ಈಗಿನ ದುಬಾರಿ ಕಾಲದಲ್ಲಿ ಒಂದು ಸಿನಿಮಾ ನೋಡಲು ಅಥವಾ ಹೊರಗಡೆ ಊಟಕ್ಕೆ ಕುಟುಂಬ ಸಮೇತ ಹೋದರೆ ಸರಿಸುಮಾರು ₹2 ಸಾವಿರ ಖರ್ಚಾಗುತ್ತದೆ. ಆದರೆ, ನೀವು ದಿನವೂ ಕುಡಿಯುವ ಒಂದು ಕಪ್ ಕಾಫಿಯ ಬೆಲೆಗೆ ನಿಮ್ಮ ಕುಟುಂಬಕ್ಕೆ ₹1 ಕೋಟಿ ಮೌಲ್ಯದ ವಿಮಾ ರಕ್ಷಣೆ ನೀಡಲು ಸಾಧ್ಯವಿದೆ. ಹೌದು, ಅವಧಿ ವಿಮೆ (ಟರ್ಮ್ ಇನ್ಶೂರೆನ್ಸ್) ಎಂಬುದು ಕೇವಲ ವಿಮೆಯಲ್ಲ; ಅದು ನಿಮ್ಮ ಕುಟುಂಬದ ಭವಿಷ್ಯಕ್ಕೆ ನೀವು ನೀಡುವ ಅತಿದೊಡ್ಡ ಉಡುಗೊರೆ. ಸರಿಯಾಗಿ ಯೋಜನೆ ರೂಪಿಸಿ ಮುನ್ನಡೆದರೆ ಅಗ್ಗದ ದರದಲ್ಲಿ ಉತ್ತಮ ಅವಧಿ ವಿಮೆ ಕೊಳ್ಳಲು ಸಾಧ್ಯ. ವಿಮಾ ಕಂತಿನ ಭಾರ ಇಳಿಸಿಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕಿದೆ.

ಕಂತಿನ ಭಾರ ಕಡಿಮೆ ಹೇಗೆ?: ಅವಧಿ ವಿಮೆ ಕಂತನ್ನು ಕಡಿಮೆ ಮಾಡುವುದು ಅದು ಹೇಗೆ ಕೆಲಸ ಮಾಡುತ್ತದೆ ಎಂಬ ತಿಳಿವಳಿಕೆಯಿಂದ ಪ್ರಾರಂಭವಾಗುತ್ತದೆ. ಆರೋಗ್ಯ ವಿಮೆಯಂತೆ ವಯಸ್ಸು ಮತ್ತು ವೈದ್ಯಕೀಯ ಹಣದುಬ್ಬರದೊಂದಿಗೆ ಇಲ್ಲಿ ಕಂತು ಹೆಚ್ಚಾಗುವುದಿಲ್ಲ. ಬದಲಾಗಿ, ಒಮ್ಮೆ ನೀವು ಪಾಲಿಸಿ ಖರೀದಿಸಿದರೆ ಅದರ ಕಂತು ಸ್ಥಿರವಾಗಿರುತ್ತದೆ. ಇದರರ್ಥ ಪಾಲಿಸಿ ಖರೀದಿಸುವ ಮೊದಲೇ ನಮಗೆ ಉಳಿತಾಯ ಮಾಡಲು ದೊಡ್ಡ ಅವಕಾಶವಿರುತ್ತದೆ. 2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬಂದಿರುವ ಕೇಂದ್ರ ಸರ್ಕಾರದ ಹೊಸ ನಿಯಮದಂತೆ, ವೈಯಕ್ತಿಕ ಜೀವ ವಿಮಾ ಕಂತಿನ ಮೇಲಿನ ಶೇ 18ರಷ್ಟು ಜಿಎಸ್ಟಿಯನ್ನು ಸಂಪೂರ್ಣವಾಗಿ ತೆಗೆಯಲಾಗಿದೆ. ಇದು ಸಾಮಾನ್ಯ ಜನರಿಗೆ ಅವಧಿ ವಿಮೆಯನ್ನು ಮೊದಲಿಗಿಂತಲೂ ಅಗ್ಗವಾಗಿಸಿದೆ.

ಯೌವನದಲ್ಲೇ ವಿಮೆ ಪಡೆಯುವುದರ ಲಾಭ: ಅವಧಿ ವಿಮೆ ದರವನ್ನು ನಿರ್ಧರಿಸುವಲ್ಲಿ ವಯಸ್ಸು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಎಷ್ಟು ಕಡಿಮೆ ವಯಸ್ಸಿನಲ್ಲಿ ಪಾಲಿಸಿ ಪಡೆಯುತ್ತೀರೋ, ಅಷ್ಟು ಕಡಿಮೆ ಕಂತಿನ ಲಾಭ ನಿಮಗೆ ಸಿಗುತ್ತದೆ. ಏಕೆಂದರೆ ವಿಮಾ ಕಂಪನಿಗಳು ಯುವಕರನ್ನು ಕಡಿಮೆ ಅಪಾಯವಿರುವ ಗ್ರಾಹಕರೆಂದು ಪರಿಗಣಿಸುತ್ತವೆ. ಉದಾಹರಣೆಗೆ, 25 ವರ್ಷ ವಯಸ್ಸಿನ ಯುವಕನು ₹1 ಕೋಟಿ ಮೊತ್ತದ ಪಾಲಿಸಿಯನ್ನು ಖರೀದಿಸಿದರೆ ವಾರ್ಷಿಕ ಸುಮಾರು ₹10,273 ಪಾವತಿಸಬೇಕಾಗುತ್ತದೆ. ಅದೇ ವ್ಯಕ್ತಿ 40ನೇ ವಯಸ್ಸಿನಲ್ಲಿ ಖರೀದಿಸಿದರೆ ವಾರ್ಷಿಕ ₹20,417 ಪಾವತಿಸಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, 40ನೇ ವಯಸ್ಸಿನಲ್ಲಿ ಖರೀದಿಸುವವರು ಕಡಿಮೆ ವರ್ಷಗಳಿಗೆ ಕಂತು ಪಾವತಿಸಿದರೂ, ಒಟ್ಟಾರೆಯಾಗಿ ಅವರು ನೀಡುವ ಒಟ್ಟು ಮೊತ್ತವು ಯುವ ವಯಸ್ಸಿನಲ್ಲಿ ಖರೀದಿಸಿದವರಿಗಿಂತ ಸುಮಾರು ₹1 ಲಕ್ಷದಷ್ಟು ಹೆಚ್ಚಾಗಿರುತ್ತದೆ.

ಸ್ಮಾರ್ಟ್ ಪಾವತಿ ವಿಧಾನ ಮತ್ತು ರಿಯಾಯಿತಿಗಳು: ಕಂತು ಉಳಿಸಲು ಮತ್ತೊಂದು ಸುಲಭದ ದಾರಿ ವಾರ್ಷಿಕ ಪಾವತಿ ವಿಧಾನವನ್ನು ಆರಿಸಿಕೊಳ್ಳುವುದು. ಮಾಸಿಕ ಪಾವತಿಯ ಮೇಲೆ ವಿಮಾ ಕಂಪನಿಗಳು ಸಾಮಾನ್ಯವಾಗಿ ಶೇ 2ರಿಂದ ಶೇ 4ರಷ್ಟು ಹೆಚ್ಚುವರಿ ಶುಲ್ಕ ವಿಧಿಸುತ್ತವೆ. ಇದನ್ನು ತಪ್ಪಿಸಲು ವರ್ಷಕ್ಕೊಮ್ಮೆ ಕಂತು ಪಾವತಿಸುವುದು ಆರ್ಥಿಕವಾಗಿ ಲಾಭದಾಯಕ. ಇದರ ಜೊತೆಗೆ ಆನ್ಲೈನ್ ಮೂಲಕ ಪಾಲಿಸಿ ಖರೀದಿಸುವುದರಿಂದ ಹೆಚ್ಚು ಅನುಕೂಲ ಸಿಗುತ್ತದೆ. ಆನ್ಲೈನ್ ಪಾಲಿಸಿಗಳಿಗೆ ಆಡಳಿತಾತ್ಮಕ ವೆಚ್ಚಗಳು ಕಡಿಮೆ ಇರುವುದರಿಂದ ಕಂಪನಿಗಳು ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುತ್ತವೆ. ಮಹಿಳೆಯರಿಗೂ ಇಲ್ಲಿ ವಿಶೇಷ ಸೌಲಭ್ಯವಿದ್ದು, ಅವರಿಗೆ ಕಂತಿನ ದರದಲ್ಲಿ ಶೇ 10ರಿಂದ ಶೇ 15ರಷ್ಟು ರಿಯಾಯಿತಿ ಲಭ್ಯವಿರುತ್ತದೆ.

ಅಗತ್ಯಕ್ಕೆ ತಕ್ಕಂತೆ ಅವಧಿ ನಿಗದಿಪಡಿಸಿ: ಬಹಳಷ್ಟು ಜನರು 85 ಅಥವಾ 99 ವರ್ಷ ವಯಸ್ಸಿನವರೆಗೆ ರಕ್ಷಣೆ ನೀಡುವ ಪಾಲಿಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಪ್ರಾಯೋಗಿಕವಾಗಿ ಹೇಳುವುದಾದರೆ, ನಿಮಗೆ ವಿಮೆಯ ಅಗತ್ಯವಿರುವುದು ನಿಮ್ಮ ದುಡಿಯುವ ಅವಧಿಯಲ್ಲಿ ಮಾತ್ರ. ನಿಮ್ಮ ನಿವೃತ್ತಿಯ ನಂತರ ಅಥವಾ ನಿಮ್ಮ ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾದ ಮೇಲೆ ವಿಮೆಯ ಅವಶ್ಯಕತೆ ಕಡಿಮೆಯಾಗುತ್ತದೆ. ಆದ್ದರಿಂದ 60 ಅಥವಾ 65 ವರ್ಷ ವಯಸ್ಸಿನವರೆಗೆ ಮಾತ್ರ ರಕ್ಷಣೆ ನೀಡುವ ಪಾಲಿಸಿ ಆರಿಸಿಕೊಂಡರೆ ಕಂತಿನ ಮೊತ್ತ ಗಣನೀಯವಾಗಿ ಕಡಿಮೆಯಾಗುತ್ತದೆ. ಅದೇ ರೀತಿ ಪಾವತಿಸಿದ ಹಣ ವಾಪಸ್ ಬರುವ ‘ರಿಟರ್ನ್ ಆಫ್ ಪ್ರೀಮಿಯಂ’ (ಆರ್ಒಪಿ) ಯೋಜನೆಗಳು ಆಕರ್ಷಕವಾಗಿ ಕಂಡರೂ, ಅವುಗಳ ಕಂತು ತುಂಬಾ ಜಾಸ್ತಿ ಇರುತ್ತದೆ. ಅದರ ಬದಲು ಸಾಮಾನ್ಯ ಅವಧಿ ವಿಮೆ ಖರೀದಿಸಿ, ಉಳಿದ ಹಣವನ್ನು ಬೇರೆಡೆ ಹೂಡಿಕೆ ಮಾಡುವುದು ಜಾಣತನ.

ಸತ್ಯ ಹೇಳುವುದು ಮುಖ್ಯ: ಕಂತಿನ ಮೊತ್ತ ಕಡಿಮೆ ಇರಲಿ ಎಂಬ ಕಾರಣಕ್ಕೆ ನಿಮ್ಮ ಆರೋಗ್ಯದ ಸ್ಥಿತಿ, ಜೀವನಶೈಲಿ ಅಥವಾ ಧೂಮಪಾನ ಅಭ್ಯಾಸದ ಬಗ್ಗೆ ವಿಮಾ ಕಂಪನಿಗೆ ತಪ್ಪು ಮಾಹಿತಿ ನೀಡಬೇಡಿ. ಒಂದು ವೇಳೆ ಮಾಹಿತಿ ಸುಳ್ಳೆಂದು ತಿಳಿದು ಬಂದರೆ, ಕ್ಲೇಮ್ ಸಮಯದಲ್ಲಿ ವಿಮಾ ಕಂಪನಿಯು ಹಣ ನೀಡಲು ನಿರಾಕರಿಸಬಹುದು. ಇದರಿಂದ ನೀವು ವರ್ಷಗಟ್ಟಲೆ ಕಟ್ಟಿದ ಹಣ ವ್ಯರ್ಥವಾಗುವುದಲ್ಲದೆ, ನಿಮ್ಮ ಕುಟುಂಬಕ್ಕೆ ಸಿಗಬೇಕಾದ ಆರ್ಥಿಕ ಭದ್ರತೆಯೂ ಇಲ್ಲದಂತಾಗುತ್ತದೆ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ನಿಮ್ಮ ಪಾಲಿಸಿಯನ್ನು ಭದ್ರವಾಗಿರಿಸುತ್ತದೆ. ಹಾಗೆಯೇ, ಕೇವಲ ಕಡಿಮೆ ಬೆಲೆಯ ಪಾಲಿಸಿಯನ್ನು ಹುಡುಕುವ ಬದಲು, ಕಂಪನಿಯ ಕ್ಲೇಮ್ ಸೆಟಲ್ಮೆಂಟ್ ಅನುಪಾತ ಮತ್ತು ಒಟ್ಟಾರೆ ಸೇವೆಯನ್ನು ನೋಡಿ ಪಾಲಿಸಿ ಆರಿಸಿಕೊಳ್ಳಿ.

