ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2021: ವಿದ್ಯುನ್ಮಾನ ಮತ ಯಂತ್ರ ಖರೀದಿಗೆ ₹1 ಸಾವಿರ ಕೋಟಿ

Last Updated 1 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ಹೊಸ ವಿದ್ಯುನ್ಮಾನ ಮತ ಯಂತ್ರ ಖರೀದಿಗೆ ಚುನಾವಣಾ ಆಯೋಗಕ್ಕೆ ₹1000 ಸಾವಿರ ಕೋಟಿ ಅನುದಾನ ದೊರೆಯಲಿದೆ.

ಬ್ಯಾಲಟ್‌ ಯೂನಿಟ್‌ಗಳು, ಕಂಟ್ರೋಲ್‌ ಯುನಿಟ್‌ಗಳು, ವಿವಿಪ್ಯಾಟ್‌ಗೆ ಹಾಗೂ ವಿದ್ಯುನ್ಮಾನ ಯಂತ್ರಗಳ ಖರೀದಿಗೆ ತಗಲುವ ವೆಚ್ಚಕ್ಕೆ ಈ ಅನುದಾನ ನೀಡಲಾಗಿದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೈಗೊಂಡ ಮತದಾರರ ಭಾವಚಿತ್ರದ ಗುರುತಿನ ಚೀಟಿ ಮತ್ತು ಇತರ ವೆಚ್ಚಗಳಿಗಾಗಿ ₹169.30 ಕೋಟಿ ಹಂಚಿಕೆ ಮಾಡಲಾಗಿದೆ.

ಜತೆಗೆ, ನವದೆಹಲಿಯ ದ್ವಾರಕಾನಲ್ಲಿ ನಿರ್ಮಿಸುತ್ತಿರುವ ಚುನಾವಣಾ ಆಯೋಗದ ಕಟ್ಟಡಗಲ ನಿರ್ಮಾಣಕ್ಕೆ ₹249.16ಕೋಟಿ ಹಂಚಿಕೆ ಮಾಡಲಾಗಿದೆ. ಪೋಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾಗಿ ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ವಿಲೇವಾರಿ ಕೈಗೊಳ್ಳುವ ನಿಟ್ಟಿನಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ₹200 ಕೋಟಿಮೀಸಲಿಡಲಾಗಿದೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT