ಶನಿವಾರ, ನವೆಂಬರ್ 16, 2019
24 °C
ರಾಜ್ಯಕ್ಕೆ ಇಂದು ಅಂತರ್‌ ಸಚಿವಾಲಯ ತಂಡ

ದೆಹಲಿ ಗ್ರಾಹಕರಿಗೆ ರಾಜ್ಯದ ಈರುಳ್ಳಿ: ಕೇಂದ್ರ ಸರ್ಕಾರದ ನಿರ್ಧಾರ.

Published:
Updated:

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಎರಡು ತಿಂಗಳಿಂದ ಪ್ರತಿ ಕಿಲೊ ಈರುಳ್ಳಿಗೆ ₹ 80ರಿಂದ ₹ 100 ತೆರುತ್ತಿರುವ ಗ್ರಾಹಕರಿಗೆ ನೆರವಾಗಲು ಕರ್ನಾಟಕ ಮತ್ತು ರಾಜಸ್ಥಾನಗಳಿಂದ ಈರುಳ್ಳಿ ಖರೀದಿಸಲು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯ ಬುಧವಾರ ನಡೆಸಿದ ಸಭೆಯಲ್ಲಿ ನಿರ್ಧರಿಸಿದೆ.

ಅಂತರ್‌ ಸಚಿವಾಲಯ ಅಧಿಕಾರಿಗಳ ಪ್ರತ್ಯೇಕ ತಂಡಗಳನ್ನು ಈ ರಾಜ್ಯಗಳಿಗೆ ಕಳುಹಿಸಲಿದ್ದು, ತಂಡದ ಜೊತೆ ತನ್ನ ಅಧಿಕಾರಿಗಳನ್ನೂ ಕಳುಹಿಸಲು ದೆಹಲಿ ಸರ್ಕಾರಕ್ಕೆ ಸೂಚಿಸಲಿದೆ.

ಭೇಟಿ ವೇಳೆ ಅಧಿಕಾರಿಗಳು ಈರುಳ್ಳಿ ವ್ಯಾಪಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಲಭ್ಯವಿರುವ ಈರುಳ್ಳಿ ಬೆಳೆಗಾರರನ್ನು ಪ್ರೋತ್ಸಾಹಿಸಲು ದರ ನಿಗದಿಪಡಿಸಲು ತಂಡಕ್ಕೆ ಸೂಚಿಸಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರತಿಕ್ರಿಯಿಸಿ (+)