ಭಾನುವಾರ, ಅಕ್ಟೋಬರ್ 17, 2021
23 °C

₹900ರ ಗಡಿ ಮುಟ್ಟಿದ ಎಲ್‌ಪಿಜಿ ಸಿಲಿಂಡರ್‌; ಪೆಟ್ರೋಲ್‌ ದರ ಮತ್ತೆ ಹೆಚ್ಚಳ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ ದರ ಬುಧವಾರ ಮತ್ತೆ ಏರಿಕೆಯಾಗಿದೆ. ಈಗ ಎಲ್‌ಪಿಜಿ ದರ ₹15ರಷ್ಟು ಹೆಚ್ಚಳ ಮಾಡುವ ಮೂಲಕ ಪ್ರತಿ ಸಿಲಿಂಡರ್‌ ಬೆಲೆ ₹900 ಸಮೀಪಿಸಿದೆ.

ನವದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ದರ ₹899.50ಕ್ಕೆ ಏರಿಕೆಯಾಗಿದೆ. 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ₹502 ಆಗಿದ್ದು, ಇವತ್ತಿನಿಂದಲೇ ಹೊಸ ದರ ಅನ್ವಯವಾಗಿದೆ.

 

ಮಂಗಳವಾರ ಇಂಧನ ದರ ಏರಿಕೆಯಾದ ಬೆನ್ನಲ್ಲೇ ಅನಿಲ ದರದಲ್ಲೂ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ 102.39 ರೂಪಾಯಿ ಮತ್ತು ಡೀಸೆಲ್‌ 90.77 ರೂಪಾಯಿ ತಲುಪಿತ್ತು. ಬುಧವಾರ ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳವಾಗಿದೆ.

 

ದೆಹಲಿಯಲ್ಲಿ ಪೆಟ್ರೋಲ್‌ ದರ 30 ಪೈಸೆ ಹೆಚ್ಚಳವಾಗಿ ₹102.94 ಮತ್ತು ಡೀಸೆಲ್‌ 35 ಪೈಸೆ ಹೆಚ್ಚಳವಾಗಿ ₹91.42 ಆಗಿದೆ. ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹108.96, ಡೀಸೆಲ್‌ಗೆ ₹99.17; ಚೆನ್ನೈನಲ್ಲಿ ಪೆಟ್ರೋಲ್‌ ₹100.49, ಡೀಸೆಲ್‌ ₹95.93; ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ₹103.65 ಮತ್ತು ಡೀಸೆಲ್‌ ಬೆಲೆ ₹94.53 ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್‌ ₹106.52, ಡೀಸೆಲ್‌ ₹97.03 ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು