₹ 6,859 ಕೋಟಿ ಹೂಡಿಕೆಗೆ ಸುಜುಕಿ ನಿರ್ಧಾರ

7
ಬಿಡದಿಯ ಟೊಯೋಟ ಘಟಕದಲ್ಲಿ ಮಾರುತಿ ಕಾರ್‌ ತಯಾರಿಕೆ

₹ 6,859 ಕೋಟಿ ಹೂಡಿಕೆಗೆ ಸುಜುಕಿ ನಿರ್ಧಾರ

Published:
Updated:

ಬೆಂಗಳೂರು: ನಗರದ ಹೊರವಲಯದ ಬಿಡದಿಯಲ್ಲಿನ ಟೊಯೋಟ ಪ್ರಯಾಣಿಕರ ಕಾರ್‌ ತಯಾರಿಕಾ ಘಟಕದಲ್ಲಿ ಶೀಘ್ರದಲ್ಲಿಯೇ ಮಾರುತಿ ಸುಜುಕಿಯ ಕಾರ್‌ಗಳೂ ತಯಾರಾಗಲಿವೆ.

ತನ್ನ ಕಾರುಗಳ ತಯಾರಿಕೆ ಉದ್ದೇಶಕ್ಕೆ ಸುಜುಕಿ ಮೋಟರ್‌ ಕಾರ್ಪೊರೇಷನ್‌, ಈ ಘಟಕದಲ್ಲಿ ₹ 6,859 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಲಿದೆ. ತಯಾರಿಕಾ ಘಟಕಗಳನ್ನು ಪರಸ್ಪರ ಬಳಸಿಕೊಂಡು ದೇಶಿ ಮಾರುಕಟ್ಟೆಯಲ್ಲಿನ ಪಾಲು ಹೆಚ್ಚಿಸಿಕೊಳ್ಳಲು ಎರಡೂ ಸಂಸ್ಥೆಗಳು ಒಪ್ಪಂದಕ್ಕೆ ಬಂದಿವೆ.

‘ಟೊಯೋಟ ಘಟಕದ ವಾರ್ಷಿಕ ಕಾರ್‌ ತಯಾರಿಕಾ ಸಾಮರ್ಥ್ಯವು 3.1 ಲಕ್ಷದಷ್ಟಿದೆ. ಸಂಸ್ಥೆಯು ಸದ್ಯಕ್ಕೆ ಇದರ ಅರ್ಧದಷ್ಟನ್ನು ಮಾತ್ರ ಉಪಯೋಗಿಸುತ್ತಿದೆ. ಲಭ್ಯ ಇರುವ ಹೆಚ್ಚುವರಿ ತಯಾರಿಕಾ ಸಾಮರ್ಥ್ಯವನ್ನು ತನ್ನ ಕಾರ್‌ಗಳ ತಯಾರಿಕೆಗೆ ಬಳಸಿಕೊಳ್ಳುವ ಉದ್ದೇಶಕ್ಕೆ ಸುಜುಕಿ ಮೋಟರ್‌ ಬಂಡವಾಳ ಹೂಡಿಕೆ ಮಾಡಲಿದೆ’ ಎಂದು ಜಪಾನಿನ ಕಾನ್ಸುಲ್‌ ಜನರಲ್‌ ಟಕಯುಕಿ ಕಿಟಗವಾ ಶುಕ್ರವಾರ ಇಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

20 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಟೊಯೋಟದ ಈ ಘಟಕದ ತಯಾರಿಕಾ ಸಾಮರ್ಥ್ಯ ಬಳಸಿಕೊಳ್ಳಲು ಮಾರುತಿ ಸುಜುಕಿ ಈ ಬಂಡವಾಳ ಹೂಡಿಕೆ ಮಾಡಲಿದೆ.

‘ಬಿಡದಿಗೆ ಮಾರುತಿ ಕಾಲಿಡುತ್ತಿದ್ದಂತೆ, ಸಂಸ್ಥೆಯ ಬಿಡಿಭಾಗ ತಯಾರಿಕಾ ಸಂಸ್ಥೆಗಳೂ ರಾಜ್ಯಕ್ಕೆ ಬರಲಿವೆ. ತುಮಕೂರಿನಲ್ಲಿನ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ಈ ಕಂಪನಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಇದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಲಿದೆ. ಹೊಸ ಉದ್ಯೋಗ ಅವಕಾಶಗಳೂ ಸೃಷ್ಟಿಯಾಗಲಿವೆ’ ಎಂದು ಅವರು ಹೇಳಿದ್ದಾರೆ.

ಈ ಘಟಕದಲ್ಲಿ ಮಾರುತಿಯು ಹೈಬ್ರಿಡ್‌ ವಾಹನಗಳನ್ನು ಮತ್ತು 2022ರ ವೇಳೆಗೆ ಹೆಚ್ಚು ದಕ್ಷತೆಯ ಗ್ಯಾಸೊಲಿನ್ ಎಂಜಿನ್‌ಗಳನ್ನು ತಯಾರಿಸಲಿದೆ.

2030ರ ವೇಳೆಗೆ ದೇಶದಲ್ಲಿ ವರ್ಷಕ್ಕೆ 50 ಲಕ್ಷ ಕಾರ್‌ಗಳನ್ನು ಮಾರಾಟ ಮಾಡಲು ಮಾರುತಿ ಸುಜುಕಿ ಇಂಡಿಯಾ ಸಂಸ್ಥೆ ಗುರಿ ನಿಗದಿಪಡಿಸಿದೆ. ಸಂಸ್ಥೆಯು ಸದ್ಯಕ್ಕೆ ತನ್ನ ಮೂರು ತಯಾರಿಕಾ ಘಟಕಗಳಿಂದ ವರ್ಷಕ್ಕೆ 17 ಲಕ್ಷ ಕಾರ್‌ಗಳನ್ನು ತಯಾರಿಸುತ್ತಿದೆ.

 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !