ಸಿಂಡಿಕೇಟ್‌ ಬ್ಯಾಂಕ್‌ಗೆ ನಷ್ಟ

7

ಸಿಂಡಿಕೇಟ್‌ ಬ್ಯಾಂಕ್‌ಗೆ ನಷ್ಟ

Published:
Updated:

ನವದೆಹಲಿ : ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್‌ ಬ್ಯಾಂಕ್‌ ₹ 1,282 ಕೋಟಿ  ನಷ್ಟ ಅನುಭವಿಸಿದೆ.

ವಸೂಲಿಯಾಗದ ಸಾಲ (ಎನ್‌ಪಿಎ) ಹೆಚ್ಚಿರುವುದರಿಂದ ನಷ್ಟವಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿಯೂ ₹ 263 ಕೋಟಿ ನಷ್ಟ ಕಂಡಿತ್ತು.

‘ಬ್ಯಾಂಕ್‌ನ ವರಮಾನ ₹ 6,171 ಕೋಟಿಯಿಂದ ₹ 5,637 ಕೋಟಿಗೆ ಇಳಿಕೆಯಾಗಿದೆ. ಬಡ್ಡಿ ವರಮಾನ ಸಹ 5,484 ಕೋಟಿಯಿಂದ ₹ 5,257 ಕೋಟಿಗೆ ಇಳಿದಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮೆಲ್ವಿನ್‌ ರೇಗೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತ್ರೈಮಾಸಿಕದಲ್ಲಿ ತೆಗೆದಿರಿಸಿರುವ ಮೊತ್ತ ₹ 1,3785 ಕೋಟಿಯಿಂದ ₹ 1,774 ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆ ಮೊತ್ತ ₹ 1,334 ಕೋಟಿಯಿಂದ ₹ 2,327 ಕೋಟಿಗೆ ತಲುಪಿದೆ.

₹ 13, 011 ಕೋಟಿ
2018–19ರ ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಎನ್‌ಪಿಎ

₹ 12, 188 ಕೋಟಿ
2017–18ರ ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಎನ್‌ಪಿಎ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !