ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union budget 2022: ಬಜೆಟ್ ನಿರೀಕ್ಷೆ; ಸೆನ್ಸೆಕ್ಸ್ 603 ಅಂಶ ಜಿಗಿತ

Last Updated 1 ಫೆಬ್ರುವರಿ 2022, 5:32 IST
ಅಕ್ಷರ ಗಾತ್ರ

ಮುಂಬೈ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23 ನೇ ಸಾಲಿನ ಬಜೆಟ್ ಮಂಡಿಸಲು ಕೆಲವೇ ಕ್ಷಣಗಳು ಬಾಕಿ ಇದ್ದು, ಸೆನ್ಸೆಕ್ಸ್ ದಿನದ ಆರಂಭಿಕ ವಹಿವಾಟಿನಲ್ಲಿ 603.39 ಅಂಶ ಜಿಗಿತ ಕಂಡಿದೆ. ಇದರೊಂದಿಗೆ 58,617.56 ಅಂಶಕ್ಕೆ ಏರಿಕೆಯಾಗಿದೆ.

ನಿಫ್ಟಿ 159.25 ಅಂಶ ಹೆಚ್ಚಳಗೊಂಡು 17,499.10ಕ್ಕೆ ಏರಿಕೆಯಾಗಿದೆ.

ಸನ್‌ ಫಾರ್ಮಾ ಕಂಪನಿಯ ಷೇರುಗಳು ಬೆಳಿಗ್ಗೆ 10:10ರ ವೇಳೆಗೆ ಶೇ 3.6ರ ಏರಿಕೆ ದಾಖಲಿಸಿದ್ದು, ಷೇರು ಬೆಲೆ ₹864.3 ತಲುಪಿದೆ. ಇಂಡಸ್ ಇಂಡ್, ಐಸಿಐಸಿಐ ಬ್ಯಾಂಕ್ ಷೇರುಗಳೂ ಶೇ 2ರಷ್ಟು ಹೆಚ್ಚಳ ದಾಖಲಿಸಿವೆ.

ಬಜೆಟ್ ನಿರೀಕ್ಷೆಗಳು ಷೇರು ಮಾರುಕಟ್ಟೆಯ ದಿನದ ಆರಂಭಿಕ ವಹಿವಾಟಿನ ಮೇಲೆ ಪರಿಣಾಮ ಬೀರಿವೆ.

ಬಜೆಟ್ ಕುರಿತ ಸಮಗ್ರ ಅಪ್‌ಡೇಟ್‌ಗೆ ಕ್ಲಿಕ್ ಮಾಡಿ:ಬಜೆಟ್ 2022

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT