ಮಂಗಳವಾರ, ಸೆಪ್ಟೆಂಬರ್ 24, 2019
29 °C
ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 100 ದಿನ

ಉತ್ಸಾಹ ಮೂಡಿಸದ ಆರ್ಥಿಕ ಸಾಧನೆ

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (2.0) ನೇತೃತ್ವದಲ್ಲಿನ ಕೇಂದ್ರ ಸರ್ಕಾರವು 100 ದಿನಗಳ ಸಾಧನೆಯಲ್ಲಿ ರಾಜಕೀಯ ನೆಲೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದೆ. ಆದರೆ, ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧನೆ ಮಾತ್ರ ಉತ್ಸಾಹದಾಯಕವಾಗಿಲ್ಲ.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ವೃದ್ಧಿ ದರವು 6 ವರ್ಷಗಳ ಹಿಂದಿನ ಕನಿಷ್ಠ ಮಟ್ಟವಾದ ಶೇ 5ಕ್ಕೆ ಕುಸಿದಿದ್ದರೆ, ಹಣದುಬ್ಬರ ಏರುಗತಿಯಲ್ಲಿದೆ. 8 ಮೂಲ ಸೌಕರ್ಯಗಳ ವಲಯಗಳ ಬೆಳವಣಿಗೆ ಮಂದಗತಿಯಲ್ಲಿದೆ. ತಯಾರಿಕಾ ವಲಯದ ಸಾಧನೆ ಇಳಿಕೆ ಹಾದಿಯಲ್ಲಿದೆ.

Post Comments (+)