಈ ಬಾರಿಯ ಬಜೆಟ್ನಲ್ಲಿ ರೈಲ್ವೆಗೆ ₹1.79 ಲಕ್ಷ ಕೋಟಿ ಅನುದಾನ ಘೋಷಿಸುವ ನಿರೀಕ್ಷೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರೂ ಸಂಸತ್ ತಲುಪಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಸಂಸತ್ ತಲುಪಿದರು.
ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಉತ್ತಮ ಆರಂಭ
ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಉತ್ತಮ ಆರಂಭ ಪಡೆದಿದೆ.
ಬಜೆಟ್ ಟ್ಯಾಬ್ ಪ್ರದರ್ಶಿಸಿದ ನಿರ್ಮಲಾ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾಂಪ್ರದಾಯಿಕ 'ಬಹಿ ಖಾತಾ' ಬದಲಿಗೆ ಟ್ಯಾಬ್ ಮೂಲಕ ಪ್ರಸ್ತುತಪಡಿಸುತ್ತಾರೆ ಮತ್ತು ಓದಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮೂರನೇ ಬಾರಿಗೆ, ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸುತ್ತಿದ್ದಾರೆ.
ಕಚೇರಿಯಿಂದ ಹೊರಡುವುದಕ್ಕೂ ಮುನ್ನ...
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಹಣಕಾಸು ಸಚಿವಾಲಯದಿಂದ ನಿರ್ಗಮಿಸಿದರು. ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2021-22ರ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಕಾರಣದಿಂದಾಗಿ ಇದೇ ಮೊದಲ ಮೊದಲ ಬಾರಿಗೆ ಬಜೆಟ್ ಅನ್ನು ಕಾಗದರಹಿತವಾಗಿ ಮಂಡಿಸಲಾಗುತ್ತಿದೆ. ಬಜೆಟ್ ಪ್ರತಿ ಆನ್ಲೈನ್ನಲ್ಲಿ, ಆಪ್ನಲ್ಲಿ ಲಭ್ಯವಾಗಲಿದೆ.
ಹಣಕಾಸು ಇಲಾಖೆ ಕಚೇರಿಗೆ ಅಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
ಹಣಕಾಸು ಇಲಾಖೆ ಕಚೇರಿಗೆ ಅಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
ಬಜೆಟ್ ವೇಳೆ ರೈತರ ಪ್ರತಿಭಟನೆ ತೀವ್ರಗೊಳ್ಳುವ ಆತಂಕ: ದೆಹಲಿಯಲ್ಲಿ ಬಿಗಿ ಭದ್ರತೆ
ನವದೆಹಲಿ: ಬಜೆಟ್ ದಿನವೂ ರೈತರ ಪ್ರತಿಭಟನೆ ತೀವ್ರಗೊಳ್ಳುವ ಆತಂಕ ಎದುರಾಗಿರುವ ಕಾರಣ ದೆಹಲಿ ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರೈತರು ಬ್ಯಾರಿಕೇಡ್ಗಳನ್ನು ದಾಟಿ ಮುನ್ನುಗ್ಗದಂತೆ ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬಜೆಟ್ ಜನರ ನಿರೀಕ್ಷೆಗೆ ಅನುಗುಣವಾಗಿರುತ್ತದೆ: ಅನುರಾಗ್ ಠಾಕೂರ್
ಬಜೆಟ್ ಜನರ ನಿರೀಕ್ಷೆಗೆ ಅನುಗುಣವಾಗಿರುತ್ತದೆ. 'ಸಬ್ ಕಾ ಸಾಥ್, ಸಬ್ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಮಂತ್ರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸರ್ಕಾರವು 'ಆತ್ಮನಿರ್ಭರ ಭಾರತ' ಪ್ಯಾಕೇಜ್ ಘೋಷಿಸುವ ಮೂಲಕ ದೇಶಕ್ಕೆ ಆರ್ಥಿಕತೆಗೆ ಹೊಸ ದಿಕ್ಕು ನೀಡಿದೆ. ಈ ಕಾರ್ಯಕ್ರಮ ಕೋವಿಡ್ ಸಾಂಕ್ರಾಮಿಕದಿಂದ ದೇಶವನ್ನು ರಕ್ಷಿಸುತ್ತದೆ ಮತ್ತು ಆರ್ಥಿಕತೆಯನ್ನು ಶೀಘ್ರವಾಗಿ ಹಳಿಗೆ ತರುತ್ತದೆ.
- ಅನುರಾಗ್ ಠಾಕೂರ್, ಹಣಕಾಸು ಖಾತೆ ರಾಜ್ಯ ಸಚಿವ
ಕಚೇರಿಗೆ ಆಗಮಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್
ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಇಲಾಖೆ ಕಚೇರಿಗೆ ಆಗಮಿಸಿದ್ದಾರೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ಬಜೆಟ್ ಅನ್ನು ಇಂದು ಮಂಡಿಸಲಿದ್ದಾರೆ.
ಅನುರಾಗ್ ಠಾಕೂರ್ ವಿಶೇಷ ಪೂಜೆ
ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಇಂದು ಅವರ ನಿವಾಸದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೇಂದ್ರ ಬಜೆಟ್ನಲ್ಲಿ ಕೃಷಿಗೆ ಆದ್ಯತೆ: ಸಚಿವ ಬಿ.ಸಿ.ಪಾಟೀಲ್
ಆರ್ಥಿಕ ಸಮೀಕ್ಷೆ 2020–21: ಇಲ್ಲಿದೆ ಪೂರ್ಣ ಪಠ್ಯ
ಆರ್ಥಿಕ ಸಮೀಕ್ಷೆಯು ಸ್ವಯಂ ಅಭಿನಂದನೆಯನ್ನು ಮಾತ್ರ ಒಳಗೊಂಡಿದೆ: ಚಿದಂಬರಂ
1991ರ ಬಳಿಕ ನಿರ್ಣಾಯಕ ಬಜೆಟ್ ಇದು: ಮನೀಶ್ ತಿವಾರಿ
Union Budget 2021-ಕೇಂದ್ರದ ಬಜೆಟ್ ತಯಾರಿ ಹೇಗೆ?
ಭಾರತದ ಭವಿಷ್ಯ ನಿರ್ಧರಿಸುವಲ್ಲಿ ಬಜೆಟ್ ಅಧಿವೇಶನ ಮಹತ್ವದ್ದಾಗಿದೆ: ಪ್ರಧಾನಿ ಮೋದಿ
ಬಜೆಟ್ ಮೇಲೆ ನಿರೀಕ್ಷೆಗಳ ಭಾರ