ಅವಧಿ ವಿಮೆ ಎಂಬುದು ಪ್ರತಿ ಕುಟುಂಬದ ಅಡಿಪಾಯವಿದ್ದಂತೆ. ಸರಿಯಾದ ವಯಸ್ಸಿನಲ್ಲಿ, ಸೂಕ್ತವಾದ ಅವಧಿಗೆ ಮತ್ತು ಪ್ರಾಮಾಣಿಕ ಮಾಹಿತಿಯೊಂದಿಗೆ ಪಾಲಿಸಿ ಖರೀದಿಸಿದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಗರಿಷ್ಠ ಲಾಭ ಪಡೆಯಬಹುದು. ಇಂದು ನೀವು ಮಾಡುವ ಒಂದು ಸಣ್ಣ ಹೂಡಿಕೆ ನಾಳೆ ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬದ ಆರ್ಥಿಕ ಸ್ವಾತಂತ್ರ್ಯವನ್ನು ಕಾಪಾಡುತ್ತದೆ. ವಿಳಂಬ ಮಾಡದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಯೋಜನೆಗಳನ್ನು ಹೋಲಿಸಿ ನೋಡಿ, ನಿಮ್ಮ ಬಜೆಟ್ಗೆ ಹೊಂದುವ ಉತ್ತಮ ಅವಧಿ ವಿಮೆಯನ್ನು ಆದಷ್ಟು ಬೇಗ ಆರಿಸಿಕೊಳ್ಳಿ.

ಅಗತ್ಯಕ್ಕೆ ತಕ್ಕಂತೆ ಅವಧಿ ನಿಗದಿಪಡಿಸಿ

ಬಹಳಷ್ಟು ಜನರು 85 ಅಥವಾ 99 ವರ್ಷ ವಯಸ್ಸಿನವರೆಗೆ ರಕ್ಷಣೆ ನೀಡುವ ಪಾಲಿಸಿ ಆಯ್ಕೆ
ಮಾಡಿಕೊಳ್ಳುತ್ತಾರೆ. ಆದರೆ ಪ್ರಾಯೋಗಿಕವಾಗಿ ಹೇಳುವುದಾದರೆ, ನಿಮಗೆ ವಿಮೆಯ
ಅಗತ್ಯವಿರುವುದು ನಿಮ್ಮ ದುಡಿಯುವ ಅವಧಿಯಲ್ಲಿ ಮಾತ್ರ. ನಿಮ್ಮ ನಿವೃತ್ತಿಯ ನಂತರ ಅಥವಾ ನಿಮ್ಮ ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾದ ಮೇಲೆ ವಿಮೆಯ ಅವಶ್ಯಕತೆ ಕಡಿಮೆಯಾಗುತ್ತದೆ. ಆದ್ದರಿಂದ
60 ಅಥವಾ 65 ವರ್ಷ ವಯಸ್ಸಿನವರೆಗೆ ಮಾತ್ರ ರಕ್ಷಣೆ ನೀಡುವ ಪಾಲಿಸಿ ಆರಿಸಿಕೊಂಡರೆ ಕಂತಿನ ಮೊತ್ತ ಗಣನೀಯವಾಗಿ ಕಡಿಮೆಯಾಗುತ್ತದೆ. ಅದೇ ರೀತಿ ಪಾವತಿಸಿದ ಹಣ ವಾಪಸ್ ಬರುವ ‘ರಿಟರ್ನ್ ಆಫ್ ಪ್ರೀಮಿಯಂ’ (ಆರ್ಒಪಿ) ಯೋಜನೆಗಳು ಆಕರ್ಷಕವಾಗಿ ಕಂಡರೂ, ಅವುಗಳ ಕಂತು ತುಂಬಾ ಜಾಸ್ತಿ ಇರುತ್ತದೆ. ಅದರ ಬದಲು ಸಾಮಾನ್ಯ ಅವಧಿ ವಿಮೆ ಖರೀದಿಸಿ, ಉಳಿದ ಹಣವನ್ನು ಬೇರೆಡೆ ಹೂಡಿಕೆ ಮಾಡುವುದು ಜಾಣತನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.