ಮಂಗಳವಾರ, ಮೇ 18, 2021
30 °C

ಕ್ಯಾಂಪ್ಕೊ: ದಾಖಲೆ ಬೆಲೆಗೆ ಕಾಳುಮೆಣಸು ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಇಲ್ಲಿನ ಕ್ಯಾಂಪ್ಕೊ ಖರೀದಿ ಕೇಂದ್ರಕ್ಕೆ ಕಳೆದ ಒಂದು ತಿಂಗಳಿಂದ ದಾಖಲೆ ಪ್ರಮಾಣದಲ್ಲಿ ಕಾಳುಮೆಣಸು ಆವಕವಾಗುತ್ತಿದೆ. ಎರಡು ವಾರಗಳಿಂದ ಕಾಳುಮೆಣಸಿನ ಧಾರಣೆ ಕೆ.ಜಿ.ಗೆ ₹ 380ಕ್ಕೆ ಕುಸಿದಿದ್ದರೂ, ಕ್ಯಾಂಪ್ಕೊ ಮಾತ್ರ ಬೆಳೆಗಾರರಿಂದ ಕೆ.ಜಿ.ಗೆ ₹ 400ರ ದರದಲ್ಲಿ ಕಾಳುಮೆಣಸು ಖರೀದಿಸಿದೆ.

ಮಂಗಳವಾರ ಒಂದೇ ದಿನ ₹ 3 ಕೋಟಿ ಮೌಲ್ಯದ 750 ಕ್ವಿಂಟಲ್ ಕಾಳುಮೆಣಸನ್ನು ಕ್ಯಾಂಪ್ಕೊ ಕಳಸದ ಕೇಂದ್ರದ ಮೂಲಕ ಖರೀದಿಸಿದೆ. ‘ಕಳಸ ಸುತ್ತಮುತ್ತಲಿನ ಕಾಳುಮೆಣಸು ಉತ್ತಮ ಗುಣಮಟ್ಟ ಮತ್ತು ಗಾತ್ರ ಹೊಂದಿದೆ. ಹೀಗಾಗಿ ಬೆಲೆ ಮತ್ತು ಬೇಡಿಕೆ ಹೆಚ್ಚು’ ಎಂದು ಕ್ಯಾಂಪ್ಕೊ ಕಾಳುಮೆಣಸು ಖರೀದಿ ವಿಭಾಗದ ಮುಖ್ಯಸ್ಥ ಪ್ರೇಮ್‍ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಕ್ಯಾಂಪ್ಕೊ 42 ಖರೀದಿ ಕೇಂದ್ರಗಳ ಮೂಲಕ ಒಟ್ಟು 25 ಸಾವಿರ ಕ್ವಿಂಟಲ್ ಕಾಳುಮೆಣಸು ಖರೀದಿ ಮಾಡಿತ್ತು. ಈ ವರ್ಷ ಅದನ್ನು ನಾಲ್ಕುಪಟ್ಟು ಹೆಚ್ಚಿಸಿ, 1 ಲಕ್ಷ ಕ್ವಿಂಟಲ್‌ ಗುರಿಯನ್ನು ನಿಗದಿಪಡಿಸಿದ್ದೇವೆ’ ಎಂದು ಹೇಳಿದರು.

ಬುಧವಾರದಿಂದ ಕಾಳುಮೆಣಸು ಧಾರಣೆಯನ್ನು ಕೆ.ಜಿ.ಗೆ ₹ 385ಕ್ಕೆ ಕ್ಯಾಂಪ್ಕೊ ನಿಗದಿಪಡಿಸಿದೆ. ಸದ್ಯ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇದು ಗರಿಷ್ಠ ಬೆಲೆ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು