ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2021: ಬರಲಿದೆ ಇ– ಕನ್ನಡ ಕಲಿಕಾ ಅಕಾಡೆಮಿ, ಏನಿದು?

Last Updated 8 ಮಾರ್ಚ್ 2021, 12:10 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಇನ್ನಷ್ಟು ಒಗ್ಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಜೆಟ್‌ನಲ್ಲಿ ₹2 ಕೋಟಿ ಅನುದಾನ ಘೋಷಿಸಿದ್ದಾರೆ.

ಕನ್ನಡ ಭಾಷೆಗೆ ತಾಂತ್ರಿಕ ಪರಿಕರಗಳ ಸೂಟ್‌ ಅಭಿವೃದ್ಧಿಪಡಿಸಲು ಈ ಅನುದಾನ ಒದಗಿಸಲಾಗಿದೆ.

ಕನ್ನಡದ ಕಾಗುಣಿತ ಪರಿಶೀಲನೆ, ಪಠ್ಯದಿಂದ ಪಠಣ, ಪಠಣದಿಂದ ಪಠ್ಯಕ್ಕೆ ಪರಿವರ್ತಿಸುವ ತಂತ್ರಾಂಶ, ಯಾಂತ್ರಿಕ ಅನುವಾದ, ಲಿಪ್ಯಂತರ ಹೈಫನ್‌ಗಳ ಬಳಕೆ, ಅಕ್ಷರಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟಲ್‌ ರೂಪಕ್ಕೆ ಪರಿವರ್ತಿಸುವ ಒಸಿಆರ್‌ ಉಪಕರಣ, ಕನ್ನಡ ಅಕ್ಷರಗಳ ಶೈಲಿಯ ಸಮೂಹ ಮತ್ತು ಕನ್ನಡ ಚಾಟ್‌ ಬಾಟ್‌, ಕನ್ನಡ ಶಬ್ದಕೋಶ, ಇ– ಕನ್ನಡ ಕಲಿಕಾ ಅಕಾಡೆಮಿ ಪೋರ್ಟಲ್‌ಗಳ ಸ್ಥಾಪನೆ ಮೊದಲಾದ ಅಂಶಗಳು ಇದರಲ್ಲಿ ಸೇರಿವೆ.

ಕನ್ನಡ ಲಿಪಿ ಆಧರಿತ ಯುಆರ್‌ಎಲ್‌ಗಳು ಮತ್ತು ಕನ್ನಡ ಇ– ಮೇಲ್‌ ಸೇವೆ ಒದಗಿಸುವ ಪ್ರಸ್ತಾಪವೂ ಬಜೆಟ್‌ನಲ್ಲಿವೆ.

ಕನ್ನಡವನ್ನು ತಂತ್ರಜ್ಞಾನಕ್ಕೆ ಒಗ್ಗಿಸಿಕೊಳ್ಳುವುದಕ್ಕೆ ಹಾಗೂ ತಂತ್ರಜ್ಞಾನದ ನಾಗಾಲೋಟದಲ್ಲಿ ಕನ್ನಡ ಹಿಂದುಳಿಯದಂತೆ ನೋಡಿಕೊಳ್ಳಲು ಇವುಗಳು ಅಗತ್ಯ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT